ಶಿರಿಷಾ 
ದೇಶ

ತೆಲಂಗಾಣ: ನರ್ಸ್ ಶವವಾಗಿ ಪತ್ತೆ, ಅತ್ಯಾಚಾರ ಕೊಲೆ ಶಂಕೆ; ಆರೋಪಿ ಬಂಧನ

ಮೃತ ಶುಶ್ರೂಷಕಿಯನ್ನು ಶಿರಿಷಾ ಎಂದು ಗುರುತಿಸಲಾಗಿದ್ದು, ಆಕೆ ಅದೇ ಪ್ರದೇಶದ ಪ್ರೈಮ್ ಕೇರ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು 34 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮೃತ ಶುಶ್ರೂಷಕಿಯನ್ನು ಶಿರಿಷಾ ಎಂದು ಗುರುತಿಸಲಾಗಿದ್ದು, ಆಕೆ ಅದೇ ಪ್ರದೇಶದ ಪ್ರೈಮ್ ಕೇರ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ತಮ್ಮ ಸ್ನೇಹಿತರೊಂದಿಗೆ ಆಸ್ಪತ್ರೆಯ ವಸತಿ ಕೊಠಡಿಗಳಲ್ಲಿ ವಾಸಿಸುತ್ತಿದ್ದರು. ಶಿರಿಷಾ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಮುಲಕಲಪಲ್ಲಿ ಮಂಡಲದ ಚೌಟಿಗುಡೆಮ್ ಗ್ರಾಮದವರಾಗಿದ್ದು, ಸುಮಾರು 7 ತಿಂಗಳ ಹಿಂದೆ ಸ್ನೇಹಿತೆ ಜೊತೆ ಹೈದರಾಬಾದ್‌ಗೆ ಬಂದು ಪ್ರೈಮ್ ಕೇರ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಸಿರಿಷಾ ತನ್ನ ಕರ್ತವ್ಯ ಮುಗಿಸಿ ತನ್ನ ಕೋಣೆಗೆ ಹೋಗಿದ್ದರು ಎಂದು ವರದಿಯಾಗಿದೆ. ಮರುದಿನ ಸಹೋದ್ಯೋಗಿಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಪ್ರತಿಕ್ರಿಯಿಸಲಿಲ್ಲ.

ಶಿರಿಷಾ ಬೆಳಿಗ್ಗೆಯಿಂದ ತನ್ನ ಕೋಣೆಯಿಂದ ಹೊರಗೆ ಬಂದಿರಲಿಲ್ಲ. ಹಲವಾರು ಬಾರಿ ಬಾಗಿಲು ತಟ್ಟಿದರೂ ಆಕೆ ಪ್ರತಿಕ್ರಿಯಿಸಿರಲಿಲ್ಲ. ನಂತರ ಆಕೆಯ ಸ್ನೇಹಿತರು ಕಿಟಕಿಯ ಮೂಲಕ ಕೋಣೆಗೆ ಪ್ರವೇಶಿಸಿದಾಗ ಆಕೆಯ ಮುಖದಲ್ಲಿ ರಕ್ತಸ್ರಾವದ ಗಾಯಗಳೊಂದಿಗೆ ಮೃತಳಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ಶಿರಿಷಾಳ ಮೇಲೆ ಹಲ್ಲೆ ನಡೆಸಿ, ಹೊಡೆದು ಕೊಂದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸ್ ತಂಡ ಸಿಕ್ಕ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಂಷಾಬಾದ್ ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ, ಪೊಲೀಸರು ಶಂಕಿತನನ್ನು ಬಿಹಾರ ಮೂಲದ ಎಂಡಿ ಸನಾವುಲ್ಲಾ ಖಾನ್ ಎಂದು ಗುರುತಿಸಿದ್ದಾರೆ, ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ನಡುವೆ, ಶಿರೀಷಾ ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಆಕೆ ಬುಡಕಟ್ಟು ಹೆಣ್ಣುಮಗಳಾಗಿದ್ದಾಳೆ ಎಂದು ಮಹೇಶ್ವರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಅಂದೇಲು ಶ್ರೀ ರಾಮುಲು ಹೇಳಿದ್ದಾರೆ.

ಬುಡಕಟ್ಟು ಹೆಣ್ಣುಮಗಳಾದ ಶಿರೀಷಾ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೂ ನಾವು ಹೋರಾಟ ನಡೆಸುತ್ತೇವೆ. ಶಿರೀಷಾ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಯನ್ನು ಹತ್ಯೆಗೈಯ್ಯಲಾಗಿದೆʼ ಎಂದು ಅಂದೇಲು ಶ್ರೀರಾಮುಲು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

'ಮಹಿಳೆಯರು ಚಿನ್ನವಿದ್ದಂತೆ, ಪೆಟ್ಟಿಗೆಯೊಳಗಿಟ್ಟು ಜೋಪಾನ ಮಾಡಿ': ಮನೆಯಿಂದ ಹೊರಗೆ ಕಾಲಿಡಲು ಬಿಟ್ಟರೆ 'ಭಾರಿ ವಿನಾಶ' ಎಂದ ಕೇರಳದ ಧರ್ಮಗುರು!