ವಿನೇಶ್ ಫೋಗಟ್  
ದೇಶ

ಕುಸ್ತಿಪಟು ವಿನೇಶ್ ಫೋಗಟ್ ಕೇಸ್; WFIಗೆ ಭಾರೀ ಹಿನ್ನೆಡೆ; ಅರ್ಜಿ ಅನಗತ್ಯ ಎಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್..!

ಹೈಕೋರ್ಟ್ ತನ್ನ ಆದೇಶದಲ್ಲಿ ಡಬ್ಲ್ಯುಎಫ್‌ಐ ನಿರ್ಧಾರಗಳನ್ನು "ದುರುದ್ದೇಶಪೂರಿತ" ಹಾಗೂ "ಖಂಡನೀಯ" ಎಂದು ಉಲ್ಲೇಖಿಸಿದ್ದ ವಿಚಾರವನ್ನು ರದ್ದುಪಡಿಸಬೇಕೆಂದು ಫೆಡರೇಷನ್ ಪರ ವಕೀಲರು ಮನವಿ ಮಾಡಿದರು.

ನವದೆಹಲಿ: ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ ಪ್ರವೇಶವನ್ನು ವಿರೋಧಿಸಿ ಭಾರತೀಯ ರೆಸ್ಲಿಂಗ್ ಫೆಡರೇಶನ್ (WFI) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠವು, ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಅರ್ಜಿಯು ತನ್ನ ಪ್ರಾಮುಖ್ಯತೆ ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿತು.

ವಿಚಾರಣೆ ವೇಳೆ ಡಬ್ಲ್ಯೂಎಫ್‌ಐ ಪರ ಹಾಜರಾದ ಹಿರಿಯ ವಕೀಲ ಡಿ.ಎನ್. ಗೋಬುರ್ಧನ್, ವಿನೇಶ್ ಫೋಗಟ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಿದ್ದರೂ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

"ಅವರು ಆಯ್ಕೆಯಾಗಲಿಲ್ಲ, ಆದರೆ, ವಿಚಾರಣೆ ವೇಳೆ ಸಾಕಷ್ಟು ವಿವಾದ ಸೃಷ್ಟಿಸಿದರು" ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಈಗ ಈ ವಿವಾದವು ಅನಗತ್ಯವಾಗಿದ್ದು, ಅರ್ಜಿಯನ್ನು ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿತು.

ಬಳಿಕ ಹೈಕೋರ್ಟ್ ತನ್ನ ಆದೇಶದಲ್ಲಿ ಡಬ್ಲ್ಯುಎಫ್‌ಐ ನಿರ್ಧಾರಗಳನ್ನು "ದುರುದ್ದೇಶಪೂರಿತ" ಹಾಗೂ "ಖಂಡನೀಯ" ಎಂದು ಉಲ್ಲೇಖಿಸಿದ್ದ ವಿಚಾರವನ್ನು ರದ್ದುಪಡಿಸಬೇಕೆಂದು ಫೆಡರೇಷನ್ ಪರ ವಕೀಲರು ಮನವಿ ಮಾಡಿದರು.

ಪ್ರಕರಣ ಇನ್ನೂ ಏಕಸದಸ್ಯ ಪೀಠದ ಮುಂದೆ ವಿಚಾರಣೆಯಲ್ಲಿರುವುದರಿಂದ ಆ ರೀತಿಯ ಅಭಿಪ್ರಾಯಗಳು ಉಳಿಯಬಾರದು ಎಂದು ವಾದಿಸಿದರು.

ಅರ್ಜಿಯನ್ನು ವಜಾಗೊಳಿಸಿದ ಮಾತ್ರಕ್ಕೆ ನಾವು ಹೈಕೋರ್ಟ್‌ನ ಪ್ರತಿಯೊಂದು ತೀರ್ಪನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇವೆ ಎಂದಲ್ಲ ಎಂದಿರುವ ಸುಪ್ರೀಂ ಕೋರ್ಟ್, ಈ ಕ್ರೀಡಾ ನೀತಿ ಮತ್ತು ಕಾನೂನು ಅಂಶಗಳ ಕುರಿತು ಮುಂದಿನ ದಿನಗಳಲ್ಲಿ ಸಿಂಗಲ್ ಜಡ್ಜ್ ಪೀಠವು ಮುಕ್ತವಾಗಿ ಮರುಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿತು.

ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಾನೂನು ಪ್ರಶ್ನೆಗಳನ್ನು ಮುಕ್ತವಾಗಿಯೇ ಇರಿಸಿ, ಅರ್ಜಿಯನ್ನು ಅನಗತ್ಯ (Infructuous) ಎಂದು ಪರಿಗಣಿಸಿ ವಿಲೇವಾರಿ ಮಾಡಿತು.

ತಾಯ್ತನದ ವಿರಾಮದ (Maternity Break) ನಂತರ ಕ್ರೀಡಾಂಗಣಕ್ಕೆ ಮರಳಿದ್ದ ವಿನೇಶ್ ಫೋಗಟ್ ಅವರನ್ನು ಆಯ್ಕೆ ಟ್ರಯಲ್ಸ್‌ನಿಂದ ಹೊರಗಿಡಲು WFI ಯತ್ನಿಸಿತ್ತು. ಇದನ್ನು ಪ್ರಶ್ನಿಸಿ ಫೋಗಟ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆಗ ಹೈಕೋರ್ಟ್, ಫೆಡರೇಶನ್ ಕ್ರಮವನ್ನು ತೀವ್ರವಾಗಿ ಖಂಡಿಸಿ, ಇದು "ಖಂಡನೀಯ" ಮತ್ತು "ದ್ವೇಷಪೂರಿತ" ನಡವಳಿಕೆ ಎಂದು ಬಣ್ಣಿಸಿತ್ತು. ಅಲ್ಲದೆ, ಫೋಗಟ್ ಅವರಿಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ತಕ್ಷಣವೇ ಅವಕಾಶ ನೀಡುವಂತೆ ಆದೇಶಿಸಿತ್ತು.

ಇದರ ಬೆನ್ನಲ್ಲೇ ದೆಹಲಿ ಹೈಕೋರ್ಟ್ ತನ್ನ ವಿರುದ್ಧ ಮಾಡಿದ್ದ ಕಠಿಣ ಟೀಕೆಗಳನ್ನು ದಾಖಲೆಯಿಂದ ತೆಗೆದುಹಾಕಬೇಕು (Expunge) ಎಂದು ಕೋರಿ WFI ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

LS Debate: ದೇಶದ ಯುವಶಕ್ತಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ: ಸಂಸದೆ ಪ್ರಿಯಾಂಕಾ ವಾದ್ರಾ

Video: ಕರ್ನಾಟಕದಲ್ಲಿ 'ಕನ್ನಡಿಗ'ನಿಗೇ ಜಾಗ ಇಲ್ಲವೇ? BMTC ಬಸ್ಸಿನ ಮೇಲೆ ಅಂಟಿಸಿದ್ದ ಸ್ಟಿಕರ್ ತೆರವು ಖಂಡಿಸಿದ JDS

5 ವಿಕೆಟ್‌, 0 ರನ್‌: ಜಸ್ಟಿನ್ ಗ್ರೀವ್ಸ್ ಮಾರಕ ದಾಳಿಗೆ ಪಾಕಿಸ್ತಾನ ತತ್ತರ; ಹೊಸ ವಿಶ್ವದಾಖಲೆ ಬರೆದ ವಿಂಡೀಸ್ ವೇಗಿ! Video

LS Debate: ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು, ತತ್ತರಿಸಿ ಹೋಗಿದೆ- ಅಖಿಲೇಶ್ ಯಾದವ್

ಬರದ ನಡುವೆ ರಾಜ್ಯಕ್ಕೆ ಮತ್ತೊಂದು ಹೊರೆ: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡಲು CWRC ಆದೇಶ!