ನಕ್ಸಲರ ಸಾಮೂಹಿಕ ಶರಣಾಗತಿ 
ದೇಶ

Chhattisgarh: 51 ನಕ್ಸಲರ ಸಾಮೂಹಿಕ ಶರಣಾಗತಿ, 34 ಮಂದಿ ಮಹಿಳೆಯರು!

ಬಸ್ತಾರ್ ವಿಭಾಗದ ಎರಡು ಜಿಲ್ಲೆಗಳಲ್ಲಿ ಶನಿವಾರ ಪೊಲೀಸರ ಮುಂದೆ 1.61 ಕೋಟಿ ರೂ.ಗಳ ಸಾಮೂಹಿಕ ಬಹುಮಾನವನ್ನು ಹೊಂದಿದ್ದ 51 ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.

ಬಸ್ತಾರ್: ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ ನಡೆಯುತ್ತಿರುವ ನಕ್ಸಲ್ ನಿಗ್ರಹ ಕಾರ್ಯಾಚರಣೆಗಳ ನಡುವೆಯೇ ಇಂದು ಬರೊಬ್ಬರಿ 51 ಮಂದಿ ನಕ್ಸಲರು ಪೊಲೀಸರ ಎದುರು ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಬಸ್ತಾರ್ ವಿಭಾಗದ ಎರಡು ಜಿಲ್ಲೆಗಳಲ್ಲಿ ಶನಿವಾರ ಪೊಲೀಸರ ಮುಂದೆ 1.61 ಕೋಟಿ ರೂ.ಗಳ ಸಾಮೂಹಿಕ ಬಹುಮಾನವನ್ನು ಹೊಂದಿದ್ದ 51 ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸ್ತಾರ್ ಜಿಲ್ಲೆಯ ಪ್ರಧಾನ ಕಚೇರಿಯಾದ ಜಗದಲ್‌ಪುರದಲ್ಲಿ ಬಸ್ತಾರ್ ಪಾಂಡಮ್ 2026 ಉತ್ಸವದ ಉದ್ಘಾಟನೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ಭೇಟಿಗಾಗಿ ರಾಯ್‌ಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಸಾಮೂಹಿಕ ಶರಣಾಗತಿ ಪ್ರಕ್ರಿಯೆ ನಡೆದಿದೆ.

ಒಟ್ಟು 51 ಮಂದಿ ನಕ್ಸಲರು ಶರಣಾಗಿದ್ದು ಈ ಪೈಕಿ 34 ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಬಿಜಾಪುರ ಜಿಲ್ಲೆಯಲ್ಲಿ 20 ಮಹಿಳೆಯರು ಸೇರಿದಂತೆ 30 ಕಾರ್ಯಕರ್ತರು ಶರಣಾಗಿದ್ದಾರೆ ಎಂದು ಬಸ್ತಾರ್ ರೇಂಜ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಟ್ಟಿಲಿಂಗಮ್ ಹೇಳಿದ್ದಾರೆ.

14 ಮಹಿಳಾ ಸದಸ್ಯರು ಸೇರಿದಂತೆ 21 ಮಂದಿ ನೆರೆಯ ಸುಕ್ಮಾ ಜಿಲ್ಲೆಯಲ್ಲಿ "ಬಸ್ತಾರ್ ಪೊಲೀಸರ ಪೂನಾ ಮಾರ್ಗಮ್ ಪುನರ್ವಸತಿ ಉಪಕ್ರಮ"ದಡಿಯಲ್ಲಿ ಮುಖ್ಯವಾಹಿನಿಗೆ ಸೇರಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel