ಎಂ.ಕೆ. ಸ್ಟಾಲಿನ್ 
ದೇಶ

AIADMK ಭ್ರಷ್ಟಾಚಾರವನ್ನು ನಿಮ್ಮ ವಾಶಿಂಗ್ ಮೆಷಿನ್ ನಲ್ಲಿ ಸ್ವಚ್ಛಗೊಳಿಸಿದ್ದೀರಾ? ಬಿಜೆಪಿಗೆ ಎಂ.ಕೆ ಸ್ಟಾಲಿನ್ ಟಾಂಗ್

ತಮಿಳುನಾಡಿನ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದವರು ವಾಟ್ಸಾಪ್ ವಿಶ್ವವಿದ್ಯಾಲಯ ಮೂಲಕ ಸುಳ್ಳುಗಳನ್ನು ಹರಡುತ್ತಿದ್ದಾರೆ, ಡಿಎಂಕೆ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಚೆನ್ನೈ: ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಐಎಡಿಎಂಕೆಯನ್ನು "ವಾಷಿಂಗ್ ಮೆಷಿನ್" ನಲ್ಲಿ ಸ್ವಚ್ಛಗೊಳಿಸಲಾಗಿದ್ದೀರಾ ಎಂದು ಬಿಜೆಪಿ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹರಿಹಾಯ್ದಿದ್ದಾರೆ.

ಎನ್‌ಡಿಟಿವಿ ತಮಿಳುನಾಡು ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಸ್ಟಾಲಿನ್, ತಮಿಳುನಾಡಿನ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದವರು ವಾಟ್ಸಾಪ್ ವಿಶ್ವವಿದ್ಯಾಲಯ ಮೂಲಕ ಸುಳ್ಳುಗಳನ್ನು ಹರಡುತ್ತಿದ್ದಾರೆ, ಡಿಎಂಕೆ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

"ನಮ್ಮ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳು ಹಳೆಯ ಕಥೆಗಳಾಗಿವೆ, ಇವುಗಳಲ್ಲಿ ಮೊದಲನೆಯದು ವಂಶ ರಾಜಕೀಯ ಆರೋಪ. ನಾನು ಈಗಾಗಲೇ ಇದಕ್ಕೆ ಉತ್ತರಿಸಿದ್ದೇನೆ. ಯಾರಾದರೂ ರಾಜಕೀಯಕ್ಕೆ ಪ್ರವೇಶಿಸಲು ಸ್ವತಂತ್ರರು, ಆದರೆ ಅವರು ಜನರ ಮುಂದೆ ನಿಲ್ಲಬೇಕು, ಅವರ ವಿಶ್ವಾಸವನ್ನು ಗಳಿಸಬೇಕು ಮತ್ತು ಯಶಸ್ವಿಯಾಗಲು ಮತಗಳನ್ನು ಗಳಿಸಬೇಕು. ಇದು ನಮ್ಮನ್ನು ನೆಲದಲ್ಲಿ ಗೆಲ್ಲಲು ಸಾಧ್ಯವಾಗದವರು ಮಾಡಿದ ಆಧಾರರಹಿತ ಆರೋಪವಾಗಿದೆ" ಎಂದು ಸ್ಟಾಲಿನ್ ತಿಳಿಸಿದ್ದಾರೆ.

ನಮ್ಮ ಮೇಲೆ ಮಾಡಿರುವ ಎರಡನೇ ಆರೋಪ "ಭ್ರಷ್ಟಾಚಾರ". ಇಲ್ಲಿಯವರೆಗೆ ನಮ್ಮ ವಿರುದ್ಧ ಮಾಡಲಾದ ಒಂದೇ ಒಂದು ಆರೋಪವನ್ನು ಯಾರಾದರೂ ಸಾಬೀತುಪಡಿಸಿದ್ದಾರೆಯೇ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ಸದ್ಯ ನಿಮ್ಮೊಂದಿಗಿರುವವರು ನಿಜವಾಗಿಯೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ, ನಿರ್ದಿಷ್ಟವಾಗಿ ಎಐಎಡಿಎಂಕೆ, ಸುಪ್ರೀಂ ಕೋರ್ಟ್‌ನಿಂದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾರೆ. ನೀವು ಅವರೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದಾಗ, ನೀವು ಅವರ ವಿರುದ್ಧ ಎಷ್ಟು ಆರೋಪಗಳನ್ನು ಹೊರಿಸಿದ್ದೀರಿ? ಈಗ ನೀವು ಅವುಗಳನ್ನು ನಿಮ್ಮ ವಾಷಿಂಗ್ ಮೆಷಿನ್‌ನಲ್ಲಿ ತೊಳೆದಿದ್ದೀರಾ?"

ತಮಿಳುನಾಡು ಹಿಂದೂ ವಿರೋಧಿ ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ ಕಳೆದ 1,730 ದಿನಗಳಲ್ಲಿ, 4,000 ಕ್ಕೂ ಹೆಚ್ಚು ದೇವಾಲಯಗಳ ಜೀರ್ಣೋದ್ಧಾರ ನಡೆಸಲಾಗಿದೆ, ಇದು ಯಾವುದೇ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಡೆದಿಲ್ಲ ಎಂದು ಅವರು ಹೇಳಿದರು. ನಿಜವಾದ ಭಕ್ತರು ಇದರಿಂದ ಸಂತೋಷಗೊಂಡಿದ್ದಾರೆ" ಎಂದು ಸ್ಟಾಲಿನ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಪಡೆವಾಗ ಲೋಕಾಯುಕ್ತ ದಾಳಿ: ಇನ್ಸ್ ಪೆಕ್ಟರ್ ಹೈಡ್ರಾಮಾ, ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ, Video Viral

ಕೇವಲ 400 ಮೀಟರ್​ಗೆ 18 ಸಾವಿರ ರೂ. ಬಾಡಿಗೆ: ಹಗಲು ದರೋಡೆಗಿಳಿದ ಮುಂಬೈ ಕ್ಯಾಬ್ ಚಾಲಕನ ಬಂಧನ!

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ತಳ್ಳಿಹಾಕಿದ CBI; ಆದ್ರೆ ಕೃತಕ 'ತುಪ್ಪ' ಬಳಕೆ ಬಹಿರಂಗ

ಮಂಗನ ಜ್ವರಕ್ಕೆ ಈ ವರ್ಷ ಮೊದಲ ಸಾವು: ಶಿವಮೊಗ್ಗದಲ್ಲಿ 29 ವರ್ಷದ ಯುವಕ ಬಲಿ, ಆರೋಗ್ಯ ಇಲಾಖೆಗೆ ಮುನ್ನೆಚ್ಚರಿಕೆ

Big Boss Kannada 12 ಫಿನಾಲೆ ಎಪಿಸೋಡ್ ಗೆ ದಾಖಲೆ TRP, ಅಗ್ರಸ್ಥಾನಕ್ಕೆ ಕಲರ್ಸ್ ಕನ್ನಡ!

SCROLL FOR NEXT