ಅನುರಾಧಾ ಪೌಡ್ವಾಲ್  
ದೇಶ

'93 ಸಾವಿರ ಶಾಲೆಗಳು ಮುಚ್ಚಿವೆ; ವಿಶ್ವಗುರು ಎಂದು ಕರೆಯುವುದನ್ನು ನಿಲ್ಲಿಸಿ': ಪ್ರಧಾನಿ ಮೋದಿ ವಿರುದ್ಧ ಸ್ವಪಕ್ಷ ನಾಯಕಿ- ಗಾಯಕಿ ಅನುರಾಧಾ ಪೌಡ್ವಾಲ್ ಟೀಕೆ

ಕೆಲವು ವರ್ಷಗಳ ಹಿಂದೆ ಭಾರತ ವಿಶ್ವಗುರು ಆಗಲಿದೆ ಎಂಬ ಬಲವಾದ ನಂಬಿಕೆ ನನಗಿತ್ತು. ಆದರೆ ಈಗ ವಿಶ್ವಗುರು ಪರಿಕಲ್ಪನೆಗೆ ವಿರುದ್ಧವಾದ ಸಂಗತಿಗಳೇ ಹೆಚ್ಚಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದೇನೆ. ಹೀಗಿರುವಾಗ ನಾವು ವಿಶ್ವಗುರು ಹೇಗೆ ಆಗುತ್ತೇವೆ? ಏನಾದರೊಂದು ಮಾಡಬೇಕು ಎಂದು ಕೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಹಾಗೂ ಪದ್ಮಶ್ರೀ ಪುರಸ್ಕೃತ ಗಾಯಕಿ ಹಾಗೂ ಬಿಜೆಪಿ ನಾಯಕಿ ಅನುರಾಧಾ ಪೌಡ್ವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದ್ದಾರೆ. ‘ವಿಶ್ವಗುರು’ ಆಗುವ ಮಾತುಗಳು ಕೇಳಿಬರುತ್ತಿವೆ, ಆದರೆ ದೇಶದಲ್ಲಿ 93 ಸಾವಿರ ಶಾಲೆಗಳು ಮುಚ್ಚಲ್ಪಡುತ್ತಿವೆ ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಶುಭಾಂಕರ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅನುರಾಧಾ ಪೌಡ್ವಾಲ್, "ಕೆಲವು ವರ್ಷಗಳ ಹಿಂದೆ ಭಾರತ ವಿಶ್ವಗುರು ಆಗಲಿದೆ ಎಂಬ ಬಲವಾದ ನಂಬಿಕೆ ನನಗಿತ್ತು. ಆದರೆ ಈಗ ವಿಶ್ವಗುರು ಪರಿಕಲ್ಪನೆಗೆ ವಿರುದ್ಧವಾದ ಸಂಗತಿಗಳೇ ಹೆಚ್ಚಾಗಿ ನಡೆಯುತ್ತಿರುವುದನ್ನು ನೋಡುತ್ತಿದ್ದೇನೆ. ಹೀಗಿರುವಾಗ ನಾವು ವಿಶ್ವಗುರು ಹೇಗೆ ಆಗುತ್ತೇವೆ? ಏನಾದರೊಂದು ಮಾಡಬೇಕು — 'ವಿಶ್ವಗುರು, ವಿಶ್ವಗುರು' ಎಂದು ಹೇಳುವುದನ್ನು ನಿಲ್ಲಿಸಬೇಕು ಅಥವಾ ಈ ಎಲ್ಲ ಅರ್ಥವಿಲ್ಲದ ಕೆಲಸಗಳನ್ನು ನಿಲ್ಲಿಸಬೇಕು," ಎಂದು ಹೇಳಿದರು.

"ನಾವು ವಿದ್ಯಾವಂತರಾಗಬೇಕೆಂದು ಹೇಳಲಾಗುತ್ತಿತ್ತು. ಆದರೆ ನಮ್ಮ ದೇಶದಲ್ಲೇ 93 ಸಾವಿರ ಶಾಲೆಗಳು ಮುಚ್ಚಲ್ಪಟ್ಟಿವೆ. ಹಾಗಾದರೆ ವಿಶ್ವಗುರುವಾಗುವ ಅಡಿಪಾಯವೇನು? ಕನಸುಗಳ ಮೇಲೆ ನಡೆದು ಮುಂದೆ ಸಾಗಲು ಸಾಧ್ಯವಿಲ್ಲ. ಅದಕ್ಕಾಗಿ ಕಾರ್ಯರೂಪಕ್ಕೆ ತರುವ ಕೆಲಸಗಳಿರಬೇಕು," ಎಂದು ಅವರು ಹೇಳಿದರು.

"ರಾಮರಾಜ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ ಇಲ್ಲಿ ರಾಮಮಂದಿರದಲ್ಲಿಯೇ ಕಳ್ಳತನ ನಡೆದಿದೆ. ನಾನು ವಿಶ್ವಗುರು ಪರಿಕಲ್ಪನೆಗೆ ವಿರೋಧಿಯಲ್ಲ. ಆದರೆ ಅದಕ್ಕೆ ಬೇಕಾದ ಮಾನದಂಡಗಳೇನು? ಅವುಗಳ ಪಟ್ಟಿಯನ್ನು ಕೊಡಿ, ನಾವು ಅವನ್ನು ಅನುಸರಿಸುತ್ತೇವೆ," ಎಂದರು.

ಸರ್ಕಾರಕ್ಕೆ ಸಂಬಂಧಿಸಿದ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಗಣ್ಯರು

ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣದ ಬಗ್ಗೆ ಅನುಪಮ್ ಖೇರ್ ಸಮರ್ಥನೆ:
ಇತ್ತೀಚೆಗೆ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ನಟ ಅನುಪಮ್ ಖೇರ್ ರಾಮಮಂದಿರದಲ್ಲಿ ಕಾಣಿಕೆ ಕಳ್ಳತನ ನಡೆದ ವಿಚಾರವನ್ನು ಉಲ್ಲೇಖಿಸಿ, ದೇವಾಲಯಗಳ ಲೂಟಿ ಮೊಘಲರ ಕಾಲದಿಂದಲೇ ನಡೆಯುತ್ತಿತ್ತು ಎಂದು ಹೇಳಿದರು. ಮೊಘಲ್ ರಾಜರು ಬ್ರಾಹ್ಮಣರನ್ನು ಹತ್ಯೆ ಮಾಡಿ, ಅವರ ಜನಿವಾರ ಸಂಗ್ರಹಿಸಿ ತೂಕ ಮಾಡುತ್ತಿದ್ದರು ಎಂದೂ ಅವರು ಹೇಳಿದ್ದರು. ಈ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ತೀವ್ರ ಟೀಕೆ ವ್ಯಕ್ತವಾಗಿತ್ತು.

ಎಥೆನಾಲ್ ಕುರಿತು ಹೇಳಿಕೆ ನೀಡಿದ ಸೌರಭ್ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹ:
ಜನಪ್ರಿಯ ಯೂಟ್ಯೂಬರ್ ಸೌರಭ್ ಜೋಶಿ ಇತ್ತೀಚೆಗೆ ಪ್ರಕಟಿಸಿದ ವಿಡಿಯೊದಲ್ಲಿ, ಎಥೆನಾಲ್ ಬಳಕೆಯಿಂದ ತಮ್ಮ ಮರ್ಸಿಡಿಸ್ ಕಾರಿನ ಮೈಲೇಜ್ 15 ಕಿ.ಮೀ.ಯಿಂದ 5 ಕಿ.ಮೀ.ಗೆ ಇಳಿದಿದೆ ಎಂದು ಹೇಳಿದ್ದರು. ಈ ಹೇಳಿಕೆಯ ಬಳಿಕ ಹಲವರು ಎಥೆನಾಲ್ ನೀತಿಯನ್ನು ಪ್ರಶ್ನಿಸುವುದರ ಜೊತೆಗೆ, ಅವರ ಆಸ್ತಿ 50 ಕೋಟಿಯಿಂದ 100 ಕೋಟಿಗೆ ಹೇಗೆ ಹೆಚ್ಚಾಯಿತು ಎಂಬುದರ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಅನುರಾಧಾ ಪೌಡ್ವಾಲ್ ಯಾರು?

ಅನುರಾಧಾ ಪೌಡ್ವಾಲ್ ಅವರು ಭಾರತದ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರು. ಅವರು ಬಾಲಿವುಡ್ ಚಿತ್ರಗಳಿಗೆ ಸಾವಿರಾರು ಹಾಡುಗಳನ್ನು ಹಾಡಿದ್ದು, ಭಜನೆಗಳು, ಭಕ್ತಿಗೀತೆಗಳು ಹಾಗೂ ಹಲವು ಭಾರತೀಯ ಭಾಷೆಗಳಲ್ಲಿ ಗಾಯನ ಮಾಡಿದ್ದಾರೆ.

1980 ಮತ್ತು 1990ರ ದಶಕಗಳಲ್ಲಿ 'ಆಶಿಕಿ', 'ದಿಲ್ ಹೈ ಕಿ ಮಾನ್ತಾ ನಹೀಂ', 'ಸದಕ್', 'ಬೇಟಾ', 'ಹೀರೋ' ಸೇರಿದಂತೆ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಚಿತ್ರಗೀತೆಗಳ ಜೊತೆಗೆ 'ಶಿವ ಅಮೃತವಾಣಿ', 'ಹನುಮಾನ್ ಅಮೃತವಾಣಿ' ಹಾಗೂ ದೇವಿ ಭಕ್ತಿಗೀತೆಗಳ ಆಲ್ಬಮ್‌ಗಳು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿವೆ.

ಅವರಿಗೆ ಒಂದು ರಾಷ್ಟ್ರ ಪ್ರಶಸ್ತಿ, ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳು, ಹಲವು ರಾಜ್ಯಮಟ್ಟದ ಗೌರವಗಳು ಹಾಗೂ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಅವರ ಪತಿ ಅರುಣ್ ಪೌಡ್ವಾಲ್ ಸಂಗೀತ ನಿರ್ದೇಶಕರಾಗಿದ್ದು, ಎಸ್.ಡಿ. ಬರ್ಮನ್ ಅವರ ಸಹಾಯಕರಾಗಿಯೂ ಕೆಲಸ ಮಾಡಿದ್ದರು. ಅವರು 1991ರಲ್ಲಿ ನಿಧನರಾದರು.

ಅವರ ಪುತ್ರಿ ಕವಿತಾ ಪೌಡ್ವಾಲ್ ಖ್ಯಾತ ಗಾಯಕಿಯಾಗಿದ್ದು, ಪುತ್ರ ಆದಿತ್ಯ ಪೌಡ್ವಾಲ್ ಸಂಗೀತ ಸಂಯೋಜಕರಾಗಿದ್ದರು. ಹಿಂದಿಯ ಜೊತೆಗೆ ಮರಾಠಿ, ಒಡಿಯಾ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಪಂಜಾಬಿ, ನೇಪಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಹಾಡುಗಳನ್ನು ಹಾಡಿದ್ದಾರೆ. 2024ರಲ್ಲಿ ಅನುರಾಧಾ ಪೌಡ್ವಾಲ್ ಭಾರತೀಯ ಜನತಾ ಪಕ್ಷ (BJP) ಸೇರ್ಪಡೆಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ; ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿಗೆ ಮಹತ್ವದ ಘೋಷಣೆಗಳ ನಿರೀಕ್ಷೆ..!

BJP ಹಿರಿಯ ನಾಯಕ ರಾಮಚಂದ್ರೇಗೌಡ ವಿಧಿವಶ: ತಳಮಟ್ಟದಿಂದ ಪಕ್ಷ ಕಟ್ಟಲು ಯಡಿಯೂರಪ್ಪಗೆ ಸಾಥ್ ನೀಡಿದ್ದ ಧುರೀಣ!

ರಾಹುಲ್ ವಾಪಸ್ಸಾಗುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಕಸರತ್ತು; CM ಸೇರಿ ರಾಜ್ಯ ನಾಯಕರಿಗೆ ದೆಹಲಿ ಬುಲಾವ್ ಸಾಧ್ಯತೆ, 2 ದಿನಗಳಲ್ಲಿ ಸ್ಪಷ್ಟ ಚಿತ್ರಣ

ರಾಜ್ಯ ಪ್ರವಾಸೋದ್ಯಮಕ್ಕೆ ಬಿಗ್ ಬೂಸ್ಟ್; 13 ಪ್ರವಾಸಿ ತಾಣಗಳಲ್ಲಿ Ropeway ಯೋಜನೆ ಜಾರಿಗೆ ಸರ್ಕಾರ ಮುಂದು..!