ಫರ್ಮಾನ್ ಖಾನ್ ಜೊತೆ ಮೊನಾಲಿಸಾ ವಿವಾಹ 
ದೇಶ

ಕುಂಭಮೇಳ ಸುಂದರಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್‌: ಅಪ್ರಾಪ್ತೆ ಎಂದು ಸಾಬೀತು; ಪತಿ ಫರ್ಮಾನ್ ವಿರುದ್ಧ ಪೋಕ್ಸೋ ಕೇಸ್!

ತನಿಖೆಯಲ್ಲಿ ಮೊನಾಲಿಸಾ ಅಪ್ರಾಪ್ತೆ ಎಂದು ದೃಢಪಟ್ಟ ನಂತರ ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಅವರ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.

ನವದೆಹಲಿ: ಕಳೆದ ವರ್ಷ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಫೋಟೋ ವೈರಲ್ ಆಗುವ ಮೂಲಕ ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದ ಯುವತಿ ಮೊನಾಲಿಸಾ ಭೋಂಸ್ಲೆ ಅವರು ಇತ್ತೀಚಿಗೆ ಕೇರಳದಲ್ಲಿ ಮುಸ್ಲಿಂ ಪ್ರೇಮಿ ಫರ್ಮನ್ ಖಾನ್ ಅವರನ್ನು ಮದುವೆಯಾಗಿದ್ದಾರೆ.

ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹವಾಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅವರ ಅಂತರ್ಧರ್ಮೀಯ ವಿವಾಹ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ.

ತನಿಖೆಯಲ್ಲಿ ಮೊನಾಲಿಸಾ ಅಪ್ರಾಪ್ತೆ ಎಂದು ದೃಢಪಟ್ಟ ನಂತರ ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಅವರ ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಕಾನೂನುಬಾಹಿರ ವಿವಾಹಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಫರ್ಮಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ವಿವರವಾದ ತನಿಖೆಯ ನಂತರ, ಮೊನಾಲಿಸಾ ಮದುವೆಯ ಸಮಯದಲ್ಲಿ ಅಪ್ರಾಪ್ತೆಯಾಗಿದ್ದರು ಎಂಬುದು ದೃಢಪಟ್ಟಿದೆ.

ಮೊನಾಲಿಸಾ ಮತ್ತು ಫರ್ಮನ್ ಖಾನ್ ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದು ಲವ್ ಜಿಹಾದ್ ಎಂಬ ಆರೋಪಗಳು ಕೇಳಿಬಂದಿದವು. ಅಲ್ಲದೆ, ಅವರ ವಯಸ್ಸು ಸೇರಿದಂತೆ ಹಲವು ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ, ಕೇರಳ ಮತ್ತು ಮಧ್ಯಪ್ರದೇಶದಲ್ಲಿ ವಿಸ್ತಾರವಾದ ತನಿಖೆ ಆರಂಭಿಸಿತ್ತು.

ಮಹೇಶ್ವರದ ಅಧಿಕೃತ ಆಸ್ಪತ್ರೆ ದಾಖಲೆಗಳ ಪ್ರಕಾರ, ಮೋನಾಲಿಸಾ ಪಾರಧಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಡಿಸೆಂಬರ್ 30, 2009 ರಂದು ಜನಿಸಿದ್ದಾರೆ. ಮಾರ್ಚ್ 11, 2026 ರಂದು ಮದುವೆಯಾದ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ ತುಂಬಿತ್ತು.

ಕೇರಳದಲ್ಲಿ ಮದುವೆ ನೋಂದಣಿ ಮಾಡುವಾಗ ಮೊನಾಲಿಸಾ ಅವರನ್ನು ವಯಸ್ಕಳೆಂದು ತೋರಿಸಲು ನಕಲಿ ಜನನ ಪ್ರಮಾಣಪತ್ರವನ್ನು ಬಳಸಲಾಗಿದೆ. ಆಕೆಯನ್ನು ಉದ್ದೇಶಪೂರ್ವಕವಾಗಿ 18 ವರ್ಷ ಮೇಲ್ಪಟ್ಟವಳೆಂದು ಬಿಂಬಿಸಲು ಈ ಸಂಚು ರೂಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel