ನೈನಾರ್ ನಾಗೇಂದ್ರನ್ 
ದೇಶ

ನಟಿ ತ್ರಿಶಾ ವಾರ್ನಿಂಗ್ ಬಳಿಕ ವಿಷಾದ ವ್ಯಕ್ತಪಡಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ

ನಟ ವಿಜಯ್ ಅವರೊಂದಿಗೆ ಸಂಬಂಧ ಕಲ್ಪಿಸುವ ತಮ್ಮ ಕುರಿತಾದ ಹೇಳಿಕೆಗೆ ಕೆಂಡಾಮಂಡಲವಾಗಿರುವ ನಟಿ ತ್ರಿಶಾ ಅವರು, ತಮ್ಮ ವಕೀಲರ ಮೂಲಕ ಎಚ್ಚರಿಕೆ ನೀಡುವ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ತಿರುನೆಲ್ವೇಲಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಇತ್ತೀಚೆಗೆ ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ನಟ ವಿಜಯ್ ಅವರೊಂದಿಗೆ ಸಂಬಂಧ ಕಲ್ಪಿಸುವ ತಮ್ಮ ಕುರಿತಾದ ಹೇಳಿಕೆಗೆ ಕೆಂಡಾಮಂಡಲವಾಗಿರುವ ನಟಿ ತ್ರಿಶಾ ಅವರು, ತಮ್ಮ ವಕೀಲರ ಮೂಲಕ ಎಚ್ಚರಿಕೆ ನೀಡುವ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಇಂದು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ನಾಗೇಂದ್ರನ್, "ನನ್ನ ರಾಜಕೀಯ ಜೀವನದಲ್ಲಿ, ನನ್ನ ಜೀವನದಲ್ಲಿ ವೈಯಕ್ತಿಕ ದಾಳಿಗೆ ಅವಕಾಶ ನೀಡಿಲ್ಲ ಅಥವಾ ಯಾರ ಮೇಲೂ ವೈಯಕ್ತಿಕ ದಾಳಿ ಮಾಡಿಲ್ಲ" ಎಂದು ಹೇಳಿದರು.

ತಮ್ಮ ಪದಗಳ ಆಯ್ಕೆಯು ಅನುಚಿತವಾಗಿದೆ ಎಂದು ಒಪ್ಪಿಕೊಂಡ ಅವರು, ಇದು ನಾಲಿಗೆಯ ಎಡವಟ್ಟು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಈಗಾಗಲೇ ಈ ವಿಷಯದ ಬಗ್ಗೆ ತಮ್ಮೊಂದಿಗೆ ಮಾತನಾಡಿದ್ದಾರೆ ಮತ್ತು ಮಾಜಿ ರಾಜ್ಯಾಧ್ಯಕ್ಷೆ ಕೆ. ಅಣ್ಣಾಮಲೈ ಕೂಡ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮೊಂದಿಗೆ ಚರ್ಚಿಸಿದ್ದಾರೆ. ನನ್ನ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು "ಪ್ರಾಮಾಣಿಕವಾಗಿ ವಿಷಾದ" ವ್ಯಕ್ತಪಡಿಸುತ್ತೇನೆ ಎಂದು ನೈನಾರ್ ಹೇಳಿದ್ದಾರೆ.

ನಟ-ರಾಜಕಾರಣಿ, ಟಿವಿಕೆ ಮುಖ್ಯಸ್ಥ ವಿಜಯ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ನಾಗೇಂದ್ರನ್ ಅವರು, ವಿಜಯ್ ತುಂಬಾ ಸರಳ ವ್ಯಕ್ತಿ, ಅವರಿಗೆ ರಾಜಕೀಯ ಅರ್ಥವಾಗುವುದಿಲ್ಲ. ಮೊದಲು ಅವರು ತಮ್ಮ ಗೂಡಿನಿಂದ ಹೊರಬರಬೇಕು. ತಮ್ಮ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಬೇಕು, ಜೊತೆಗೆ ತಮಿಳುನಾಡಿನ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ತ್ರಿಶಾ ಅವರ ಮನೆಯಿಂದಲೂ ಹೊರಬರಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; ಇಂದು UNSC ಮತದಾನ!

'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

ಗಡಿ ನುಗ್ಗಿ RSS ಶಿಬಿರ-ಮನೆಗಳ ಮೇಲೆ ನೇರ ದಾಳಿ: ಮತ್ತೆ ಬಾಲ ಬಿಚ್ಚಿದ ಪಾಕ್‌; ಭಾರತಕ್ಕೆ ಗೊಡ್ಡು ಬೆದರಿಕೆ

ಅತ್ತೆ ಮನೆ ಕಿರುಕುಳ: ಬೇಸತ್ತು ಬೆಂಕಿ ಹಚ್ಚಿಕೊಂಡು ಗರ್ಭಿಣಿ ಮಹಿಳೆ ಆತ್ಮಹತ್ಯೆ, ನಾಲ್ವರ ಬಂಧನ

ಸೋಲಿನಲ್ಲೂ RCB ದಾಖಲೆ ಮುರಿದ CSK: 210 ರನ್ ಬಾರಿಸಿ ಚೆನ್ನೈ ವಿರುದ್ಧ 5 ವಿಕೆಟ್ ಗಳಿಂದ ಗೆದ್ದ ಪಂಜಾಬ್‌!

SCROLL FOR NEXT