ಸಾಂದರ್ಭಿಕ ಚಿತ್ರ online desk
ದೇಶ

ಅಪ್ರಾಪ್ತೆ ಗರ್ಭಿಣಿ ಕೇಸ್: 17 ಪುರುಷರ DNA ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಶಾಕ್; ತಂದೆ ಅರೆಸ್ಟ್

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನಿಖೆ ಪ್ರಾರಂಭವಾದ ಈ ಭಯಾನಕ ಪ್ರಕರಣದಲ್ಲಿ, ಪೊಲೀಸರು ಈ ಹಿಂದೆ ಎರಡನೇ ಆರೋಪಿಯಾಗಿ 17 ವರ್ಷದ ಬಾಲಕನನ್ನು ಬಂಧಿಸಿದ್ದರು, ಈ ಇಬ್ಬರೂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತೆ ಗುರುತಿಸಿದ್ದಳು.

ಮುಂಬಯಿ: ಮಾತು ಬಾರದ ಮತ್ತು ಕಿವಿ ಕೇಳದ 20 ವರ್ಷದ ಯುವತಿಯ ಮೇಲೆ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ್ದು ಧೃಡ ಪಟ್ಟಿದೆ. ಪೊಲೀಸರ ಉನ್ನತ ಮಟ್ಟದ ತನಿಖೆಯ ಬಳಿಕ, ಡಿಎನ್ಎ ಪರೀಕ್ಷೆಗಳ ನಂತರ ಭ್ರೂಣದೊಂದಿಗಿನ ಸಂಬಂಧ ದೃಢಪಟ್ಟ ನಂತರ ತಂದೆಯನ್ನು ಬಂಧಿಸಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನಿಖೆ ಪ್ರಾರಂಭವಾದ ಈ ಭಯಾನಕ ಪ್ರಕರಣದಲ್ಲಿ, ಪೊಲೀಸರು ಈ ಹಿಂದೆ ಎರಡನೇ ಆರೋಪಿಯಾಗಿ 17 ವರ್ಷದ ಬಾಲಕನನ್ನು ಬಂಧಿಸಿದ್ದರು, ಈ ಇಬ್ಬರೂತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತೆ ಗುರುತಿಸಿದ್ದಳು.

ಇತರರ ಆರೋಪಿಗಳ ಪಾತ್ರಗಳನ್ನು ತನಿಖೆ ಮಾಡಲಾಗುತ್ತಿತ್ತು. 17 ಶಂಕಿತರಿಂದ ಡಿಎನ್‌ಎ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರ ತಂದೆಯನ್ನು ಬಂಧಿಸಲಾಗಿದೆ.

ಸೆಪ್ಟೆಂಬರ್ 2025 ರಲ್ಲಿ, ಯುವತಿ ತನ್ನ ಅಜ್ಜಿಗೆ ಹೊಟ್ಟೆಯಲ್ಲಿ ಅಸ್ವಸ್ಥತೆಯ ಬಗ್ಗೆ ವಿವರಿಸಿದ್ದಳು. ನಂತರ ಆಕೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಐದು ತಿಂಗಳ ಗರ್ಭಿಣಿಯಾಗಿರುವುದು ಕಂಡುಬಂದಿತ್ತು. ಆಸ್ಪತ್ರೆ ಆಡಳಿತ ಮಂಡಳಿಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತ್ತು.

ಯುವತಿ ಹೇಳಿಕೆ ನೀಡಲು ಅಸಮರ್ಥಳಾಗಿದ್ದರಿಂದ ಆರಂಭದಲ್ಲಿ ಸಂವಹನ ಸಮಸ್ಯೆಯನ್ನು ಎದುರಿಸಿದೆವು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸರು ತಂದೆಯೊಂದಿಗೆ ಮಾತನಾಡಿದಾಗ ಲೈಂಗಿಕ ದೌರ್ಜನ್ಯದ ನಡೆದಿರುವ ಬಗ್ಗೆ ಪ್ರಶ್ನೆಗಳನ್ನು ತಳ್ಳಿಹಾಕಿ ತಮ್ಮ ಮಗಳು ಹೇಗೆ ಗರ್ಭಿಣಿಯಾದಳು ಎಂಬುದು ತಿಳಿದಿಲ್ಲ ಎಂದು ದೂರು ದಾಖಲಿಸಲು ನಿರಾಕರಿಸಿದ್ದ.

ಮಹಿಳೆಗೆ ಕೌನ್ಸೆಲಿಂಗ್ ನೀಡಿದ ನಂತರ ಆ ದೂರು ದಾಖಲಿಸಲು ಒಪ್ಪಿಕೊಂಡರು.ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಇಬ್ಬರನ್ನು ಬಂಧಿಸಿದ್ದರು, ಎರಡನೇ ಆರೋಪಿ 17 ವರ್ಷದ ಬಾಲಕ, ತಂದೆ ಸೇರಿದಂತೆ 17 ಶಂಕಿತರಿಂದ ಡಿಎನ್ಎ ಮತ್ತು ರಕ್ತದ ಮಾದರಿಗಳನ್ನು ತೆಗೆದುಕೊಂಡು, ಅತ್ಯಾಚಾರಿಯ ಗುರುತನ್ನು ಪತ್ತೆ ಹಚ್ಚಲು ಭ್ರೂಣದಿಂದ ಪಡೆದ ಆನುವಂಶಿಕ ದತ್ತಾಂಶದೊಂದಿಗೆ ಅವುಗಳನ್ನು ಹೋಲಿಸಿದ್ದಾರೆ.

ಜನವರಿ 27 ರಂದು ವರದಿ ಬಂದಿದ್ದು ಒಂದೇ ಒಂದು ಸಕಾರಾತ್ಮಕ ಹೊಂದಾಣಿಕೆ ಕಂಡುಬಂದಿದ್ದು, ಅದು ಸಂತ್ರಸ್ತೆಯ ತಂದೆಯೊಂದಿಗೆ ಹೋಲಿಕೆಯಾಗಿದೆ. ಪೊಲೀಸರ ಪ್ರಕಾರ, ಕಳೆದ ವರ್ಷದ ಮಾರ್ಚ್ ನಲ್ಲಿ ಅತ್ಯಾಚಾರ ನಡೆದಿತ್ತು.ಪ್ರಕರಣವನ್ನು ಸೆಪ್ಟೆಂಬರ್ 22 ರಂದು ದಾಖಲಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

IPL 2026: Shreyas Iyer ಗೆ ಮತ್ತೆ ದಂಡ.. ನಾಯಕ ಮಾತ್ರವಲ್ಲ ಇಡೀ ಪಂಜಾಬ್ ತಂಡಕ್ಕೆ ಬರೆ ಹಾಕಿದ ಮ್ಯಾಚ್ ರೆಫರಿ!

'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

SCROLL FOR NEXT