ಸೋನಿಯಾ ಗಾಂಧಿ ಆತ್ಮಕಥನ 
ದೇಶ

ಸೋನಿಯಾ ಗಾಂಧಿ ಆತ್ಮ ಕಥನ 'ಬಿಲಾಂಗಿಂಗ್' ಪ್ರಕಟಿಸದಿರಲು ನಿರ್ಧಾರ: ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟನೆ ಏನು?

ಹಲವು ಬದಲಾವಣೆಗಳನ್ನು ಸೋನಿಯಾಗಾಂಧಿ ತಿರಸ್ಕರಿಸಿದ್ದರಿಂದ ಪೆಂಗ್ವಿನ್ ಸಂಸ್ಥೆ ಆತ್ಮಕಥನ ಪ್ರಕಟಿಸದಿರಲು ನಿರ್ಧರಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ.

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಇನ್ ಇಂಡಿಯಾ (Belonging: A Journey of Love in India) ಪ್ರಕಟಿಸದಿರಲು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ನಿರ್ಧರಿಸಿದೆ ಎಂದು ವರದಿಯಾಗಿತ್ತು.

ಈ ವರದಿಗಳ ಸಂಬಂಧ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಶುಕ್ರವಾರ ಸ್ಪಷ್ಚನೆ ನೀಡಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್' ನ ಭಾರತದ ಪ್ರಕಾಶಕರು ನಾವಲ್ಲ ಎಂದು ತಿಳಿಸಿದೆ.

'ಬಿಲಾಂಗಿಂಗ್' ಪುಸ್ತಕವನ್ನು ಭಾರತದಲ್ಲಿ ಬಿಡುಗಡೆ ಮಾಡುವುದರಿಂದ ಹಿಂದೆ ಸರಿದಿರುವುದಾಗಿ ಮಾಧ್ಯಮ ವರದಿಗಳ ನಂತರ ಪ್ರಕಾಶಕರು ಈ ಸ್ಪಷ್ಟೀಕರಣ ನೀಡಿದ್ದಾರೆ. ಹಲವು ಬದಲಾವಣೆಗಳನ್ನು ಸೋನಿಯಾಗಾಂಧಿ ತಿರಸ್ಕರಿಸಿದ್ದರಿಂದ ಪೆಂಗ್ವಿನ್ ಸಂಸ್ಥೆ ಆತ್ಮಕಥನ ಪ್ರಕಟಿಸದಿರಲು ನಿರ್ಧರಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ.

ಸತ್ಯ ಪರಿಶೀಲನೆ ಮತ್ತು ಸಂಪಾದಕೀಯ ಬದಲಾವಣೆಗಳನ್ನು ಸೂಚಿಸುವುದು ಅದರ ಜವಾಬ್ದಾರಿಯ ಭಾಗವಾಗಿದೆ ಎಂದು ಒತ್ತಿ ಹೇಳಿದರು.

ಪ್ರಕಾಶಕರಾಗಿ, ಲೇಖಕರಿಗೆ ಅವರ ಪುಸ್ತಕಗಳ ಹಿತಾಸಕ್ತಿಗೆ ಅನುಗುಣವಾಗಿ ಮಾರ್ಪಾಡುಗಳನ್ನು ಮಾಡುವುದು ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಇದು ಪ್ರಕಾಶನ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದೆ. ಆದರೆ ಲೇಖಕರೊಂದಿಗಿನ ಗೌಪ್ಯ ಚರ್ಚೆಗಳ ಕುರಿತು ನಾವು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಆತ್ಮಕಥೆಯು ಪೆಂಗ್ವಿನ್ ರಾಂಡಮ್ ಹೌಸ್‌ನ ಭಾಗವಾಗಿರುವ ಆಲ್‌ಫ್ರೆಡ್ ಎ ನಾಫ್ ಸಂಸ್ಥೆಯ ಮೂಲಕ ನವೆಂಬರ್ 10 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲು ನಿಗದಿಯಾಗಿತ್ತು. ನಾಫ್ ಸಂಸ್ಥೆಯು ಆರಂಭದಲ್ಲಿ 1 ಲಕ್ಷ ಪ್ರತಿಗಳನ್ನು ಮುದ್ರಿಸುವುದಾಗಿ ಘೋಷಿಸಿತ್ತು. ಈಗ ಪೆಂಗ್ವಿನ್ ಇಂಡಿಯಾ ಈ ಯೋಜನೆಯಿಂದ ಹಿಂದೆ ಸರಿದಿದೆ.

ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕವು ಎರಡನೇ ಮಹಾಯುದ್ಧದ ನಂತರದ ಇಟಲಿಯಲ್ಲಿನ ಸೋನಿಯಾ ಗಾಂಧಿ ಅವರ ಬಾಲ್ಯ, ಭಾರತಕ್ಕೆ ಬಂದ ಅವರ ಪಯಣ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ಅವರ ವಿವಾಹದ ಜೀವನದ ನೆನಪುಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅಗಲಿಕೆ ಸೇರಿದಂತೆ ಅವರ ಜೀವನದಲ್ಲಿ ನಡೆದ ಪ್ರಮುಖ ದುರಂತಗಳ ಕುರಿತೂ ಈ ಪುಸ್ತಕ ಬೆಳಕು ಚೆಲ್ಲಲಿದೆ. ಇದರೊಂದಿಗೆ ಅವರು ಸಾರ್ವಜನಿಕ ಜೀವನಕ್ಕೆ ಧುಮುಕಿದ್ದು ಮತ್ತು ಭಾರತದ ಅತ್ಯಂತ ಪ್ರಮುಖ ರಾಜಕೀಯ ಕುಟುಂಬಗಳಲ್ಲಿ ಒಂದಾದ ನೆಹರೂ-ಗಾಂಧಿ ಕುಟುಂಬದ ಕೇಂದ್ರಬಿಂದುವಾಗಿದ್ದ ವರ್ಷಗಳ ಅನುಭವಗಳು ಇದರಲ್ಲಿ ಒಳಗೊಂಡಿರಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಪ್ರವಾಹದ ರೌದ್ರಾವತಾರ: ಮತ್ತೊಂದು ಜಲಪ್ರಳಯದ ಭೀತಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೈನಿಕರಿಗೆ ಸೂಚನೆ..!

'ಹನೂರು ಎನ್‌ಕೌಂಟರ್'ಗೆ ಬಿಗ್ ಟ್ವಿಸ್ಟ್: ತನಿಖೆಯಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಪ್ಯಾಂಗೋಲಿನ್ ಕಳ್ಳಸಾಗಣೆ ಜಾಲ ಪತ್ತೆ!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ; ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ!

ನೂರಾರು ಪುರುಷರ ಮುಂದೆ ಒಳ ಉಡುಪಿನಲ್ಲಿ ಡ್ಯಾನ್ಸ್: ಶೂಟಿಂಗ್ ವೇಳೆ ಅನುಭವಿಸಿದ ಮುಜುಗರವನ್ನು ಹಂಚಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ!

2019- 2023 ರವರೆಗೆ MUDA ದಲ್ಲಿ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು: ನಿವೇಶನ ಪಡೆದವರಿಗೆ ಯತೀಂದ್ರ ಸಿದ್ದರಾಮಯ್ಯ ಶಾಕ್!