ರಾಹುಲ್ ಗಾಂಧಿ - ಕಂಗನಾ ರಣಾವತ್ 
ದೇಶ

'ಅಣ್ಣಾ, ಸ್ವಲ್ಪ ನಿಲ್ಲಿ...: 'ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' ಎಂದಿದ್ದ ರಾಹುಲ್ ಗಾಂಧಿ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ

ಆಭರಣ ಬ್ರ್ಯಾಂಡ್‌ನ 36 ಸೆಕೆಂಡುಗಳ 'ರಕ್ಷಾಬಂಧನ' ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದಾಗ, ಮಂಗಳವಾರ ರಾಹುಲ್ ಗಾಂಧಿ ನಟಿಯ ಬೆಂಬಲಕ್ಕೆ ನಿಂತಿದ್ದರು.

ರಾಖಿ ಜಾಹೀರಾತೊಂದರಲ್ಲಿ ನಟಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಕುರಿತಾದ ವಿವಾದದ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' (smash the patriarchy) ಎಂಬ ಹೇಳಿಕೆಗೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ.

ರಾಹುಲ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬಿಜೆಪಿ ಇನ್‌ಸ್ಟಾಗ್ರಾಂ ಖಾತೆಯಲ್ಲಿದ್ದ ಪೋಸ್ಟ್ ಅನ್ನು ರೀಶೇರ್ ಮಾಡಿಕೊಂಡಿರುವ ಕಂಗನಾ, 'ಬ್ರೋ, ಸ್ವಲ್ಪ ನಿಲ್ಲಿ. ಭಾರತ ಮಾತಾ ಕೀ ಜೈ. ಈಗ ಶುರು ಮಾಡೋಣ' ಎಂದು ಬರೆದಿದ್ದಾರೆ.

ಬಿಜೆಪಿ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿಯನ್ನೇ ಹೋಲುವ ಮತ್ತು ಮತ್ತೊಬ್ಬ ಯುವತಿ ನಡುವಿನ ಸಂಭಾಷಣೆಗಳ ಚಿತ್ರಸಹಿತ ಸರಣಿಯಿದ್ದು, ಇದರಲ್ಲಿ ಮಹಿಳಾ ಪ್ರಾತಿನಿಧ್ಯ ಹಾಗೂ ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಖ್ ಮತ್ತು ಶಾ ಬಾನೋ ಪ್ರಕರಣದಂತಹ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನಿಲುವನ್ನು ಪ್ರಶ್ನಿಸಲಾಗಿದೆ.

ಮೊದಲ ಚಿತ್ರದಲ್ಲಿ, ರಾಹುಲ್ ಗಾಂಧಿಯವರು 'ಪಿತೃಪ್ರಧಾನ ವ್ಯವಸ್ಥೆಯನ್ನು ಕೊನೆಗೊಳಿಸಿ!' ಎಂದು ಹೇಳುತ್ತಿರುವುದನ್ನು ತೋರಿಸಲಾಗಿದೆ. ಅದಕ್ಕೆ ಯುವತಿಯೊಬ್ಬರು, 'ಸಹೋದರನೇ, ನಿಲ್ಲಿ. 'ಭಾರತ ಮಾತಾ ಕೀ ಜೈ'. ಈಗ ಆರಂಭಿಸೋಣ' ಎಂದಿದ್ದಾರೆ.

ನಂತರ ಆ ಯುವತಿ 'ತ್ರಿವಳಿ ತಲಾಖ್?' ಎಂದು ಕೇಳಿದಾಗ ರಾಹುಲ್: 'ಅರೇ, ಅದು ಸಂಪೂರ್ಣ ಮತ ಬ್ಯಾಂಕ್ ರಾಜಕೀಯವಾಗಿತ್ತು, ಆದರೆ ಪಿತೃಪ್ರಧಾನ ವ್ಯವಸ್ಥೆಯನ್ನು ಒಡೆದುಹಾಕಿ!' ಎನ್ನುತ್ತಾರೆ.

ಮುಂದಿನ ಚಿತ್ರದಲ್ಲಿ, ಯುವತಿ, 'ನಿಮ್ಮ ಪಕ್ಷವು ಆರಂಭದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ವಿರುದ್ಧ ಮತ ಚಲಾಯಿಸಿತು' ಎಂದಾಗ 'ಮತ್ತೊಮ್ಮೆ, ಆ ಮಸೂದೆ ಕೂಡ ವೋಟ್‌ಬ್ಯಾಂಕ್ ಆಟ ಬ್ರೋ, ಆದರೆ ಪಿತೃಪ್ರಧಾನ ವ್ಯವಸ್ಥೆಯನ್ನ ಒಡೆದುಹಾಕಿ!' ಎಂದು ರಾಹುಲ್ ಹೇಳಿರುವಂತಿದೆ.

ನಂತರ ರಾಹುಲ್, 'ಪಂಜರವನ್ನು ಮುರಿಯಿರಿ!' ಎಂದು ಹೇಳಿದ್ದರು, ಅದಕ್ಕೆ ಯುವತಿ 'ಶಾ ಬಾನೋ?' ಎಂದು ಉತ್ತರಿಸಿದ್ದರು.

ಅಂತಿಮ ಚಿತ್ರವು ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಸಮಸ್ಯೆಯನ್ನು ಎತ್ತುತ್ತದೆ. ಯುವತಿ, 'ಕರ್ನಾಟಕ ಸಚಿವ ಸಂಪುಟದಲ್ಲಿ 33 ಸಚಿವರು ಇದ್ದಾರೆ, ಒಬ್ಬೇ ಒಬ್ಬ ಮಹಿಳೆ ಕೂಡ ಇಲ್ಲ' ಎಂದಿದ್ದಾರೆ.

ಅದಕ್ಕೆ ರಾಹುಲ್ ಗಾಂಧಿ, 'ಅರೇ... ಓಹ್... ಹ್ಮ್ಮ್...'

ಆಭರಣ ಬ್ರ್ಯಾಂಡ್‌ನ 36 ಸೆಕೆಂಡುಗಳ 'ರಕ್ಷಾಬಂಧನ' ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದಾಗ, ಮಂಗಳವಾರ ರಾಹುಲ್ ಗಾಂಧಿ ಅವರ ಪರವಾಗಿ ನಿಂತು ಸಮರ್ಥಿಸಿಕೊಂಡ ನಂತರ ರಣಾವತ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಕೃತಿ ಸನೊನ್ ಅವರ ಉಡುಪಿನ ಬಗ್ಗೆ ಕಂಗನಾ ಕೂಡ ವಾಗ್ದಾಳಿ ನಡೆಸಿದ್ದರು.

'ಮಹಿಳೆಯೊಬ್ಬರು ಏನು ಧರಿಸುತ್ತಾರೆ, ಏನು ಮಾಡುತ್ತಾರೆ ಮತ್ತು ಎಲ್ಲಿಗೆ ಹೋಗುತ್ತಾರೆ ಎಂಬುದು ಅವರ ಆಯ್ಕೆ' ಎಂದು ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ನಟಿ ಕೃತಿ ಸನೊನ್ ಅವರ ಪ್ರತಿಕ್ರಿಯೆಯನ್ನು ಟ್ಯಾಗ್ ಮಾಡಿದ್ದಾರೆ.

'ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸುವುದಕ್ಕಾಗಿ ಅವರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ. ಸ್ತ್ರೀದ್ವೇಷಿ ಪಿತೃಪ್ರಧಾನ ವ್ಯವಸ್ಥೆಯನ್ನು ಮುರಿಯಿರಿ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ