ಅಮಿತ್ ಶಾ ಸಾಂದರ್ಭಿಕ ಚಿತ್ರ 
ದೇಶ

ಆ.14 ಇತಿಹಾಸದ ಅತ್ಯಂತ ಕ್ರೂರ ಅಧ್ಯಾಯವೊಂದಕ್ಕೆ ಸಾಕ್ಷಿ; ದೇಶ ವಿಭಜನೆಯ ಗಾಯ 'ಕಾಂಗ್ರೆಸ್‌ ಗಿಫ್ಟ್'ಎಂದ ಅಮಿತ್ ಶಾ!

1947ರ ಆಗಸ್ಟ್ 14 ಇತಿಹಾಸದ ಅತ್ಯಂತ ಕ್ರೂರ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಅಮಾನವೀಯ ಯಾತನೆಯನ್ನು ಅನುಭವಿಸಿ ತಮ್ಮ ಪ್ರಾಣ ಕಳೆದುಕೊಂಡರು ಎಂದು ಅಮಿತ್ ಶಾ ಹೇಳಿದ್ದಾರೆ.

ನವದೆಹಲಿ: ಆಗಸ್ಟ್ 14 ಇತಿಹಾಸದ ಅತ್ಯಂತ ಕ್ರೂರ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಿದೆ. "ಕಾಂಗ್ರೆಸ್‌ನ ಕೊಡುಗೆಯಾಗಿರುವ" ದೇಶ ವಿಭಜನೆಯ ಗಾಯವನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಶಾ, 1947ರ ಆಗಸ್ಟ್ 14 ಇತಿಹಾಸದ ಅತ್ಯಂತ ಕ್ರೂರ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಅಮಾನವೀಯ ಯಾತನೆಯನ್ನು ಅನುಭವಿಸಿ ತಮ್ಮ ಪ್ರಾಣ ಕಳೆದುಕೊಂಡರು. ಕೋಟ್ಯಂತರ ಜನರು ತಮ್ಮ ಮನೆ, ಆಸ್ತಿ ಹಾಗೂ ಪ್ರೀತಿಪಾತ್ರರನ್ನು ತೊರೆದು ನಿರಾಶ್ರಿತರಾಗಬೇಕಾಯಿತು ಎಂದು ತಿಳಿಸಿದ್ದಾರೆ.

"ಕಾಂಗ್ರೆಸ್‌ನ ಕೊಡುಗೆಯಾಗಿರುವ ದೇಶದ ವಿಭಜನೆಯ ಈ ಗಾಯವನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಡಿದವರಿಗೆ ನಾನು ಗೌರವಪೂರ್ವಕ ಸಂತಾಪ ಸಲ್ಲಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

'ವಿಭಜನೆಯ ಭೀಕರತೆಯ ಸ್ಮರಣಾ ದಿನ'ದ (Partition Horrors Remembrance Day) ಮೂಲಕ ಮೋದಿ ಸರ್ಕಾರವು ಈ ದುರಂತದ ನೆನಪುಗಳನ್ನು ಯುವಜನರಿಗೆ ತಲುಪಿಸುತ್ತಿದೆ. ಇದರಿಂದಾಗಿ ದೇಶವನ್ನು ಮತ್ತೆ ವಿಭಜಿಸಲು ಬಯಸುವ ಶಕ್ತಿಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಮತ್ತು 'ಏಕ ಭಾರತ, ಶ್ರೇಷ್ಠ ಭಾರತ' (One India, Excellent India) ನಮ್ಮ ಪರಮ ಗುರಿಯಾಗುತ್ತದೆ ಎಂದು ಶಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರೂರ್ ಕಾಲ್ತುಳಿತ ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ; ‘ಸರ್ಕಾರದ ನೀತಿಯನ್ನು ಪ್ರಶ್ನಿಸಲು ನೀವ್ಯಾರು?’: ಹೈಕೋರ್ಟ್ ಆದೇಶಕ್ಕೆ 'ಸುಪ್ರೀಂ' ತಡೆ

ಸಾವರ್ಕರ್ ವಿರುದ್ಧ ಹೇಳಿಕೆ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

President's Medals 2026: ಕರ್ನಾಟಕದ 17 ಮಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಘೋಷಣೆ

ವಿದೇಶದಲ್ಲಿ ಭಾರತೀಯರ ಮೇಲೆ ದಾಳಿ ಹೆಚ್ಚಳ: ಅಗ್ರಸ್ಥಾನದಲ್ಲಿ ಅಮೆರಿಕ, ತದನಂತರದ ಸ್ಥಾನದಲ್ಲಿ ಯುಎಇ, ಯುಕೆ, ಕೆನಡಾ-MEA

Census 2027: ಜಾತಿ, ಕೋವಿಡ್ ಲಸಿಕೆ, ಆಧಾರ್‌ ಸೇರಿ 40 ಪ್ರಶ್ನೆಗಳಿಗೆ ಉತ್ತರಿಸಬೇಕು! ಜನಗಣತಿ ವೇಳೆ ಯಾವೆಲ್ಲಾ ಐಡಿಗಳು ಬೇಕು ಗೊತ್ತಾ?