ಇಮ್ತೀಯಾಜ್ ಜಲೀಲ್ 
ದೇಶ

ಕೆಟ್ಟ ದೃಷ್ಟಿಯಿಂದ ಮುಸ್ಲಿಂ ಮಹಿಳೆ ಮುಟ್ಟುವವರ ಕೈ ಕತ್ತರಿಸುತ್ತೇನೆ: AIMIM ನಾಯಕನ ಬೆದರಿಕೆ!

ಸೋ ಕಾಲ್ಡ್ ಜಾತ್ಯತೀತ ಪಕ್ಷಗಳು ಗೂಂಡಾಗಳು ಮತ್ತು ಕ್ರಿಮಿನಲ್ ಗಳ ಪರವಾಗಿವೆ. ಆದರೆ ಮುಸ್ಲಿಮರನ್ನು ಬೆಂಬಲಿಸಲು ಹಿಂಜರಿಯುತ್ತವೆ.

ಜಲ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಸ್ಲಿಂ ಮಹಿಳೆಯೊಬ್ಬರ 'ಹಿಜಾಬ್' ಎಳೆದ ವಿವಾದದ ನಡುವೆ ಮುಸ್ಲಿಂ ಮಹಿಳೆಯರನ್ನು ಕೆಟ್ಟ ಉದ್ದೇಶದಿಂದ ಮುಟ್ಟುವ ಯಾವುದೇ ವ್ಯಕ್ತಿಯ ಕೈಯನ್ನು ಕತ್ತರಿಸುವುದಾಗಿ AIMIM ನಾಯಕ ಇಮ್ತೀಯಾಜ್ ಜಲೀಲ್ ಬೆದರಿಕೆ ಹಾಕಿದ್ದಾರೆ.

ಶುಕ್ರವಾರ ಮಹಾರಾಷ್ಟ್ರದ ಜಲ್ನಾ ನಗರದಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಜಲೀಲ್, ಸೋ ಕಾಲ್ಡ್ ಜಾತ್ಯತೀತ ಪಕ್ಷಗಳು ಗೂಂಡಾಗಳು ಮತ್ತು ಕ್ರಿಮಿನಲ್ ಗಳ ಪರವಾಗಿವೆ. ಆದರೆ ಮುಸ್ಲಿಮರನ್ನು ಬೆಂಬಲಿಸಲು ಹಿಂಜರಿಯುತ್ತವೆ ಎಂದು ಆರೋಪಿಸುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಿತೀಶ್ ಕುಮಾರ್ ಅವರ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಜಲೀಲ್, ಉತ್ತರ ಪ್ರದೇಶದ ಸಚಿವರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಕೆಟ್ಟ ಉದ್ದೇಶದಿಂದ ಮುಸ್ಲಿಂ ಮಹಿಳೆಯರನ್ನು ಮುಟ್ಟಿದರೆ ಅವರ ಕೈ ಕತ್ತರಿಸುತ್ತೇನೆ ಎಂದು ಹೇಳಿದರು.

ಬಿಹಾರ ಸಿಎಂ ನಿತೀಶ್ ಕುಮಾರ್, ಮಹಿಳೆಯನ್ನು ಆಕೆಯನ್ನು ಮುಟ್ಟಿದ್ರೆ ಏನಾಗುತ್ತದೆ ಎಂದು ನಿಶಾದ್ ಹೇಳಿದ್ದರು. ತದನಂತರ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದರು. ಜನವರಿ 15 ರಂದು ನಡೆಯಲಿರುವ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಹಿನ್ನೆಲೆಯಲ್ಲಿ AIMIM ನ 17 ಅಭ್ಯರ್ಥಿಗಳ ಪರವಾಗಿ ಜಲೀಲ್ ಪ್ರಚಾರ ಮಾಡಿದರು.

'ಸೋ ಕಾಲ್ಡ್ ಜಾತ್ಯತೀತ ಪಕ್ಷಗಳು ಸಾಮಾನ್ಯವಾಗಿ ಎಐಎಂಐಎಂ ಅನ್ನು ಕೋಮುವಾದಿ ಮತ್ತು ಅಸ್ಪೃಶ್ಯ ಪಕ್ಷವೆಂದು ಬ್ರಾಂಡ್ ಮಾಡುತ್ತವೆ, ಆದರೆ ವಾಸ್ತವದಲ್ಲಿ ತಾವೇ ಅತ್ಯಂತ ಕೋಮುವಾದಿಗಳು ಮತ್ತು ಮುಸ್ಲಿಮರು ನಾಯಕರಾಗಿ ಬೆಳೆಯಲು ಬಯಸುವುದಿಲ್ಲ ಎಂದರು.

ಗೂಂಡಾಗಳು ಮತ್ತು ಕ್ರಿಮಿನಲ್ ಅಂಶಗಳಿಗೆ ಒಲವು ತೋರ್ತಾರೆ. ಆದರೆ ಅವರು ಮುಸ್ಲಿಮರೊಂದಿಗೆ ನಿಲ್ಲಲು ಅಥವಾ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಹಿಂಜರಿಯುತ್ತಾರೆ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!