ನವದೆಹಲಿ: ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ಸಜ್ಜಾಗುತ್ತಿರುವಂತೆಯೇ ಕೇಂದ್ರ ಸರ್ಕಾರ ಇದಕ್ಕೆ 95,692.31 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಆದರೆ ಮನ್ರೇಗಾ ಯೋಜನೆಗೆ 30,000 ಕೋಟಿ ರೂ. ಮೀಸಲಿಡಲಾಗಿದೆ.
ವಿಕ್ಷಿತ್ ಭಾರತ್-ಗ್ಯಾರೆಂಟಿ ಫಾರ್ ರೋಜ್‌ಗಾರ್ ಆಜೀವಿಕಾ ಮಿಷನ್ (ಗ್ರಾಮೀಣ) ವಿಬಿ-ಜಿ ರಾಮ್ ಜಿ) ಯೋಜನೆ ವರ್ಷದಲ್ಲಿ 125 ದಿನಗಳ ಕೆಲಸದ ಭರವಸೆಯನ್ನು ನೀಡುತ್ತದೆ. ಮನ್ರೇಗಾ ಬದಲಿಗೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ವಿಬಿ-ಜಿ ರಾಮ್ ಜಿ ಜಾರಿಯಾಗುವವರೆಗೆ ಮನ್ರೇಗಾ ಯೋಜನೆ ಮುಂದುವರಿಯುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬಜೆಟ್ ದಾಖಲೆಗಳ ಪ್ರಕಾರ, ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಒಟ್ಟು 1,94,368.81 ಕೋಟಿ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷ 1,86,995.61 ಕೋಟಿ ಮೀಸಲಿಡಲಾಗಿತ್ತು.
ಭೂಸಂಪನ್ಮೂಲ ಇಲಾಖೆಗೆ 2026-27ಕ್ಕೆ 2,654.33 ಕೋಟಿ ಮೀಸಲಿಡಲಾಗಿದೆ. 2025-26 ರಿಂದ ಪರಿಷ್ಕೃತ ಅಂದಾಜಿನ ಪ್ರಕಾರ MGNREGA ಯೋಜನೆಗೆ ಒಟ್ಟು 88,000 ಕೋಟಿ ರೂ.ವೆಚ್ಚ ಮಾಡಲಾಗಿದೆ. ಇನ್ನೂ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ (PMGSY) 2026-27 ಕ್ಕೆ 19,000 ಕೋಟಿ ರೂ. ಹಂಚಿಕೆಯಾಗಿದೆ. ಇದಕ್ಕೆ ಕಳೆದ ವರ್ಷ 11,000 ಕೋಟಿ ವೆಚ್ಚ ಮಾಡಲಾಗಿತ್ತು.
ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಮಿಷನ್ (DAY-NRLM)ಗಾಗಿ 2026-27ಕ್ಕೆ ರೂ. 19,200 ಕೋಟಿಗಳ ಹಂಚಿಕೆಯಾಗಿದೆ. ಕಳೆದ ವರ್ಷ ಇದು ರೂ. 19,005 ಕೋಟಿಗಳಷ್ಟಿತ್ತು.
ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಗಾಗಿ ಈ ವರ್ಷ 54,916.70 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ 54,832.00 ಕೋಟಿ ಮೀಸಲಿಡಲಾಗಿತ್ತು.