ಸಂಗ್ರಹ ಚಿತ್ರ 
ದೇಶ

ಹೆಡ್‌ಪೋನ್ ಹಾಕಿಕೊಂಡು PUBG ಆಟ: BP ಹೆಚ್ಚಾಗಿ ಯುವಕ ಸಾವು..!

ಯುವಕ ಶುಕ್ರವಾರ ತಡರಾತ್ರಿಯವರೆಗೂ ಪಬ್‌ಜಿ ಗೇಮ್ ಆಡಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಈ ನಡುವೆ ಶಬ್ದ ಕೇಳಿ ಮನೆಯವರು ರೂಮಿಗೆ ಧಾವಿಸಿದಾಗ ಕೈಫ್ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಲಖನೌ: ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ ಮೂವರು ಸಹೋದರಿಯರು ಬಲಿಯಾಗಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.

ಪಬ್‌ಜಿ ಗೇಮ್ ಆಡುತ್ತಿರುವಾಗಲೇ ರಕ್ತದೊತ್ತಡ ಹೆಚ್ಚಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಮೃತ ಯುವಕನನ್ನು ಮೊಹಮ್ಮದ್ ಕೈಫ್ (22) ಎಂದು ಗುರ್ತಿಸಲಾಗಿದೆ. ಈತ ಖೈರ್‌ನಗರದ ಗುಲಾರ್ ವಾಲಿ ಗಾಲಿಯ ನಿವಾಸಿಯಾಗಿರುವ ಪ್ರಾಪರ್ಟಿ ಡೀಲರ್ ಫಾರುಕ್ ಅವರ ಏಕೈಕ ಪುತ್ರನಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ಗೆ ಅಡಿಕ್ಟ್ ಆಗಿದ್ದ ಎಂದು ತಿಳಿದುಬಂದಿದೆ.

ಯುವಕ ಶುಕ್ರವಾರ ತಡರಾತ್ರಿಯವರೆಗೂ ಪಬ್‌ಜಿ ಗೇಮ್ ಆಡಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಈ ನಡುವೆ ಶಬ್ದ ಕೇಳಿ ಮನೆಯವರು ರೂಮಿಗೆ ಧಾವಿಸಿದಾಗ ಕೈಫ್ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಕೂಡಲೇ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ವೇಳೆ ರಕ್ತದೊತ್ತಡ 300ಕ್ಕೆ ದಾಟಿರುವುದು ಕಂಡುಬಂದಿದೆ.

ತಕ್ಷಣವೇ ಆತನನ್ನು ದೆಹಲಿಯ ಆಸ್ಪತ್ರೆಗೆ ರವಾನಿಸಿದ್ದು, 2 ದಿನಗಳ ಜೀವನ್ಮರಣ ಹೋರಾಟ ನಡೆಸಿ ಭಾನುವಾರ ಕೊನೆಯುಸಿರೆಳೆದಿದ್ದಾನೆ.

ತೀವ್ರ ಮಾನಸಿಕ ಒತ್ತಡ, ನಿದ್ರಾಹೀನತೆಯಿಂದ ರಕ್ತದೊತ್ತಡ ಹೆಚ್ಚಿದ್ದು, ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಿದೆ. ಇದರಿಂದ ಯುವಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ಮಂಡಿಯೂರಿದ PCB; ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮೇಲಿನ ನಿರ್ಬಂಧ ತಳ್ಳಿಹಾಕಿದ ICC; ನಿಗದಿಯಂತೆ India vs Pak ಮ್ಯಾಚ್

BCCI ಆಟಗಾರರ ಒಪ್ಪಂದ: ಇಶಾನ್ ಕಿಶನ್, ಮಹಮದ್ ಶಮಿ, ಶ್ರೇಯಾಂಕ ಪಾಟೀಲ್ ಸೇರಿ 8 ಮಂದಿಗೆ ಗೇಟ್ ಪಾಸ್!

ಮೋದಿ ನಡೆ 'ಹೇಡಿತನದ ಪರಮಾವಧಿ'; ನರವಾಣೆ ಪುಸ್ತಕ 56 ಇಂಚಿನ ಎದೆಯೊಳಗಿನ ಪುಕ್ಕಲುತನ ಬಯಲು ಮಾಡಿದೆ!

ರಕ್ಷಣಾ ಕೈಗಾರಿಕಾ ಸಹಕಾರವನ್ನು ಹೆಚ್ಚಿಸುವ ಜಂಟಿ ಘೋಷಣೆಗೆ ಭಾರತ ಮತ್ತು ಗ್ರೀಸ್ ಸಹಿ!

T20 ವಿಶ್ವಕಪ್ 2026: ಕೆನಡಾ ವಿರುದ್ಧ ದಕ್ಷಿಣ ಆಫ್ರಿಕಾಗೆ 57 ರನ್ ಜಯ

SCROLL FOR NEXT