ಮೃತ ಬಾಲ ಮುಹಮ್ಮದ್ ರಿಝಾನ್
ದೇಶ

Mixture ತಂದ ಕಂಟಕ: ಗಂಟಲಿನಲ್ಲಿ ಕಡಲೆ ಬೀಜ ಸಿಲುಕಿ ಮೂರು ವರ್ಷದ ಕಂದಮ್ಮ ಸಾವು!

ಸೋಮವಾರ ಬೆಳಗ್ಗೆ ಮನೆಯಲ್ಲಿ ಮಗುವಿಗೆ ತಿನ್ನಲು ನೀಡಲಾಗಿದ್ದ ಮಿಕ್ಸ್​ಚರ್ ಸೇವಿಸುತ್ತಿದ್ದಾಗ, ಅದರಲ್ಲಿನ ಕಡಲೇ ಬೀಜ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತಕ್ಷಣವೇ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಒದ್ದಾಡಲಾರಂಭಿಸಿದೆ.

ಮಲಪ್ಪುರಂ: ಮಿಕ್ಸ್ಚರ್ ತಿನ್ನುವಾಗ ಗಂಟಲಲ್ಲಿ ಕಡಲೆ ಕಾಯಿ ಬೀಜ ಸಿಲುಕಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ನಲ್ಲಿ ನಡೆದಿದೆ.

ಮಲಪ್ಪುರಂ ಜಿಲ್ಲೆಯ ಕುನ್ನುಂಪುರಂನ ಚೆಂಗಣಿ ನಿವಾಸಿಗಳಾದ ಮುನೀರ್ ಮತ್ತು ಫರ್ಸಿನಾ ದಂಪತಿಯ ಮೂರು ವರ್ಷದ ಮಗ ಮುಹಮ್ಮದ್ ರಿಝಾನ್ ಬಲಿಯಾದ ದುರ್ದೈವಿ.

ಸೋಮವಾರ ಬೆಳಗ್ಗೆ ಮನೆಯಲ್ಲಿ ಮಗುವಿಗೆ ತಿನ್ನಲು ನೀಡಲಾಗಿದ್ದ ಮಿಕ್ಸ್​ಚರ್ ಸೇವಿಸುತ್ತಿದ್ದಾಗ, ಅದರಲ್ಲಿನ ಕಡಲೇ ಬೀಜ ಆಕಸ್ಮಿಕವಾಗಿ ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಮಗುವಿಗೆ ತಕ್ಷಣವೇ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಒದ್ದಾಡಲಾರಂಭಿಸಿದೆ.

ಮಗು ಉಸಿರುಗಟ್ಟಿ ಒದ್ದಾಡುತ್ತಿರುವುದನ್ನು ಕಂಡು ಗಾಬರಿಯಾದ ಪೋಷಕರು ತಕ್ಷಣವೇ ಆತನನ್ನು ಕುನ್ನುಂಪುರಂನ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಲ್ಲಿ ವೈದ್ಯರು ಮಗುವಿನ ಪ್ರಾಣ ಉಳಿಸಲು ಶ್ರಮಿಸಿದರಾದರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಮಿಕ್ಸ್​ಚರ್​ನಲ್ಲಿದ್ದ ಕಡಲೇ ಬೀಜ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಟ ಸ್ಥಗಿತಗೊಂಡಿದ್ದೇ ಸಾವಿಗೆ ನೇರ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NDAಯತ್ತ ಶರದ್ ಪವಾರ್ ಚಿತ್ತ? "ಆಪರೇಷನ್ ಘಡಿ"ಗೆ ಫಡ್ನವೀಸ್ ಮಾಸ್ಟರ್ ಪ್ಲಾನ್!

'ತೈಲ ರಫ್ತು ಎಲ್ಲರಿಗೂ, ಇಲ್ಲವೇ ಯಾರಿಗೂ ಇಲ್ಲ': ಅಮೆರಿಕ ನೌಕಾ ದಿಗ್ಬಂಧನಕ್ಕೆ Iran ತಿರುಗೇಟು; Hormuz ಜಲಸಂಧಿ ಸಂಪೂರ್ಣ ಬಂದ್, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!

ಅಮೆರಿಕದೊಂದಿಗಿನ ಒಪ್ಪಂದಕ್ಕೆ Good Bye; 'Hormuz ಮೇಲಿನ ಸಂಪೂರ್ಣ ನಿಯಂತ್ರಣ ನಮ್ಮದೇ' ಎಂದ ಇರಾನ್

ಒಪ್ಪಂದಕ್ಕೆ ಬಾರದಿದದರೆ ವಿದ್ಯುತ್ ಸ್ಥಾವರ-ಸೇತುವೆಗಳೇ ಗುರಿ, ಸಾಕು ಎನ್ನುವವರೆಗೂ ದಾಳಿ: Iranಗೆ Trump ಖಡಕ್ ಎಚ್ಚರಿಕೆ

ಸಚಿವ ಸಂಪುಟ ಕಸರತ್ತು: ರಾಹುಲ್ ಭೇಟಿಗೆ ಡಿಕೆಶಿ-ಸಿದ್ದು ದೆಹಲಿ ಪ್ರಯಾಣ, ಸಚಿವಾಕಾಂಕ್ಷಿಗಳಿಗಿದು ನಿರ್ಣಾಯಕ ವಾರ..!