ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೀಯ ಭಾಷೆ ಬಳಸಿದ ಅಪ್ರಾಪ್ತ ವಯಸ್ಸಿನ ಬಾಲಯಕಿಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ನಂತರ ಕಿರುತೆರೆ ನಟಿ ಮತ್ತು ಬಿಜೆಪಿ ನಾಯಕಿ ರೂಪಾಲಿ ಗಂಗೂಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಪರಿಣಾಮ ಬೀರಬೇಕು ಮತ್ತು ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಬೇಕೆಂದು ಬಯಸುತ್ತೇನೆ ಎಂಬ ಅವರ ಎಕ್ಸ್ ಖಾತೆಯಲ್ಲಿನ ಪ್ರತಿಕ್ರಿಯೆ ವ್ಯಾಪಕ ಟೀಕೆಗೆ ಆಸ್ಪದ ನೀಡಿದೆ. ಕೆಲವು ಬಳಕೆದಾರರು ನಿಂದನೀಯ ನಡವಳಿಕೆಯ ವಿರುದ್ಧ ಅವರ ನಿಲುವನ್ನು ಬೆಂಬಲಿಸಿದರೆ, ಇತರರು ಅವರ ಪದಗಳ ಆಯ್ಕೆಯನ್ನು ಟೀಕಿಸಿದ್ದು, ಅವರ ರಾಜಕೀಯ ದೃಷ್ಟಿಕೋನಗಳನ್ನು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅಪ್ರಾಪ್ರ ಬಾಲಕಿಯ ವಿವಾದ ಜೊತೆಗೆ ರೂಪಾ ಗಂಗೂಲಿ ಪ್ರತಿಕ್ರಿಯೆಯನ್ನು ಜೋಡಿಸಿ ಚರ್ಚೆ ಮಾಡಲಾಗುತ್ತಿದೆ. ಇದು ರಾಜಕೀಯ ಅಭಿವ್ಯಕ್ತಿ ಮತ್ತು ಅಪ್ರಾಪ್ತ ವಯಸ್ಕರ ಒಳಗೊಳ್ಳುವಿಕೆಯ ಕುರಿತ ಮತ್ತಷ್ಟು ಚರ್ಚೆಗೆ ನಾಂದಿ ಹಾಡಿದೆ.
ಅಪ್ರಾಪ್ತ ಬಾಲಕಿ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಿ ಅವರ ಫೋಟೋವೊಂದಕ್ಕೆ ಹೊಡೆಯುವುದ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ವಿವಾದ ಪ್ರಾರಂಭವಾಯಿತು.
ಈ ವಿಡಿಯೋಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ರೂಪಾಲಿ ಗಂಗೂಲಿ, "ಪ್ರಧಾನಿಯನ್ನು ಈ ರೀತಿ ಅವಮಾನಿಸುವುದು ಪರಿಣಾಮಗಳನ್ನು ಬೀರಬೇಕು.ಅವರು ಸರ್ವಾಧಿಕಾರಿಯಾಗಿದ್ದರೆ ಎಂದು ನಾನು ನಿಜವಾಗಿಯೂ ಬಯಸುತ್ತೇನೆ!!! ಎಂದು ಪೋಸ್ಟ್ ಮಾಡಿದ್ದರು. ಅವರ ಈ ಹೇಳಿಕೆ ಬೇಗನೆ ಚರ್ಚೆಯ ಕೇಂದ್ರಬಿಂದುವಾಯಿತು, ಅನೇಕ ಬಳಕೆದಾರರು ಅವರು ಸರ್ವಾಧಿಕಾರ ಪದ ಉಲ್ಲೇಖಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೆಲವರು, ಬೆನಿಟೊ ಮುಸೊಲಿನಿ, ಇಟಲಿ ಜನರಿಗೆ ಏನು ಮಾಡಿದ್ದರು ಎಂಬುದು ಗೊತ್ತಾ?ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೇ ವಿದ್ಯಾರ್ಥಿಗಳ ಪ್ರತಿಭಟನೆ, ಪ್ರಧಾನಿ ಮೋದಿ ವಿರುದ್ಧ ನಿಂದನೆ ಕುರಿತು ಸೂಕ್ಷ್ಮ ಚರ್ಚೆ ನಡೆಯುತ್ತಿರುವಂತೆಯೇ ರೂಪಾ ಗಂಗೂಲಿ ನೀಡಿರುವ ಹೇಳಿಕೆ ಮತ್ತೊಂದು ಆಯಾಮ ಪಡೆದುಕೊಂಡಿದ್ದು, ಅವರ ಹೇಳಿಕೆ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.