ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ 
ದೇಶ

'ಭಾರತ ಶ್ರೇಷ್ಠ ದೇಶ, ಮೋದಿ ತುಂಬಾ ಒಳ್ಳೆಯ ಸ್ನೇಹಿತ': 'ಇಂಡಿಯಾ ನರಕದ ಕೂಪ' ಎಂದಿದ್ದ ಟ್ರಂಪ್ ಯೂಟರ್ನ್

ಭಾರತ ಅತ್ಯಂತ ಶ್ರೇಷ್ಠ ದೇಶವಾಗಿದ್ದು, ಆ ದೇಶವನ್ನು ಮುನ್ನಡೆಸುವ ಪ್ರಧಾನಿ ಮೋದಿ ತಮಗೆ "ಉತ್ತಮ ಸ್ನೇಹಿತ" ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನವದೆಹಲಿ: ಭಾರತ ಮತ್ತು ಚೀನಾ ನರಕದ ಕೂಪ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಯೂಟರ್ನ್ ಹೊಡೆದಿದ್ದು, ಇಂಡಿಯಾವನ್ನು ಹಾಡಿ ಹೊಗಳಿದ್ದಾರೆ.

ಭಾರತ ಅತ್ಯಂತ ಶ್ರೇಷ್ಠ ದೇಶವಾಗಿದ್ದು, ಆ ದೇಶವನ್ನು ಮುನ್ನಡೆಸುವ ಪ್ರಧಾನಿ ಮೋದಿ ತಮಗೆ "ಉತ್ತಮ ಸ್ನೇಹಿತ" ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದಕ್ಕೂ ಮುನ್ನ ಟ್ರಂಪ್, ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರೂತ್ ಸೋಷಿಯಲ್’ನಲ್ಲಿ ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಬರೆದ ವಿವಾದಾತ್ಮಕ ಪತ್ರವನ್ನು ಮರು ಪೋಸ್ಟ್ ಮಾಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಸ್ಯಾವೇಜ್ ಪತ್ರಕ್ಕೆ ಧ್ವನಿಗೂಡಿಸಿದ ಟ್ರಂಪ್, ಭಾರತ, ಚೀನಾ ಮತ್ತು ಇತರ ರಾಷ್ಟ್ರಗಳನ್ನು "ನರಕ ಕೂಪಗಳು" ಎಂದು ಕಟುವಾಗಿ ಟೀಕಿಸಿದ್ದರು.

ಅಮೆರಿಕನ್ನರ ಉದ್ಯೋಗಗಳನ್ನು ಭಾರತೀಯರು ಮತ್ತು ಚೀನಿಯರು ಕಬಳಿಸುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಮತ್ತು ಚೀನೀ ತಜ್ಞರು ಲ್ಯಾಪ್ ಟಾಪ್ ಮೂಲಕ ಅಮೆರಿಕದ ತಂತ್ರಜ್ಞಾನ ವ್ಯವಸ್ಥೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಟ್ರಂಪ್‌ ದೂರಿದ್ದಾರೆ.

ಟ್ರಂಪ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರ ಕ್ರಿಸ್ಟೋಫರ್ ಎಲ್ಮ್ಸ್, ಅಮೆರಿಕ ಅಧ್ಯಕ್ಷರು ಭಾರತದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಇದನ್ನು ಒಂದು ದೊಡ್ಡ ರಾಷ್ಟ್ರ ಎಂದು ಹೇಳಿದ್ದಾರೆ ಮತ್ತು ಅದರ ನಾಯಕನೊಂದಿಗೆ ವೈಯಕ್ತಿಕ ಸ್ನೇಹವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದರು.

"ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶವಾಗಿದೆ" ಎಂದು ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SSLC ಫಲಿತಾಂಶ ಪ್ರಕಟ: ಬಸ್ ಕಂಡಕ್ಟರ್ ಮಗ ರಾಜ್ಯಕ್ಕೆ ಟಾಪರ್; ತನ್ನ ಸಾಧನೆ ಬಗ್ಗೆ ಪ್ರೀತಮ್ ಹೇಳಿದ್ದೇನು?

ಹಾರ್ಮುಜ್ ಜಲಸಂಧಿಯಲ್ಲಿ ಭಯಾನಕ ದಾಳಿ: ಭಾರತಕ್ಕೆ ಬರುತ್ತಿದ್ದ ಹಡಗನ್ನು ವಶಕ್ಕೆ ಪಡೆದ ಇರಾನ್ ನೌಕಪಡೆ! Video ನೋಡಿ...

ಅಮೆರಿಕ ದಿಗ್ಬಂಧನ ಧಿಕ್ಕರಿಸಿ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಸಂಗ್ರಹ; ಟ್ರಂಪ್'ಗೆ ಟೆಹ್ರಾನ್ ಡಿಚ್ಚಿ

OTT ಗೂ Dhurandhar 2 ಲಗ್ಗೆ; ಬೋನಸ್ ದೃಶ್ಯಗಳೊಂದಿಗೆ ಚಿತ್ರ ರಿಲೀಸ್, ಯಾವಾಗ ಗೊತ್ತಾ?

IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಐವರ ಬಂಧನ; 3.91 ಕೋಟಿ ರೂ ನಗದು, ನೋಟು ಎಣಿಸೋ ಯಂತ್ರ ವಶ!

SCROLL FOR NEXT