ಅಮೆರಿಕದ ಮಹಿಳೆ ಲಿಜ್ 
ದೇಶ

ಯುಎಸ್‌ನಲ್ಲಿ ₹85,000 ಬೆಲೆಯ ಮಾತ್ರೆ ಭಾರತದಲ್ಲಿ ಕೇವಲ ₹35; 'ನಮ್ಮನ್ನು ದೋಚಲಾಗುತ್ತಿದೆ' ಎಂದ ಅಮೆರಿಕದ ಮಹಿಳೆ!

ಆರೋಗ್ಯ ಸೇವೆ ಮತ್ತು ಔಷಧಿಗಳ ದುಬಾರಿ ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದ ಏಕೈಕ ಅಮೆರಿಕನ್ ಪ್ರಜೆ ಲಿಜ್ ಅಲ್ಲ. ಕಳೆದ ತಿಂಗಳು, ವಿಕ್ಟೋರಿಯಾ ಎಂಬ ಮತ್ತೊಬ್ಬರು ಅಮೆರಿಕದ ಆರೋಗ್ಯ ಸೇವಾ ವ್ಯವಸ್ಥೆಯನ್ನು 'ವಂಚನೆ' ಎಂದು ಕರೆದಿದ್ದರು.

ಭಾರತದಲ್ಲಿರುವ ಅಮೆರಿಕನ್ ಮಹಿಳೆಯೊಬ್ಬರು ಎರಡು ದೇಶಗಳಲ್ಲಿನ ಆರೋಗ್ಯ ಸೇವೆಯ ವೆಚ್ಚವನ್ನು ಹೋಲಿಸುವ ಮೂಲಕ ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದ್ದಾರೆ. 'ಇಂಡಿಯನ್ vs ಅಮೆರಿಕನ್ ಹೆಲ್ತ್‌ಕೇರ್' ಎಂಬ ಶೀರ್ಷಿಕೆಯ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ, ಲಿಜ್ ಎಂಬ ಮಹಿಳೆ ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಜನರನ್ನು 'ದರೋಡೆ' ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಅಮೆರಿಕದಲ್ಲಿ $900 (₹35,000) ಬೆಲೆಯ ಅದೇ ಮಾತ್ರೆ ಭಾರತದಲ್ಲಿ ಕೇವಲ 30 ಸೆಂಟ್‌ಗಳು (₹35) ಬೆಲೆಗೆ ಮಾರಾಟವಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.

ಭಾರತವು ಇತರ ಹಲವು ದೇಶಗಳಿಗಿಂತ ಕಡಿಮೆ ಬೆಲೆಗೆ ಔಷಧಿಗಳನ್ನು ತಯಾರಿಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ಗಮನಸೆಳೆದ ಲಿಜ್, ಅಮೆರಿಕದಲ್ಲಿ ಅತ್ಯಂತ ದುಬಾರಿ ಬ್ರಾಂಡ್ ಕ್ಯಾನ್ಸರ್ ಔಷಧ ರೆವ್ಲಿಮಿಡ್ ಅನ್ನು ಭಾರತದಲ್ಲಿ ಲಭ್ಯವಿರುವ ಅದರ ಹೆಚ್ಚು ಕೈಗೆಟುಕುವ ಜೆನೆರಿಕ್ ಆವೃತ್ತಿಯೊಂದಿಗೆ ಹೋಲಿಸಿದರು.

'ಜಗತ್ತಿನಲ್ಲೇ ಅತಿ ಕಡಿಮೆ ದರದ ಕೆಲವು ಔಷಧಿಗಳು ಭಾರತದಲ್ಲಿ ಲಭ್ಯವಿವೆ. ನನ್ನ ಅತ್ತೆಗೆ ಒಂದು ರೀತಿಯ ರಕ್ತದ ಕ್ಯಾನ್ಸರ್ ಇದೆ ಮತ್ತು ಅವರು 'ರೆವ್ಲಿಮಿಡ್' (Revlimid) ಎಂಬ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಅಮೆರಿಕದಲ್ಲಿ ಒಂದು ಮಾತ್ರೆಗೆ 900 ಡಾಲರ್ (ಅಂದರೆ ₹85,000) ಬೆಲೆಯಿದೆ; ನಾನಿದನ್ನು ಪರಿಶೀಲಿಸಿದ್ದೇನೆ. ಭಾರತದಲ್ಲಿ ಈ ಔಷಧಿಯ ಬೆಲೆ 35 ರಿಂದ 300 ರೂಪಾಯಿಗಳಷ್ಟಿದೆ. ಅಂದರೆ ಒಂದು ಮಾತ್ರೆಗೆ ಸುಮಾರು 30 ಸೆಂಟ್ಸ್‌ನಿಂದ 3 ಡಾಲರ್‌ನಷ್ಟು ಮಾತ್ರ' ಎಂದು ಹೇಳಿದ್ದಾರೆ.

'ಯುಎಸ್‌ನಲ್ಲಿ, ನಮ್ಮನ್ನು ದೋಚಲಾಗುತ್ತಿದೆ, ಆದರೆ ಭಾರತವು ತನ್ನ ಜನರಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುತ್ತದೆ' ಎಂದು ಲಿಜ್ ಹೇಳಿದರು.

ಈ ವಿಡಿಯೋ 772,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಕಮೆಂಟ್‌ಗಳನ್ನು ಗಳಿಸಿದೆ.

ಒಂದು ಹಗರಣ

ಅಮೆರಿಕದಲ್ಲಿ ಆರೋಗ್ಯ ಸೇವೆ ಮತ್ತು ಔಷಧಿಗಳ ದುಬಾರಿ ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದ ಏಕೈಕ ಅಮೆರಿಕನ್ ಪ್ರಜೆ ಲಿಜ್ ಅಲ್ಲ. ಕಳೆದ ತಿಂಗಳು, ವಿಕ್ಟೋರಿಯಾ ಎಂಬ ಮತ್ತೊಬ್ಬರು, ಭಾರತದಿಂದ ಕೇವಲ 25 ಡಾಲರ್‌ಗೆ 1,000 ಡಾಲರ್ ಮೌಲ್ಯದ ಔಷಧಿಯನ್ನು ಖರೀದಿಸಿದ ನಂತರ ಅಮೆರಿಕದ ಆರೋಗ್ಯ ಸೇವಾ ವ್ಯವಸ್ಥೆಯನ್ನು 'ವಂಚನೆ' ಎಂದು ಕರೆದಿದ್ದರು.

ವಿಮೆ ಒದಗಿಸುವವರು ತನ್ನ ಅಗತ್ಯ ಔಷಧಿಗಳಿಗೆ ಕವರ್ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಅವರು ಅತಿಯಾದ ಬಿಲ್ ಪಾವತಿಸಬೇಕಾಯಿತು. ಭಾರತೀಯ ತಯಾರಕರಿಂದ ನೇರವಾಗಿ ಔಷಧವನ್ನು ಪಡೆಯಲು ಸಲಹೆ ನೀಡಿದಾಗ ಮಾತ್ರ ಪರಿಹಾರ ಸಿಕ್ಕಿತು ಎಂದು ವಿಕ್ಟೋರಿಯಾ ವಿವರಿಸಿದರು.

ಅಮೆರಿಕದ ಸಾಮಾನ್ಯ ಜನರು ಆರೋಗ್ಯ ವ್ಯವಸ್ಥೆಯಿಂದ 'ಸಂಪೂರ್ಣವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ'. ಆ ಹೆಚ್ಚುವರಿ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ ಎಂದೂ ಅವರು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ಗೆ ಮತ್ತೆ ಸುಪ್ರೀಂ ಕೋರ್ಟ್ ಶಾಕ್‌; ʻದಾಸʼನಿಗೆ 1 ವರ್ಷ ಜೈಲೇ ಗತಿ!

'ಬೆಂಗಳೂರು ನನಗೆ ಮೋಸ ಮಾಡಿದೆ' : ಏನಿದು ಬಾಲಿವುಡ್ ನಟಿ ಪಾರುಲ್ ಗುಲಾಟಿ ಆರೋಪ? VIDEO

ಹೈದರಾಬಾದ್‌: ಬಾಯ್​ಫ್ರೆಂಡ್​ಗೆ ವಿಡಿಯೋ ಕಾಲ್ ಮಾಡಿ ಹೋಟೆಲ್‌ನಲ್ಲೇ ವಿವಾಹಿತ ಯುವತಿ ಆತ್ಮಹತ್ಯೆ!

ಅಕ್ರಮವಾಗಿ ಮಸೀದಿಗಳಲ್ಲಿ SIR: ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು; ವಿಡಿಯೋ ರಿಲೀಸ್‌

ದಾವಣಗೆರೆ: ಕಲ್ಲಿನಿಂದ ತಲೆ ಜಜ್ಜಿ ಬರ್ಬರವಾಗಿ ಪತಿ ಹತ್ಯೆಗೈದ ಪತ್ನಿ; ಸಾಥ್​ ನೀಡಿದ ಪುತ್ರ! ಇಲ್ಲಿದೆ ಕಾರಣ...