ಭಯಾನಕ ಕೃತ್ಯ CCTVಯಲ್ಲಿ ಸೆರೆ 
ದೇಶ

ಪಬ್‌ನಲ್ಲಿ ಶಾಕಿಂಗ್ ಘಟನೆ: ಬಾರ್‌ಟೆಂಡರ್ ಯುವತಿಗೆ ಚಾಕುವಿನಿಂದ ಇರಿದು ಕೊಂದ ಸಹೋದ್ಯೋಗಿ; ಭಯಾನಕ ಕೃತ್ಯ CCTVಯಲ್ಲಿ ಸೆರೆ! Video

ಜಬಲ್‌ಪುರದ ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೀನ್‌ದಯಾಳ್ ಚೌಕ್ ಬಳಿಯ ಪಬ್ ನಲ್ಲಿ ಈ ಘಟನೆ ವರದಿಯಾಗಿದೆ.

ಜಬಲ್ಪುರ: ಮಧ್ಯ ಪ್ರದೇಶದ ಜಬಲ್ಪುರದ ಪಬ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕೆಲಸದ ಸ್ಥಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ 20 ವರ್ಷದ ಯುವತಿ ಬಾರ್‌ಟೆಂಡರ್ ಕೊಲೆಯಲ್ಲಿ ಅಂತ್ಯವಾಗಿದೆ. ಭಯಾನಕ ಕೃತ್ಯ ಪಬ್ ನ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆರೋಪಿಯನ್ನು ಬಂಧಿಸಲಾಗಿದೆ.

ಜಬಲ್‌ಪುರದ ಗೋಹಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೀನ್‌ದಯಾಳ್ ಚೌಕ್ ಬಳಿಯ ಪಬ್ ನಲ್ಲಿ ಈ ಘಟನೆ ವರದಿಯಾಗಿದೆ. ಮೃತ ಬಾರ್‌ಟೆಂಡರ್‌, ಮುಸ್ಕಾನ್ ಚೌಧರಿ ಎಂದು ಗುರುತಿಸಲಾಗಿದ್ದು, ಆರೋಪಿ ಪವನ್ ವರ್ಮಾ ಬಾರ್‌ನಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಸಂಜೆ 4.30 ರ ಸುಮಾರಿಗೆ ಕೆಲಸಕ್ಕೆ ಸಂಬಂಧಿಸಿದ ವಿಷಯಕ್ಕೆ ಇಬ್ಬರ ನಡುವೆ ಜಗಳ ಆರಭವಾಗಿದೆ. ಜಗಳ ವಿಕೋಪಕ್ಕೆ ಹೋಗಿ, ಪವನ್ ವರ್ಮಾ, ಮುಸ್ಕಾನ್ ಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಮುಸ್ಕಾನ್ ಅವರನ್ನು ಆಕೆ, ಸಹೋದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು ಆಕೆ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆಂದು ಘೋಷಿಸಿದ್ದಾರೆ.

ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಆಯುಷ್ ಜಾಖರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯಪಾಲರು ಹೊರಡಿಸಿದ್ದ ಅಮಾನತು ಆದೇಶ ರದ್ದು: KPSC ಅಧ್ಯಕ್ಷರನ್ನಾಗಿ ಶಿವಶಂಕರಪ್ಪ ಮರುನೇಮಕಕ್ಕೆ ಹೈಕೋರ್ಟ್ ಸೂಚನೆ

ನೀಟ್ ಪ್ರತಿಭಟನೆ: ಪೊಲೀಸರ ದೌರ್ಜನ್ಯ ಆರೋಪಗಳ ತನಿಖೆಗೆ ಸುಪ್ರೀಂ ಉನ್ನತಾಧಿಕಾರ ಸಮಿತಿ

ಮಹಾರಾಷ್ಟ್ರ: ಅಭಿಜೀತ್ ದೀಪ್ಕೆ ಪ್ರತಿಭಟನೆಯ ಎಚ್ಚರಿಕೆ, ಶಾಲಾ ಪ್ರಾಂಶುಪಾಲರ ಅಮಾನತು! Video

ಹನೂರು ಶೂಟೌಟ್ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ!

ಕೇರಳಿಗರದ್ದು ಇದೆಂಥ ಮನಸ್ಥಿತಿ: ನಟಿ ಮಾಳವಿಕಾಗೆ ಗೋಮಾಂಸ ಇಷ್ಟನಾ? ತಿಂತೀರಾ ಅಂತ ಕೇಳಿದ ಪತ್ರಕರ್ತ; ನೆಟ್ಟಿಗರ ಆಕ್ರೋಶ, Video!