ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ 
ದೇಶ

ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ರಾಹುಲ್ ಗಾಂಧಿ ನೀಡಿದ ಭರವಸೆಗಳೇನು?

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಮತ್ತು ಇತರ ಹಿರಿಯ ನಾಯಕರು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಬೊಕಜನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಅಸ್ಸಾಂ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಇದರಲ್ಲಿ ಆಡಳಿತ, ಗುರುತು ಮತ್ತು ಆರೋಗ್ಯ ಸೇರಿದಂತೆ 11 ಪ್ರಮುಖವಾಗಿ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಾಗಿದೆ.

ಇಂದು ಬೊಕಜನ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಮತ್ತು ಇತರ ಹಿರಿಯ ನಾಯಕರು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಆಡಳಿತ, ಗುರುತು, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕೀಕರಣ, ಕೃಷಿ, ಗ್ರಾಮೀಣ ಮತ್ತು ನಗರಾಭಿವೃದ್ಧಿ, ಹವಾಮಾನ ಬದಲಾವಣೆ ಹಾಗೂ ಅಸ್ಸಾಂ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ 11 ಭರವೆಸೆಗಳನ್ನು ನೀಡಲಾಗಿದೆ.

ಮಾರ್ಚ್ 29 ರಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯ ಸಮಯದಲ್ಲಿ ಕಾಂಗ್ರೆಸ್ ಈಗಾಗಲೇ "ಐದು ಗ್ಯಾರಂಟಿ"ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಜುಬೀನ್ ಗರ್ಗ್ ಸಾವಿನ ಪ್ರಕರಣದ ತನಿಖೆ, ಮಹಿಳೆಯರ ಕಲ್ಯಾಣ, ಎಲ್ಲರಿಗೂ ಆರೋಗ್ಯ ವಿಮೆ, ಭೂ ಹಕ್ಕುಗಳು ಮತ್ತು ನ್ಯಾಯದ ಮೇಲೆ ಕೇಂದ್ರೀಕರಿಸಲಾಗಿತ್ತು.

ಮಹಿಳೆಯರಿಗೆ ಮಾಸಿಕ ನಗದು ವರ್ಗಾವಣೆ ಮತ್ತು ವ್ಯವಹಾರ ಆರಂಭಿಸಲು ಅಥವಾ ವಿಸ್ತರಿಸಲು ಇಚ್ಛಿಸುವ ಮಹಿಳೆಯರಿಗೆ ಹೆಚ್ಚುವರಿ 50,000 ರೂ. ಸಹಾಯ ಸೇರಿದಂತೆ ಪಕ್ಷದ 'ಐದು ಗ್ಯಾರಂಟಿಗಳನ್ನು' ಘೋಷಿಸಲಾಗಿದೆ.

ರಾಜ್ಯದ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ನಗದು ರಹಿತ ಆರೋಗ್ಯ ವಿಮೆ, 10 ಲಕ್ಷ ಸ್ಥಳೀಯ ಜನರಿಗೆ ಶಾಶ್ವತ ಭೂ ಪಟ್ಟಾ ಮತ್ತು ರಾಜ್ಯದ ಹಿರಿಯ ನಾಗರಿಕರಿಗೆ ತಿಂಗಳಿಗೆ 1,250 ರೂ. ನೀಡುವುದಾಗಿ ಖರ್ಗೆ ಭರವಸೆ ನೀಡಿದರು.

"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 100 ದಿನಗಳಲ್ಲಿ ಜುಬೀನ್ ಗರ್ಗ್ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಿ, ನ್ಯಾಯ ಒದಗಿಸುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ" ಎಂದು ಖರ್ಗೆ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI

ಅಮೆರಿಕಕ್ಕೆ ಸೆಡ್ಡು: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪ್ರಮುಖ ಹೆಜ್ಜೆ; ಹೊಸ ಪ್ರಾಧಿಕಾರ ರಚನೆ!

ಬಲೂಚಿಸ್ತಾನದಲ್ಲಿ ಭೀಕರ ಗುಂಡಿನ ಕಾಳಗ: TTE ಸಂಘಟನೆಯ 35 ಉಗ್ರರ ಹತ್ಯೆ, ಪಾಕ್ ಸೇನೆಯಲ್ಲೂ ಸಾವು-ನೋವು

ಭಾರತದ ಮೊದಲ ಬುಲೆಟ್ ರೈಲಿನ 'ಫಸ್ಟ್ ಲುಕ್' ರಿಲೀಸ್‌: ಸಂಚಾರ ಯಾವಾಗಿಂದ ಆರಂಭ?

ಇರಾನ್‌ನ ಪರಿಷ್ಕೃತ 14 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಸಲ್ಲಿಸಿದ ಪಾಕಿಸ್ತಾನ; ಒಪ್ಪಿಕೊಳ್ಳುತ್ತಾರಾ ಟ್ರಂಪ್?

SCROLL FOR NEXT