ರಾಘವ್ ಚಡ್ಡಾ 
ದೇಶ

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

ಪ್ರತಿಪಕ್ಷಗಳ ಸಭಾತ್ಯಾಗದಲ್ಲಿ ಭಾಗವಹಿಸಿಲ್ಲ ಎಂಬ ಎಎಪಿ ಅಧ್ಯಕ್ಷ ಸೌರಭ್ ಭಾರಧ್ವಾಜ್ ಅವರ ಹೇಳಿಕೆಗಳನ್ನು ಚಡ್ಡಾ ತಳ್ಳಿಹಾಕಿದ್ದು, ಈ ಆರೋಪ 'ಶುದ್ಧ ಸುಳ್ಳು' ಎಂದು ಹೇಳಿದ್ದಾರೆ.

ನವದೆಹಲಿ: 'ನಾನು ಸಂಸತ್ತಿಗೆ ಹೋಗುವುದು ಪರಿಣಾಮ ಬೀರಲು ಹೊರತು, ಗದ್ದಲ ಸೃಷ್ಟಿಸಲು ಅಲ್ಲ' ಎಂದು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಶನಿವಾರ ಹೇಳಿದ್ದಾರೆ. ಆಮ್ ಆದ್ಮಿ ಪಕ್ಷವು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ತಿರಸ್ಕರಿಸಿರುವ ಅವರು, 'ಸುಳ್ಳು' ಮತ್ತು 'ಸಂಘಟಿತ ಅಭಿಯಾನ'ದ ಭಾಗ ಎಂದು ಕರೆದಿದ್ದಾರೆ.

ಪ್ರತಿಪಕ್ಷಗಳ ಸಭಾತ್ಯಾಗದಲ್ಲಿ ಭಾಗವಹಿಸಿಲ್ಲ ಎಂಬ ಎಎಪಿ ಅಧ್ಯಕ್ಷರ ಹೇಳಿಕೆಗಳನ್ನು ಚಡ್ಡಾ ತಳ್ಳಿಹಾಕಿದ್ದು, ಈ ಆರೋಪ 'ಶುದ್ಧ ಸುಳ್ಳು' ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ಅಧ್ಯಕ್ಷ ಸೌರಭ್ ಭಾರದ್ವಾಜ್, ಸಂಸತ್ತಿನಲ್ಲಿ ಹಲವಾರು ವಿಷಯಗಳಲ್ಲಿ ಪಕ್ಷದ ಮಾರ್ಗವನ್ನು ಅನುಸರಿಸಲು ಚಡ್ಡಾ ವಿಫಲರಾಗಿದ್ದಾರೆ ಮತ್ತು ಪ್ರಮುಖ ವಿಷಯಗಳ ಕುರಿತು ವಿರೋಧ ಪಕ್ಷದ ಸಭಾತ್ಯಾಗಗಳಲ್ಲಿ ಭಾಗವಹಿಸಿಲ್ಲ ಎಂದು ದೂರಿದ್ದಾರೆ.

ತಮ್ಮ ವಿರೋಧಿಗಳು ತಾವು ಭಾಗವಹಿಸದ ಒಂದೇ ಒಂದು ಪ್ರಕರಣವನ್ನು ಉಲ್ಲೇಖಿಸುವಂತೆ ಸವಾಲು ಹಾಕಿದ ಅವರು, ಸಂಸತ್ತಿನ ಕಲಾಪಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ ಎಂದು ಹೇಳಿದರು.

ಮುಖ್ಯ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ ನಿರ್ಣಯಕ್ಕೆ ಸಹಿ ಹಾಕಲು ತಾವು ನಿರಾಕರಿಸಿದ್ದಾರೆ ಎಂಬ ಮತ್ತೊಂದು ಆರೋಪವನ್ನೂ ತಳ್ಳಿಹಾಕಿದ ಚಡ್ಡಾ, ಯಾವುದೇ ಪಕ್ಷದ ನಾಯಕರು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಅದಕ್ಕೆ ಸಹಿ ಹಾಕುವಂತೆ ತಮ್ಮನ್ನು ಕೇಳಿಲ್ಲ. ತಮ್ಮ ಪಕ್ಷದ ಇತರ ಹಲವಾರು ಸಂಸದರು ಸಹ ಈ ನಿರ್ಣಯಕ್ಕೆ ಸಹಿ ಹಾಕಿಲ್ಲ ಎಂದು ಹೇಳಿದರು.

ಸಂಸತ್ತಿನಲ್ಲಿ ತಮ್ಮ ಗಮನ ಜಿಎಸ್‌ಟಿ, ಆದಾಯ ತೆರಿಗೆ, ದೆಹಲಿಯಲ್ಲಿ ವಾಯು ಮಾಲಿನ್ಯ, ಪಂಜಾಬ್‌ನಲ್ಲಿ ನೀರಿನ ಕಾಳಜಿ, ಸಾರ್ವಜನಿಕ ಆರೋಗ್ಯ ರಕ್ಷಣೆ, ಶಿಕ್ಷಣ, ರೈಲ್ವೆ ಪ್ರಯಾಣಿಕರ ಸಮಸ್ಯೆಗಳು, ಮುಟ್ಟಿನ ಆರೋಗ್ಯ, ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವತ್ತ ಇತ್ತು ಎಂದು ಸಂಸದರು ಹೇಳಿದರು.

ತೆರಿಗೆದಾರರ ಹಣದ ಮೇಲೆ ನಡೆಯುವ ಸಂಸತ್ತು 'ಗದ್ದಲ ಸೃಷ್ಟಿಸಲು ಇರುವುದಲ್ಲ, ಹೀಗಾಗಿ ಪರಿಣಾಮ ಸೃಷ್ಟಿಸಲು' ತಾನು ಸಂಸತ್ತಿಗೆ ಹೋಗುತ್ತೇನೆ ಮತ್ತು ಜನರ ಕಳವಳಗಳನ್ನು ಎತ್ತಿ ತೋರಿಸುವುದು ತನ್ನ ಜವಾಬ್ದಾರಿ. ಪ್ರತಿಯೊಂದು ಸುಳ್ಳನ್ನೂ ಬಹಿರಂಗಪಡಿಸಲಾಗುವುದು ಎಂದು ಚಡ್ಡಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

IPL 2026, DC vs MI: ಹಾರ್ದಿಕ್ ಪಾಂಡ್ಯ ಔಟ್, ಸೂರ್ಯಕುಮಾರ್ ಯಾದವ್‌ಗೆ ಮುಂಬೈ ನಾಯಕತ್ವ; ಡೆಲ್ಲಿ ಬೌಲಿಂಗ್ ಆಯ್ಕೆ!

ಆತಂಕ ಸೃಷ್ಟಿಸಿದ ಇರಾನ್ ನಡೆ; ಹಾರ್ಮುಜ್ ನಂತರ, ಜಾಗತಿಕ ಆರ್ಥಿಕತೆಯ ಜೀವನಾಡಿ 'ಬಾಬ್ ಅಲ್-ಮಂಡೇಬ್' ಜಲಸಂಧಿ ಬಂದ್ ಮಾಡುವ ಸುಳಿವು!

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

SCROLL FOR NEXT