ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ 
ದೇಶ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ; 7 ಯಾತ್ರಿಕರು ಸಜೀವ ದಹನ

ದೇವಾಲಯ ಪಟ್ಟಣವಾದ ತಾರಾಪೀಠನಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್‌ನ ನೆಲ ಮಹಡಿಯಲ್ಲಿ ಹೆಚ್ಚಿನ ಅತಿಥಿಗಳು ಮಲಗಿದ್ದಾಗ ಇಂದು ಬೆಳಗಿನ ಜಾವ 4:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ತಾರಾಪೀಠ: ಪಶ್ಚಿಮ ಬಂಗಾಳದ ಬಿರ್ಭೂಮ್‌ ಜಿಲ್ಲೆಯ ಹೋಟೆಲ್‌ನಲ್ಲಿ ಸೋಮವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಕನಿಷ್ಠ ಏಳು ಯಾತ್ರಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ದೇವಾಲಯ ಪಟ್ಟಣವಾದ ತಾರಾಪೀಠನಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್‌ನ ನೆಲ ಮಹಡಿಯಲ್ಲಿ ಹೆಚ್ಚಿನ ಅತಿಥಿಗಳು ಮಲಗಿದ್ದಾಗ ಇಂದು ಬೆಳಗಿನ ಜಾವ 4:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.

ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ರಾಮಪುರಹತ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಅಗ್ನಿಶಾಮಕ ದಳದ ಪ್ರಾಥಮಿಕ ಅಂದಾಜಿನ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ!

ಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್‌ಕೋಟ್ ಮುಂದು; ಮಾತುಕತೆಗೆ ಆಹ್ವಾನ!

Gokul | ಗ್ರಾಹಕರಿಗೆ ಮತ್ತೆ ಬರೆ: ಹಾಲಿನ ದರ 4 ರಿಂದ 6 ರೂ ಏರಿಕೆ, ಇಲ್ಲಿದೆ ವಿವರ!

ಬಸವಣ್ಣನವರು ಇಲ್ಲದೇ ಇದ್ದಿದ್ದರೆ ಕನ್ನಡ ಭಾಷೆ ಸಂಸ್ಕೃತಿ ಉಳೀತಿತ್ತಾ?: ರವಿ ಹಂಜ್‌ ಕಲಿಸುವ ಪಾಠ ಅವಿವೇಕಿಗಳಿಗೆ ಎಚ್ಚರಿಕೆಯಾಗಲಿ- ಪ್ರತಾಪ್ ಸಿಂಹ ಕಿಡಿ

ಶಬರಿಮಲೆ ಯಾತ್ರಾರ್ಥಿಗಳ ಗಮನಕ್ಕೆ: ವಿಮಾನದಲ್ಲಿ ಕ್ಯಾಬಿನ್ ಬ್ಯಾಗೇಜ್ ನಲ್ಲಿ ಇರುಮುಡಿ ಸಾಗಿಸಲು ಕೇಂದ್ರದ ಅನುಮತಿ