ಶ್ರೀನಗರ: ಬಾಲಿವುಡ್‌ನ ಕೋಮುವಾದದ ಆರೋಪದ ಬಗ್ಗೆ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರ ಆರೋಪವನ್ನು ತಳ್ಳಿಹಾಕುವ ಮೂಲಕ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಭಾರತೀಯ ಮುಸ್ಲಿಮರ ವಾಸ್ತವಗಳಿಗೆ ವಿರುದ್ಧವಾಗಿದ್ದಾರೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೆಹಬೂಬಾ ಮುಫ್ತಿ, ಎಆರ್ ರೆಹಮಾನ್ ತಳ್ಳಿಹಾಕಿರುವ ಜಾವೇದ್ ಅಖ್ತರ್, ಬಾಂಬೆಯಂತಹ ಕಾಸ್ಮೋಪಾಲಿಟನ್ ನಗರದಲ್ಲಿ ಮುಸ್ಲಿಂ ಎಂಬುದಕ್ಕೆ ಮನೆ ನೀಡದಿರುವ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಅವರ ಸ್ವಂತ ಪತ್ನಿ ಶಬಾನಾ ಅಜ್ಮಿ ಸೇರಿದಂತೆ ಭಾರತೀಯ ಮುಸ್ಲಿಮರ ಜೀವನ ಮತ್ತು ವಾಸ್ತವಗಳಿಗೆ ಅವರು ವಿರುದ್ಧವಾಗಿದ್ದಾರೆ ಎಂದಿದ್ದಾರೆ.
ಬಾಲಿವುಡ್‌ನಲ್ಲಿ ರೆಹಮಾನ್‌ಗೆ ಕೆಲಸದ ಅವಕಾಶಗಳು ಕಡಿಮೆಯಾಗುವುದರಲ್ಲಿ ಯಾವುದೇ ಕೋಮುವಾದ ಅಂಶವಿಲ್ಲ. ಬಾಲಿವುಡ್ ಯಾವಾಗಲೂ ದೇಶದ ಸಾಮಾಜಿಕ ವಾಸ್ತವಗಳನ್ನು ಪ್ರತಿಬಿಂಬಿಸುವ ಜೀವಂತ ಮಿನಿ-ಭಾರತವಾಗಿದೆ ಎಂದು ಜಾವೇದ್ ಅಖ್ತರ್ ಹೇಳಿರುವುದಾಗಿ ವರದಿಯಾಗಿದೆ.
ಅಂತಹ ಅನುಭವಗಳನ್ನು ತಳ್ಳಿಹಾಕುವುದು ಇಂದಿನ ಭಾರತದ ಬಗ್ಗೆ ಸತ್ಯವನ್ನು ಬದಲಾಯಿಸಲಾಗದು ಎಂದು ಜಮ್ಮ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.