ಒಪ್ಪಂದಕ್ಕೆ ಬಾರದಿದದರೆ ವಿದ್ಯುತ್ ಸ್ಥಾವರ-ಸೇತುವೆಗಳೇ ಗುರಿ, ಸಾಕು ಎನ್ನುವವರೆಗೂ ದಾಳಿ: Iranಗೆ Trump ಖಡಕ್ ಎಚ್ಚರಿಕೆ

ನಮ್ಮ ಮುಂದಿನ ಗುರಿ ವಿದ್ಯುತ್ ಸ್ಥಾವರಗಳು, ನಂತರ ಪ್ರಮುಖ ಸೇತುವೆಗಳು. ಇರಾನ್ ಮಾತುಕತೆ ಮೇಜಿನತ್ತ ಬಾರದಿದ್ದರೆ ಅವರ ಎಲ್ಲ ವಿದ್ಯುತ್ ಘಟಕಗಳು ಹಾಗೂ ಸೇತುವೆಗಳನ್ನು ನಾಶಪಡಿಸುತ್ತೇವೆ.
Iran's Supreme Leader Khamenei and US President Donald Trump
ಇರಾನ್ ಸರ್ವೋಚ್ಛ ನಾಯಕ ಖಮೇನಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್
Updated on

ವಾಷಿಂಗ್ಟನ್: ಇರಾನ್ ಮಾತುಕತೆಗೆ ಮುಂದಾಗಿ ಒಪ್ಪಂದ ಮಾಡಿಕೊಳ್ಳದಿದ್ದರೆ ಮುಂದಿನ ವಾರದಿಂದ ವಿದ್ಯುತ್ ಉತ್ಪಾದನಾ ಘಟಕಗಳು ಹಾಗೂ ಪ್ರಮುಖ ಸೇತುವೆಗಳ ಮೇಲೆ ಅಮೆರಿಕ ದಾಳಿ ನಡೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, "ಮುಂದಿನ ವಾರ ಇರಾನ್‌ಗೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ಹೇಳಿದ್ದಾರೆ.

ನಮ್ಮ ಮುಂದಿನ ಗುರಿ ವಿದ್ಯುತ್ ಸ್ಥಾವರಗಳು, ನಂತರ ಪ್ರಮುಖ ಸೇತುವೆಗಳು. ಇರಾನ್ ಮಾತುಕತೆ ಮೇಜಿನತ್ತ ಬಾರದಿದ್ದರೆ ಅವರ ಎಲ್ಲ ವಿದ್ಯುತ್ ಘಟಕಗಳು ಹಾಗೂ ಸೇತುವೆಗಳನ್ನು ನಾಶಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಅಮೆರಿಕದ ದಾಳಿಗಳು ಇನ್ನೆಷ್ಟು ದಿನ ಮುಂದುವರಿಯಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ಸಾಕು ಎಂದು ನಾನು ಹೇಳುವವರೆಗೂ ದಾಳಿ ಮುಂದುವರಿಯುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

Iran's Supreme Leader Khamenei and US President Donald Trump
ಅಮೆರಿಕದೊಂದಿಗಿನ ಒಪ್ಪಂದಕ್ಕೆ Good Bye; 'Hormuz ಮೇಲಿನ ಸಂಪೂರ್ಣ ನಿಯಂತ್ರಣ ನಮ್ಮದೇ' ಎಂದ ಇರಾನ್

ಈ ಹೇಳಿಕೆ ನೀಡಿದ ದಿನವೇ ಅಮೆರಿಕ ಸತತ ನಾಲ್ಕನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಜೊತೆಗೆ ಇರಾನ್ ಬಂದರುಗಳ ಮೇಲೆ ಮತ್ತೆ ನೌಕಾ ನಿರ್ಬಂಧ (ನೇವಲ್ ಬ್ಲಾಕೇಡ್) ಜಾರಿಗೊಳಿಸಿದೆ.

ಜೂನ್ 17ರಂದು ಉಭಯ ದೇಶಗಳ ನಡುವೆ ಜಾರಿಯಾಗಿದ್ದ ಕದನ ವಿರಾಮ ಒಪ್ಪಂದ ಈಗ ಬಹುತೇಕ ಸಂಪೂರ್ಣವಾಗಿ ವಿಫಲವಾಗಿದ್ದು, ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ ನಿಯಂತ್ರಣ ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com