ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ 
ದೇಶ

ಭಾರಿ ಮಳೆಗೆ ಉತ್ತರ ತತ್ತರ; ಹಿಮಾಚಲದಲ್ಲಿ ವರುಣನ ಅಬ್ಬರ, ಧರ್ಮಶಾಲಾದಲ್ಲಿ ದಾಖಲೆಯ 149 ಮಿ.ಮೀ. ಮಳೆ

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (SEOC) ಮಾಹಿತಿ ಪ್ರಕಾರ, ಭಾರೀ ಮಳೆಯ ಪರಿಣಾಮ 31 ಕುಡಿಯುವ ನೀರು ಸರಬರಾಜು ಯೋಜನೆಗಳು ಮತ್ತು 19 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಕಾರ್ಯನಿರ್ವಹಣೆ ಸ್ಥಗಿತಗೊಂಡಿವೆ.

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮುಂದುವರೆದಿದ್ದು, ರಾಜ್ಯದ ಹಲವೆಡೆ ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗಿದೆ.

ಶಿಮ್ಲಾ ಹವಾಮಾನ ಇಲಾಖೆ ಶುಕ್ರವಾರ ರಾಜ್ಯದ ಕೆಲ ಪ್ರತ್ಯೇಕ ಪ್ರದೇಶಗಳಲ್ಲಿ ಆಗಸ್ಟ್ 6ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (SEOC) ಮಾಹಿತಿ ಪ್ರಕಾರ, ಭಾರೀ ಮಳೆಯ ಪರಿಣಾಮ 31 ಕುಡಿಯುವ ನೀರು ಸರಬರಾಜು ಯೋಜನೆಗಳು ಮತ್ತು 19 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಕಾರ್ಯನಿರ್ವಹಣೆ ಸ್ಥಗಿತಗೊಂಡಿವೆ.

ಧರ್ಮಶಾಲಾದಲ್ಲಿ ದಾಖಲೆಯ ಮಳೆ

ಇನ್ನು ಕಳೆದ 24 ಗಂಟೆಗಳಲ್ಲಿ ಧರ್ಮಶಾಲಾದಲ್ಲಿ 149.2 ಮಿ.ಮೀ. ಮಳೆಯಾಗಿದ್ದು, ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗಿದ್ದು, 122 ರಸ್ತೆಗಳು ಸಂಚಾರಕ್ಕೆ ಬಂದ್ ಆಗಿವೆ.

ಎಲ್ಲಿ ಎಷ್ಟು ಮಳೆ?

ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದು, ಧರ್ಮಶಾಲಾದಲ್ಲಿ ದಾಖಲೆಯ 149.2 ಮಿ.ಮೀ. ಮಳೆಯಾಗಿದೆ. ಉಳಿದಂತೆ ಜೋಟ್ – 76.8 ಮಿ.ಮೀ, ಭಟ್ಟಿಯಾತ್ – 75.3 ಮಿ.ಮೀ, ಗೋಹರ್ – 60 ಮಿ.ಮೀ, ನಿಚಾರ್ – 52 ಮಿ.ಮೀ, ಸರಹಾನ್ – 39 ಮಿ.ಮೀ, ಪಾಲಂಪುರ – 38 ಮಿ.ಮೀ, ಕೋಠಿ – 34.8 ಮಿ.ಮೀ ಮತ್ತು ಶಿಮ್ಲಾದಲ್ಲಿ 34 ಮಿ.ಮೀ. ಮಳೆಯಾಗಿದೆ.

ಮಂಡಿ ಜಿಲ್ಲೆಗೆ ಹೆಚ್ಚು ಹೊಡೆತ: 122 ರಸ್ತೆ ಬಂದ್‌

ಇನ್ನು ಬಿಜೆಪಿ ಸಂಸದೆ ಕಂಗನಾ ರಣಾವತ್ ಪ್ರತಿನಿಧಿಸುತ್ತಿರುವ ಮಂಡಿ ಜಿಲ್ಲೆ ಕೂಡ ಮಳೆಯಿಂದಾಗಿ ವ್ಯಾಪಕ ಹೊಡೆತ ತಿಂದಿದೆ. ಭಾರೀ ಮಳೆಯಿಂದ ಮಂಡಿ ಜಿಲ್ಲೆ ಅತ್ಯಂತ ಹೆಚ್ಚು ಹಾನಿಗೊಳಗಾಗಿದ್ದು, ಅಲ್ಲಿ 54 ರಸ್ತೆಗಳು ಬಂದ್ ಆಗಿವೆ. ಇದರ ನಂತರ ಕುಲ್ಲು ಜಿಲ್ಲೆಯಲ್ಲಿ 41, ಚಂಬಾದಲ್ಲಿ 8, ಶಿಮ್ಲಾದಲ್ಲಿ 7, ಕಾಂಗ್ರಾ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ತಲಾ 5, ಹಾಗೂ ಊನಾ ಜಿಲ್ಲೆಯಲ್ಲಿ 2 ರಸ್ತೆಗಳು ಸಂಚಾರಕ್ಕೆ ಬಂದ್ ಆಗಿವೆ.

ಆಗಸ್ಟ್ 6ರವರೆಗೆ ಯೆಲ್ಲೋ ಅಲರ್ಟ್

ಇದೇ ವೇಳೆ, ಕಾಂಗ್ರಾ ಹಾಗೂ ಸುಂದರನಗರ ಪ್ರದೇಶಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯೂ ಸುರಿದಿದ್ದು, ಸ್ಥಳೀಯ ಆಡಳಿತ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯ ಸಾಧ್ಯತೆ ಇರುವುದರಿಂದ ಭೂಕುಸಿತ, ಹಠಾತ್ ಪ್ರವಾಹ ಹಾಗೂ ಸಂಚಾರ ಅಡಚಣೆ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

ಅಲ್ಲದೆ ಆಗಸ್ಟ್ 6ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

'ಕರ್ನಾಟಕಕ್ಕೆ ನೀರು ನೀಡಲು ನಮ್ಮ ವಿರೋಧವಿಲ್ಲ.. ಆದ್ರೆ ಮೇಕೆದಾಟು ಬೇಡ": ಕಾವೇರಿ ವಿವಾದ ಕುರಿತು AIADMK ಸಂಸದ ಎಂ. ತಂಬಿದುರೈ

'ನಾನು ಯಂಗ್ ಹೃತಿಕ್ ರೋಷನ್ ತರಹ ಕಾಣುತ್ತೇನೆ ಅಂತ...': ಕಂಗನಾಗೆ CJP ವಕ್ತಾರ ಸೌರವ್ ದಾಸ್ ತಪರಾಕಿ!

ಕಾವೇರಿ ಕಿಚ್ಚಿನ ಮಧ್ಯೆ ಮಂಡ್ಯದಲ್ಲಿ ಘೋರ ದುರಂತ: ರೈತ ದಂಪತಿ ನೇಣಿಗೆ ಶರಣು; ಸರ್ಕಾರ ಸಮಸ್ಯೆ ಪರಿಹರಿಸಬೇಕು - ಬಿಜೆಪಿ ಆಗ್ರಹ