ಉದ್ಧವ್ ಠಾಕ್ರೆ, ದೇವೇಂದ್ರ ಫಡ್ನವೀಸ್ 
ದೇಶ

BMC Exit polls: ಮತಗಟ್ಟೆ ಸಮೀಕ್ಷೆ ಪ್ರಕಟ! ಯಾರಿಗೆ ಎಷ್ಟು ಸ್ಥಾನ?

ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದರೂ ಮರಾಠಿ ಮತ್ತು ಮುಸ್ಲಿಂ ಮತಗಳನ್ನು ಪಡೆಯಬಹುದು ಆದರೆ, ಉತ್ತರ ಹಾಗೂ ದಕ್ಷಿಣ ಭಾರತೀಯರು ಹೆಚ್ಚಾಗಿ ಬಿಜೆಪಿಗೆ ಮತ್ತ ಹಾಕಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

ಮುಂಬೈ: ಪ್ರತಿಷ್ಠಿತ ಬೃಹನ್‌ಮುಂಬೈ ಕಾರ್ಪೊರೇಷನ್‌ (BMC)ಗೆ ಗುರುವಾರ ನಡೆದ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದೆ. ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಶಿವಸೇನೆ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಆಕ್ಸಿಸ್ ಮೈ ಇಂಡಿಯಾ ಸೇರಿದಂತೆ ಮೂರು ಮತಗಟ್ಟೆ ಸಮೀಕ್ಷೆ (exit polls) ತಿಳಿಸಿವೆ.

ಠಾಕ್ರೆ ಸಹೋದರರು ಮತ್ತೆ ಒಂದಾಗಿದ್ದರೂ ಮರಾಠಿ ಮತ್ತು ಮುಸ್ಲಿಂ ಮತಗಳನ್ನು ಪಡೆಯಬಹುದು ಆದರೆ, ಉತ್ತರ ಹಾಗೂ ದಕ್ಷಿಣ ಭಾರತೀಯರು ಹೆಚ್ಚಾಗಿ ಬಿಜೆಪಿಗೆ ಮತ್ತ ಹಾಕಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ.

ಬಹುತೇಕ ಯುವ ಮತದಾರರು ಮತ್ತು ಮಹಿಳೆಯರು ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಬೃಹನ್‌ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ (Axis My India) JVC (ಜೆವಿಸಿ) ಸಮೀಕ್ಷೆಯಲ್ಲಿ ಹೇಳಲಾಗಿದೆ.

JVC ಸಮೀಕ್ಷೆ ಪ್ರಕಾರ, ಬಿಜೆಪಿ 138 ಸ್ಥಾನಗಳನ್ನು ಪಡೆದರೆ, ಉದ್ಧವ್ ಠಾಕ್ರೆ ಶಿವಸೇನಾ (UBT) 59 ಸ್ಥಾನ, ಕಾಂಗ್ರೆಸ್ 23 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.

ಆಕ್ಸಿಸ್ ಮೈ ಇಂಡಿಯಾ (Axis My India) ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಶಿವಸೇನೆ 131-151 ಸ್ಥಾನಗಳನ್ನು ಮತ್ತು ಸೇನಾ ಯುಬಿಟಿ ಮೈತ್ರಿಕೂಟ 58-68 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.

ಇನ್ನೂ Sakal ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಶಿವಸೇನೆಗೆ 119 ಸ್ಥಾನ, UBT 75 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದು, ಕಾಂಗ್ರೆಸ್ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಭವಿಷ್ಯ ನುಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ಕೆಲಹೊತ್ತು ಧ್ಯಾನ

'ಮೋದಿ ಅಭಿಮಾನಿಗಳು ಬಳಸುವ ಭಾಷೆ...; ಕ್ಷಮಿಸುವುದಲ್ಲ, ನೀವೇ ಕ್ಷಮೆ ಕೇಳಬೇಕು': ಪ್ರಧಾನಿ ವಿಡಿಯೋಗೆ ಉದ್ಧವ್ ಠಾಕ್ರೆ ಟಾಂಗ್

ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ ಕೆರಳಿದ ಆಪ್; E20 ವಿರುದ್ಧ ಆ. 4ರಂದು ಪ್ರಧಾನಿ ನಿವಾಸ ಚಲೋ ಘೋಷಿಸಿದ ಕೇಜ್ರಿವಾಲ್

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಹಿಮಪಾತ: ಪರ್ವತಾರೋಹಣ ದಿಗ್ಗಜ 'Nims' Purja ದುರಂತ ಅಂತ್ಯ, ಕೊನೆಯ ಕ್ಷಣದ Video ವೈರಲ್

ಕಾವೇರಿ ಕಿಚ್ಚಿನ ನಡುವೆಯೇ ಕೊಡಗಿನಲ್ಲಿ ಭಾರಿ ಮಳೆ: ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ! ಹಾರಂಗಿ ಭರ್ತಿ, Video