ನಟ ವಿಜಯ್ 
ದೇಶ

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ನೋಡಿ ಹೆದರಿ ಓಡಿದ Thalapathy Vijay?

ಇಂದು ತಮಿಳುನಾಡಿನ ಕನ್ಯಾಕುಮಾರಿ ಮತ್ತು ತಿರುಚಿರಾಪಳ್ಳಿಗೆ ಆಗಮಿಸಿದ ನಟ ವಿಜಯ್ ಅಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮದೇ ಟಿವಿಕೆ ಪಕ್ಷದ ಮೂಲಕ ಸ್ಪರ್ಧಿಸಿರುವ ಖ್ಯಾತ ತಮಿಳುನಟ ದಳಪತಿ ವಿಜಯ್ ತಮ್ಮ ಪ್ರಚಾರದ ವೇಳೆ ಹೂವಿನಚೆಂಡನ್ನು ಬಾಂಬ್ ಎಂದು ತಪ್ಪಾಗಿ ಭಾವಿಸಿ ಹೆದರಿ ಓಡಿದ ಘಟನೆ ನಡೆದಿದೆ ಎನ್ನಲಾಗಿದೆ.

ಇಂದು ತಮಿಳುನಾಡಿನ ಕನ್ಯಾಕುಮಾರಿ ಮತ್ತು ತಿರುಚಿರಾಪಳ್ಳಿಗೆ ಆಗಮಿಸಿದ ನಟ ವಿಜಯ್ ಅಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಈ ವೇಳೆ ಹೆದ್ದಾರಿಯಲ್ಲಿ ಕೆಲ ಹೊತ್ತು ವಿಜಯ್ ಸೈಕಲ್ ಸವಾರಿ ಕೂಡ ಮಾಡಿದರು. ಈ ಹೊತ್ತಿನಲ್ಲಿ ಕೆಲ ಅಭಿಮಾನಿಗಳು ಅವರನ್ನು ಹಿಡಿಯಲು ಓಡಿಬಂದರು.

ಆದರೂ ನಟ ವಿಜಯ್ ಅವರಿಗೆ ಸಿಗದೇ ವೇಗವಾಗಿ ಸೈಕಲ್ ತುಳಿಯುತ್ತಾ ಮುಂದಕ್ಕೆ ಹೋದರು. ಈ ವೇಳೆ ಅವರ ಹಿಂದೆ ರಕ್ಷಣಾ ಸಿಬ್ಬಂದಿಗಳು ಅಭಿಮಾನಿಗಳನ್ನು ತಡೆದು ಪಕ್ಕಕ್ಕೆ ಕಳುಹಿಸಿದರು.

ಬಾಂಬ್ ಎಂದು ಹೆದರಿ ಓಡಿದ ವಿಜಯ್

ಇನ್ನು ಇದೇ ಸಂದರ್ಭದಲ್ಲಿ ವಿಜಯ್ ಸೈಕಲ್ ತುಳಿಯುತ್ತಿದ್ದಾಗ ಮತ್ತೋರ್ವ ಅಭಿಮಾನಿ ತಾನು ತಂದಿದ್ದ ಹೂಗಳನ್ನು ಚೆಂಡಿನ ರೀತಿ ಮಾಡಿ ನಟ ವಿಜಯ್ ಮುಂದೆ ಎಸೆದಿದ್ದಾನೆ.

ಇದನ್ನು ನೋಡಿದ ವಿಜಯ್ ಮತ್ತು ಅವರ ಭದ್ರತಾ ಸಿಬ್ಬಂದಿಗಳು ಅದನ್ನು ಬಾಂಬ್ ಎಂದು ಭಾವಿಸಿ ರಸ್ತೆಯಲ್ಲೇ ಸೈಕಲ್ ಬಿಟ್ಟು ತಮ್ಮ ವಾಹನದತ್ತ ಓಡಿದ ಪ್ರಸಂಗ ನಡೆಯಿತು.

ಬಳಿಕ ಅದು ಬಾಂಬ್ ಅಲ್ಲ.. ಹೂ ಎಂದು ತಿಳಿದು ನಟ ವಿಜಯ್ ತಮ್ಮ ಪ್ರಚಾರ ಮುಂದುವರೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ