ಕಾಶ್ಮೀರ: ಸಾಂಬಾ ಬಳಿ ಕಾಣಿಸಿಕೊಂಡ ಪಾಕಿಸ್ತಾನಿ ಡ್ರೋನ್; ಶೋಧ ಕಾರ್ಯಾಚರಣೆ ಆರಂಭ
ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಭಾರತೀಯ ಭೂಪ್ರದೇಶದ ಮೇಲೆ ಡ್ರೋನ್ ಸ್ವಲ್ಪ ಸಮಯ ಹಾರಾಡಿತು. ಗಡಿ ಉದ್ದಕ್ಕೂ ಒಂದೆರಡು ನಿಮಿಷಗಳ ಕಾಲ ಹಾರಾಟ ನಡೆಸಿದ ನಂತರ ಪಾಕಿಸ್ತಾನದ ಕಡೆಗೆ ಮರಳಿತು ಎಂದು ಅವರು ಹೇಳಿದ್ದಾರೆ.
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ(ಐಬಿ) ಬಳಿ ಶನಿವಾರ ಪಾಕಿಸ್ತಾನದ್ದು ಎಂದು ಶಂಕಿಸಲಾದ ಡ್ರೋನ್ ಕಾಣಿಸಿಕೊಂಡ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಲ್ಯಾರಿ ಗ್ರಾಮದ ಬಳಿಯ ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಭಾರತೀಯ ಭೂಪ್ರದೇಶದ ಮೇಲೆ ಡ್ರೋನ್ ಸ್ವಲ್ಪ ಸಮಯ ಹಾರಾಡಿತು. ಗಡಿ ಉದ್ದಕ್ಕೂ ಒಂದೆರಡು ನಿಮಿಷಗಳ ಕಾಲ ಹಾರಾಟ ನಡೆಸಿದ ನಂತರ ಪಾಕಿಸ್ತಾನದ ಕಡೆಗೆ ಮರಳಿತು ಎಂದು ಅವರು ಹೇಳಿದ್ದಾರೆ.
ಡ್ರೋನ್ ಚಲನೆಯ ನಂತರ ಗ್ರಾಮ ಮತ್ತು ಹತ್ತಿರದ ಪ್ರದೇಶಗಳಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳನ್ನು ಡ್ರೋನ್ ಬಿಟ್ಟು ಹೋಗಿದೆಯೇ ಎಂದು ಪರಿಶೀಲಿಸಲು ಗಡಿ ಉದ್ದಕ್ಕೂ ವಿವಿಧ ಪ್ರದೇಶಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.