ದಯಾನಿಧಿ ಮಾರನ್  
ದೇಶ

'ಉತ್ತರ ಭಾರತದಲ್ಲಿ ಹೆಣ್ಣುಮಕ್ಕಳನ್ನು ಮದುವೆಯಾಗಿ, ಮನೆಯಲ್ಲೇ ಇರಿ, ಮಕ್ಕಳನ್ನು ಹೆರಿ ಎನ್ನುತ್ತಾರೆ': ದಯಾನಿಧಿ ಮಾರನ್ ಹೇಳಿಕೆ; Video

ಆ ವಿಶ್ವಾಸ ತಮಿಳುನಾಡಿನಲ್ಲಿದೆ. ಇಲ್ಲಿ ನಾವು ಹೆಣ್ಣುಮಕ್ಕಳನ್ನು ಓದಲು, ಕಲಿಯಲು, ಉದ್ಯೋಗಕ್ಕೆ ಹೋಗಲು ಪ್ರೋತ್ಸಾಹಿಸುತ್ತೇವೆ. ಆದರೆ ಉತ್ತರ ಭಾಗದಲ್ಲಿ ಹುಡುಗಿಯರಿಗೆ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲಿರಿ, ಅಡುಗೆಮನೆಯಲ್ಲಿರಿ, ಮಗುವನ್ನು ಹೆರಿ, ಅದು ನಿಮ್ಮ ಕೆಲಸ ಎನ್ನುತ್ತಾರೆ.

ಚೆನ್ನೈ: ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಉತ್ತರ ಭಾರತದ ಹೆಣ್ಣುಮಕ್ಕಳನ್ನು ತಮಿಳು ನಾಡಿನ ಹೆಣ್ಣುಮಕ್ಕಳ ಜೊತೆ ಹೋಲಿಸಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಚೆನ್ನೈ ಸೆಂಟ್ರಲ್‌ನಿಂದ ನಾಲ್ಕು ಬಾರಿ ಸಂಸದರಾಗಿರುವ ಮಾರನ್, ತಮಿಳುನಾಡಿನಲ್ಲಿ ಮಹಿಳೆಯರನ್ನು ಓದಲು, ಅಧ್ಯಯನ ಮಾಡಲು ಪ್ರೋತ್ಸಾಹಿಸಿದರೆ, ಉತ್ತರ ಭಾರತದಲ್ಲಿ ಮಹಿಳೆಯರನ್ನು ಮದುವೆಯಾಗಲು, ಮಕ್ಕಳನ್ನು ಹೆರಲು ಪ್ರೋತ್ಸಾಹಿಸಲಾಗುತ್ತದೆ ಎಂದಿದ್ದಾರೆ.

ಕ್ವಾಯ್ದ್-ಇ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾರನ್, ನಮ್ಮಲ್ಲಿ ಹೆಣ್ಣುಮಕ್ಕಳು ಲ್ಯಾಪ್‌ಟಾಪ್‌ನೊಂದಿಗೆ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದಿರಬೇಕು, ನೀವು ಸಂದರ್ಶನಕ್ಕೆ ಹಾಜರಾಗಲಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲಿ. ಆ ವಿಶ್ವಾಸ ತಮಿಳುನಾಡಿನಲ್ಲಿದೆ. ಇಲ್ಲಿ ನಾವು ಹೆಣ್ಣುಮಕ್ಕಳನ್ನು ಓದಲು, ಕಲಿಯಲು, ಉದ್ಯೋಗಕ್ಕೆ ಹೋಗಲು ಪ್ರೋತ್ಸಾಹಿಸುತ್ತೇವೆ. ಆದರೆ ಉತ್ತರ ಭಾಗದಲ್ಲಿ ಹುಡುಗಿಯರಿಗೆ ಕೆಲಸಕ್ಕೆ ಹೋಗಬೇಡಿ, ಮನೆಯಲ್ಲಿರಿ, ಅಡುಗೆಮನೆಯಲ್ಲಿರಿ, ಮಗುವನ್ನು ಹೆರಿ, ಅದು ನಿಮ್ಮ ಕೆಲಸ ಎನ್ನುತ್ತಾರೆ.

ಇದು ತಮಿಳುನಾಡು, ದ್ರಾವಿಡ ರಾಜ್ಯ, ಕಲೈನಾರ್ (ಮಾಜಿ ಮುಖ್ಯಮಂತ್ರಿ ದಿವಂಗತ ಎಂ ಕರುಣಾನಿಧಿ), ಅಣ್ಣಾ (ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ ಮತ್ತು (ಮುಖ್ಯಮಂತ್ರಿ) ಎಂ ಕೆ ಸ್ಟಾಲಿನ್ ಅವರ ನಾಡು. ಇಲ್ಲಿ, ನಿಮ್ಮ ಪ್ರಗತಿ ತಮಿಳುನಾಡಿನ ಪ್ರಗತಿಯಾಗಿದೆ. ಅದಕ್ಕಾಗಿಯೇ ಜಾಗತಿಕ ಕಂಪನಿಗಳು ಚೆನ್ನೈಗೆ ಬರುತ್ತವೆ. ಇಲ್ಲಿರುವ ಎಲ್ಲರೂ ತಮಿಳಿನಲ್ಲಿ ಮಾತ್ರವಲ್ಲ, ಇಂಗ್ಲಿಷ್‌ನಲ್ಲೂ ಶಿಕ್ಷಣ ಪಡೆದಿದ್ದಾರೆ. ಅವರು ಮುನ್ನಡೆಸುತ್ತಾರೆ. ಸರ್ಕಾರವು ಮಹಿಳೆಯರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಯಾವಾಗಲೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೇವೆ ಎಂದು ಬಿಲಿಯನೇರ್ ಕಲಾನಿಧಿ ಮಾರನ್ ಅವರ ಸಹೋದರ ದಯಾನಿಧಿ ಮಾರನ್ ಹೇಳಿದರು.

ಡಿಎಂಕೆ ಸಂಸದ ತಮಿಳುನಾಡು ಭಾರತದ ಅತ್ಯುತ್ತಮ ರಾಜ್ಯ ಮತ್ತು ಎಂ ಕೆ ಸ್ಟಾಲಿನ್ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೇಳಿದರು.

ಈ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ತಮಿಳುನಾಡಿನ ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ, ಮತ್ತೊಮ್ಮೆ, ದಯಾನಿಧಿ ಮಾರನ್ ಉತ್ತರ ಭಾರತೀಯರನ್ನು ನಿಂದಿಸಿದ್ದಾರೆ. ಡಿದಯಾನಿಧಿ ಮಾರನ್ ಅವರಿಗೆ ಸಾಮಾನ್ಯ ಜ್ಞಾನವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು.

ದಯಾನಿಧಿ ಮಾರನ್ ಅವರ ಹೇಳಿಕೆಗಳು ದುರದೃಷ್ಟಕರ ಎಂದು ಬಿಜೆಪಿ ನಾಯಕಿ ಅನಿಲಾ ಸಿಂಗ್ ಹೇಳಿದ್ದಾರೆ. ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ ಭಾರತವು ಶಕ್ತಿಯನ್ನು ಪೂಜಿಸುತ್ತದೆ ಎಂಬುದನ್ನು ಅವರು ಮರೆತಿದ್ದಾರೆ. ಶಕ್ತಿಯನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಎಂದು ವಿಂಗಡಿಸಬಹುದು ಎಂದು ಅವರು ಭಾವಿಸಿದರೆ, ಅವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವಿಲ್ಲ ಎಂದರ್ಥ. ಅವರು ಮೈತ್ರಿ ಮಾಡಿಕೊಂಡಿರುವ ಪಕ್ಷದಲ್ಲಿ ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಅಥವಾ ನಮ್ಮ ಅಧ್ಯಕ್ಷೆ ದ್ರೌಪದಿ ಮುರ್ಮು ಬಗ್ಗೆ ಮಹಿಳೆಯರಲ್ಲವೇ, ಈ ವಿಭಜಕ ರಾಜಕೀಯ ಕೆಲಸ ಮಾಡುವುದಿಲ್ಲ ಎಂದರು.

ಆದಾಗ್ಯೂ, ಡಿಎಂಕೆ, ದಯಾನಿಧಿ ಮಾರನ್ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದೆ. ಇದು ರಾಜ್ಯವನ್ನು ಆಳುತ್ತಿರುವ ಪಕ್ಷವನ್ನು ಅವಲಂಬಿಸಿರುತ್ತದೆ. ಈಗ ಕಾಂಗ್ರೆಸ್ ಮಹಿಳೆಯರಿಗೆ ಸಬಲೀಕರಣ ನೀಡುತ್ತಿದೆ. ಕಾಂಗ್ರೆಸ್ ಎಲ್ಲೆಲ್ಲಿ ಆಡಳಿತ ನಡೆಸುತ್ತಿದೆಯೋ ಅಲ್ಲೆಲ್ಲಾ ಅವರು ಮಹಿಳೆಯರ ಶಿಕ್ಷಣಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ, ಇಲ್ಲಿ ತಮಿಳುನಾಡಿನಲ್ಲಿ, ನಾವು ಮಹಿಳೆಯರಿಗಾಗಿ ಹೋರಾಡಿದ್ದೇವೆ, ಅವರನ್ನು ಸಬಲೀಕರಣಗೊಳಿಸಿದ್ದೇವೆ. ನಾವು ಅವರಿಗೆ ಶಿಕ್ಷಣ ನೀಡಿದ್ದೇವೆ. ನಾವು ಅವರಿಗೆ ಉದ್ಯೋಗ ನೀಡಿದ್ದೇವೆ. ಸರ್ಕಾರಿ ಉದ್ಯೋಗಗಳಲ್ಲಿಯೂ ನಾವು ಸ್ಥಾನಗಳನ್ನು ಕಾಯ್ದಿರಿಸಿದ್ದೇವೆ. ನಾವು ಮೊದಲಿನಿಂದಲೂ ಮಹಿಳಾ ಹಕ್ಕುಗಳ ಪ್ರಗತಿಗಾಗಿ ಕೆಲಸ ಮಾಡುತ್ತಿದ್ದೇವೆ. ಉತ್ತರದಲ್ಲಿ, ಮಹಿಳೆಯರಿಗಾಗಿ ಹೋರಾಡಲು ಯಾರೂ ಇಲ್ಲ. ಅಷ್ಟೆ ಎಂದು ಡಿಎಂಕೆಯ ಟಿಕೆಎಸ್ ಎಳಂಗೋವನ್ ಹೇಳಿದರು.

ಸರ್ಕಾರಿ ಯೋಜನೆಗಳನ್ನು ಬಳಸಿಕೊಂಡು ಶಿಕ್ಷಣ, ಸಬಲೀಕರಣ ಮತ್ತು ಉದ್ಯೋಗಕ್ಕೆ ಅರ್ಹರಾಗಲು ಮಹಿಳಾ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಮಾರನ್ ಅವರ ಉದ್ದೇಶ ಎಂದು ಡಿಎಂಕೆ ಮೂಲಗಳು ತಿಳಿಸಿವೆ. ದೇಶದ ಕೈಗಾರಿಕಾ ಮಹಿಳಾ ಉದ್ಯೋಗಿಗಳಲ್ಲಿ ತಮಿಳುನಾಡು ಮಾತ್ರ ಶೇ. 40 ಕ್ಕಿಂತ ಹೆಚ್ಚು ಜನರನ್ನು ಹೊಂದಿದೆ ಎಂಬುದು ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ ಇದನ್ನು ನೋಡಬೇಕು ಎಂದು ಮೂಲಗಳು ತಿಳಿಸಿವೆ. ದಯಾನಿಧಿ ಮಾರನ್ ಅವರ ಟೀಕೆ ಬಗ್ಗೆ ಕೇಳಿದಾಗ, ಹೋಲಿಕೆ ಚರ್ಚಾಸ್ಪದವಾಗಿದೆ, ಆದರೆ ಒಂದು ಸಂದೇಶವಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BMC Exit poll results: ಮತಗಟ್ಟೆ ಸಮೀಕ್ಷೆ ಪ್ರಕಟ! ಯಾರಿಗೆ ಎಷ್ಟು ಸ್ಥಾನ?

ತಪ್ಪಿದ ಮಹಾ ದುರಂತ: ಲಗೇಜ್ ಸಿಲುಕಿ ಏರ್ ಇಂಡಿಯಾ ವಿಮಾನದ ಇಂಜಿನ್ ಗೆ ಹಾನಿ, ಪ್ರಯಾಣಿಕರು ಬಚಾವ್! Video

BCCI ವಿರುದ್ಧ ತೊಡೆ ತಟ್ಟಿದ್ದ ಬಾಂಗ್ಲಾದೇಶಕ್ಕೆ ತನ್ನದೇ ಆಟಗಾರರಿಂದ ಮುಖಭಂಗ, BPL ಟೂರ್ನಿಯೇ ರದ್ದು?

ಸಾಯಿ ಲೇಔಟ್ ಪ್ರವಾಹ ಮರುಕಳಿಸುವುದಿಲ್ಲ, ಏಪ್ರಿಲ್ ಅಂತ್ಯದೊಳಗೆ ರೈಲ್ವೆ ವೆಂಟ್ ಕೆಲಸ ಮುಗಿಸಿ: ಜಿಬಿಎ ಮುಖ್ಯಸ್ಥ ಮಹೇಶ್ವರ ರಾವ್

Video: ದೇಗುಲ ಉತ್ಸವಕ್ಕೆ ಬಂದಿದ್ದ ಗಜೇಂದ್ರನ್ ಆನೆ ಕುಸಿದು ಸಾವು!

SCROLL FOR NEXT