ದೇಶ

ಮಲಗಿದ್ದ ಪತಿಯ ಬೆಡ್ ಶೀಟ್ ನೊಳಗೆ ವಿಷಕಾರಿ ಹಾವು ಬಿಟ್ಟು ಕೊಲೆ: 3ನೇ ಪ್ರಯತ್ನದಲ್ಲಿ ಪತ್ನಿ-ಪ್ರಿಯಕರ ಯಶಸ್ವಿ

ಮಲಗಿದ್ದ ಪತಿಯ ಬೆಡ್ ಶೀಟ್ ನೊಳಗೆ ಪತ್ನಿಯೇ ದೇಶದ ಅತ್ಯಂತ ವಿಷಕಾರಿ ಹಾವನ್ನು ಬಿಟ್ಟು ಆತನನ್ನು ಹತ್ಯೆ ಮಾಡಿರುವ ಘೋರ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ದಾಮಿನಿ ತನ್ನ ಪ್ರಿಯಕರ ತುಷಾರ್ ನಿಂದ ತನ್ನ ಪತಿ ಅತುಲ್ ನನ್ನು ಕೊಲ್ಲಲು ದೇಶದ ಅತ್ಯಂತ ವಿಷಕಾರಿ ಹಾವನ್ನು ಪಡೆದುಕೊಂಡಿದ್ದಳು.

ಮೀರತ್: ಮಲಗಿದ್ದ ಪತಿಯ ಬೆಡ್ ಶೀಟ್ ನೊಳಗೆ ಪತ್ನಿಯೇ ದೇಶದ ಅತ್ಯಂತ ವಿಷಕಾರಿ ಹಾವನ್ನು ಬಿಟ್ಟು ಆತನನ್ನು ಹತ್ಯೆ ಮಾಡಿರುವ ಘೋರ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ದಾಮಿನಿ ತನ್ನ ಪ್ರಿಯಕರ ತುಷಾರ್ ನಿಂದ ತನ್ನ ಪತಿ ಅತುಲ್ ನನ್ನು ಕೊಲ್ಲಲು ದೇಶದ ಅತ್ಯಂತ ವಿಷಕಾರಿ ಹಾವನ್ನು ಪಡೆದುಕೊಂಡಿದ್ದಳು. ದಾಮಿನಿ ಮತ್ತು ತುಷಾರ್ ಕಳೆದ ನಾಲ್ಕು ತಿಂಗಳಿನಿಂದ ಅತುಲ್ ನ ಕೊಲೆಗೆ ಯೋಜನೆ ರೂಪಿಸುತ್ತಿದ್ದರು. ನಾಲ್ಕು ತಿಂಗಳ ಹಿಂದೆ ನಿದ್ರಾಜನಕ ಮಾತ್ರೆಗಳನ್ನು ಅತುಲ್ ನ ಆಹಾರದಲ್ಲಿ ಬೆರೆಸಲಾಗಿತ್ತು. ಇಪ್ಪತ್ತು ದಿನಗಳ ಹಿಂದೆ, ತುಷಾರ್ ಹಸ್ತಿನಾಪುರದಲ್ಲಿ ಅತುಲ್ ನನ್ನು ಕಾರಿನಿಂದ ಡಿಕ್ಕಿ ಹೊಡೆದು ಕೊಲ್ಲಲು ಪ್ರಯತ್ನಿಸಿದರು. ಆದರೆ ಹೆಲ್ಮೆಟ್ ಧರಿಸಿದ್ದರಿಂದ ಅವರು ಬದುಕುಳಿದರು. ಗುರುವಾರ ರಾತ್ರಿ ಮೂರನೇ ಪ್ರಯತ್ನ ಮಾಡಲಾಯಿತು. ಇದರಲ್ಲಿ ದಾಮಿನಿ ಮತ್ತು ತುಷಾರ್ ಯಶಸ್ವಿಯಾದರು. ಈ ಬಾರಿ, ಅವರು ಅತುಲ್ ನನ್ನು ವಿಷಕಾರಿ ಹಾವಿನಿಂದ ಕಚ್ಚಿಸಿ ಕೊಂದಿದ್ದಾರೆ.

ಸುಮಾರು ಒಂದು ವರ್ಷಗಳಿಂದ ದಾಮಿನಿ ತನ್ನ ಶಾಲಾ ವ್ಯಾನ್ ನ ಚಾಲಕ ತುಷಾರ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಕಳೆದ ನಾಲ್ಕು ತಿಂಗಳಲ್ಲಿ ಎರಡು ಬಾರಿ ಅತುಲ್ ನನ್ನು ಕೊಲೆ ಮಾಡಲು ಪ್ರಯತ್ನಗಳು ನಡೆದಿದ್ದವು. ಮೊದಲನೆಯದಾಗಿ ದಾಮಿನಿ ಅತುಲ್ ಗೆ ಊಟದಲ್ಲಿ ನಿದ್ರಾ ಮಾತ್ರೆಗಳನ್ನು ಹಾಕಿ ಕೊಟ್ಟಿದ್ದಳು. ಅತುಲ್ ಸ್ಥಿತಿ ನಂತರ ಹದಗೆಟ್ಟಿತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಸಮಯದಲ್ಲಿ ವೈದ್ಯರ ಪ್ರಯತ್ನಗಳು ಅವರನ್ನು ಉಳಿಸಿತ್ತು. ಜ್ಯೋತಿಷಿಯೊಬ್ಬರು ಹೇಳಿದ್ದಾರೆ ಎಂದು ಹೇಳಿ ದಾಮಿನಿ ತಮ್ಮ ಹಳ್ಳಿ ಮನೆಯನ್ನು ಬಿಟ್ಟು ಹಸ್ತಿನಾಪುರಕ್ಕೆ ಬಂದು ನೆಲೆಸಿದ್ದರು.

ಇಪ್ಪತ್ತು ದಿನಗಳ ಹಿಂದೆ, ತುಷಾರ್ ಎರ್ಟಿಗಾವನ್ನು ಚಲಾಯಿಸುತ್ತಾ ಹಸ್ತಿನಾಪುರದ ಹೊರಗೆ ಬೈಕ್ ಸವಾರಿ ಮಾಡುತ್ತಿದ್ದ ಅತುಲ್‌ಗೆ ಡಿಕ್ಕಿ ಹೊಡೆದರು. ಆದಾಗ್ಯೂ, ಅತುಲ್ ಹೆಲ್ಮೆಟ್ ಧರಿಸಿದ್ದರಿಂದ ಬದುಕುಳಿದರು. ಅತುಲ್ ಪೊಲೀಸ್ ದೂರು ದಾಖಲಿಸುವ ಬಗ್ಗೆ ಮಾತನಾಡಿದ್ದನು. ಆದರೆ ದಾಮಿನಿ ಇದಕ್ಕೆ ನಿರಾಕರಿಸಿದರು. ಕಾರಿನ ನಂಬರ್ ಗೊತ್ತಿಲ್ಲದಾಗ ದೂರು ಕೊಟ್ಟು ಏನು ಪ್ರಯೋಜನ? ಎಂದು ಕೇಳಿದರು.

ಇನ್ನು 2025ರ ಮೇ 12ರಂದು ಮೀರತ್‌ನ ಬಹ್ಸುಮಾ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಬರ್‌ಪುರ್ ಸಾದತ್ ಗ್ರಾಮದಲ್ಲಿ, ರವಿತಾ, ತನ್ನ ಪ್ರೇಮಿ ಅಮರ್‌ದೀಪ್ ಜೊತೆಗೆ, ತನ್ನ ಪತಿ ಅಮಿತ್ ನನ್ನು ಕತ್ತು ಹಿಸುಕಿ ಕೊಂದು ನಂತರ ಹಾವು ಕಡಿತದಂತೆ ಕಾಣುವಂತೆ ದೇಹದ ಮೇಲೆ ಹಾವನ್ನು ಎಸೆದರು. ಅಮರ್‌ದೀಪ್ ಹಾವಾಡಿಗರಿಂದ ಹಾವನ್ನು ಖರೀದಿಸಿದ್ದನು. ದಾಮಿನಿ ಮತ್ತು ತುಷಾರ್ ಇದೇ ರೀತಿಯಲ್ಲಿ ಅತುಲ್ ಕೊಲೆಗೆ ಯೋಜನೆ ರೂಪಿಸಿದ್ದರು.

ತುಷಾರ್ ತನ್ನ ಇಬ್ಬರು ಸ್ನೇಹಿತರಾದ ಸೋನು ಮತ್ತು ಉದಯ್ ಕುಮಾರ್ ಗೆ 5 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ವಿಷಪೂರಿತ ಹಾವನ್ನು ಹಿಡಿದು ಕೊಡುವಂತೆ ಕೇಳಿದ್ದನು. ಅದರಂತೆ ಇಬ್ಬರು ಆರೋಪಿಗಳು ವಿಷಪೂರಿತ ಹಾವನ್ನು ಹಿಡಿದು ಮಂಗಳವಾರ ತುಷಾರ್‌ಗೆ ಕೊಟ್ಟರು. ಅದು ಅತ್ಯಂತ ವಿಷಪೂರಿತ ಹಾವು ಎಂದು ಅವರು ಅವನಿಗೆ ಹೇಳಿದರು. ನಂತರ ತುಷಾರ್ ಹಾವನ್ನು ಗಾಜಿನ ಬಾಟಲಿಯಲ್ಲಿಟ್ಟು ದಾಮಿನಿಗೆ ಕೊಟ್ಟಿದ್ದನು. ಗುರುವಾರ ರಾತ್ರಿ ದಾಮಿನಿ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಪತಿಗೆ ಕೊಟ್ಟಿದ್ದಳು. ತಡರಾತ್ರಿ 2 ರಿಂದ 3 ಗಂಟೆಯ ನಡುವೆ, ದಾಮಿನಿ ಬಾಟಲಿಯನ್ನು ತೆರೆದು ಹಾವನ್ನು ಅತುಲ್ ಹಾಸಿಗೆಯ ಮೇಲೆ ಬಿಟ್ಟಳು. ಅದೇ ಹಾವು ಅತುಲ್ ನನ್ನು ಕಚ್ಚಿ ಅವನ ಬಟ್ಟೆಗಳಲ್ಲಿ ಅಡಗಿಕೊಂಡಿತ್ತು. ನಂತರ ದಾಮಿನಿ ಕೋಣೆಯಿಂದ ಹೊರಟುಹೋದಳು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದೀಗ ಕೊಲೆ ಪ್ರಕರಣ ಸಂಬಂಧ ದಾಮಿನಿ, ತುಷಾರ್ ನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ದಾಳಿ: 4 ಭಾರತೀಯರು ಸಾವು, ಭಾರತ ತೀವ್ರ ಖಂಡನೆ!

CJP Protest LIVE Updates | ಸಂಸತ್ತಿನಲ್ಲೂ ಮಾರ್ಧನಿಸಿದ CJP ಪ್ರತಿಭಟನೆ, ಉಭಯ ಸದನಗಳ ಕಲಾಪ ಮುಂದೂಡಿಕೆ, Abhijeet Dipke ಬಂಧಿಸಿಲ್ಲ ಎಂದ ದೆಹಲಿ ಪೊಲೀಸ್

ಫುಟ್‌ಬಾಲ್ ವಿಶ್ವಕಪ್ ಫೈನಲ್ ಗಲಾಟೆ: ಅರ್ಜೆಂಟೀನಾ ಆಟಗಾರರ ವರ್ತನೆಗೆ ಆಕ್ರೋಶ, ತನಿಖೆಗೆ ಮುಂದಾದ FIFA

ಮೊದಲ ಡೆಂಗ್ಯೂ ಲಸಿಕೆಗೆ ಭಾರತ ಅನುಮೋದನೆ: WHO ಶಿಫಾರಸು ಮಾಡಿರುವ ಲಸಿಕೆನ ಯಾರ್ಯಾರು ಪಡೆಯಬಹುದು!

ರಾಮಾಯಣ ಟ್ರೇಲರ್‌ನ ಮೊದಲ ವಿಮರ್ಶೆ: ರಾವಣನಾಗಿ ಯಶ್ ಅವತಾರಕ್ಕೆ ನಿರ್ದೇಶಕ ಅಟ್ಲಿ ಹೇಳಿದ್ದೇನು?