ಖಾನ್ ಸರ್ 
ದೇಶ

Court stays: ಮುಂದಿನ ಆದೇಶದವರೆಗೂ 'ಖಾನ್ ಸರ್' ಬಂಧನಕ್ಕೆ ಪಾಟ್ನಾ ನ್ಯಾಯಾಲಯದ ತಡೆ!

ಮುಂದಿನ ಆದೇಶದವರೆಗೂ ಅವರನ್ನು ಬಂಧಿಸದಂತೆ ಮತ್ತು ಮುಂದಿನ ವಿಚಾರಣೆಯಲ್ಲಿ ಪ್ರಕರಣದ ಡೈರಿ ಮತ್ತಿತರ ಸಾಕ್ಷಿ ಪುರಾವೆಗಳನ್ನು ಹಾಜರುಪಡಿಸಲು ನ್ಯಾಯಾಲಯ ಆದೇಶಿಸಿದೆ

ಪಾಟ್ನಾ: 'ಖಾನ್ ಸರ್' ಎಂದೇ ಜನಪ್ರಿಯವಾಗಿರುವ ಶಿಕ್ಷಕ ಫೈಸಲ್ ಖಾನ್ ಅವರ ಬಂಧನಕ್ಕೆ ಮಂಗಳವಾರ ಪಾಟ್ನಾ ನ್ಯಾಯಾಲಯವು ತಡೆ ನೀಡಿದೆ.

ವಾರದ ಹಿಂದೆ ಅವರ ಕೋಚಿಂಗ್ ಸಂಸ್ಥೆಯನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಅವರ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದ ಎಫ್ ಐಆರ್ ನಲ್ಲಿ 'ಖಾನ್ ಸರ್ ಹೆಸರಿದೆ.

ಮುಂದಿನ ಆದೇಶದವರೆಗೂ ಅವರನ್ನು ಬಂಧಿಸದಂತೆ ಮತ್ತು ಮುಂದಿನ ವಿಚಾರಣೆಯಲ್ಲಿ ಪ್ರಕರಣದ ಡೈರಿ ಮತ್ತಿತರ ಸಾಕ್ಷಿ ಪುರಾವೆಗಳನ್ನು ಹಾಜರುಪಡಿಸಲು ನ್ಯಾಯಾಲಯ ಆದೇಶಿಸಿದೆ ಎಂದು ಖಾನ್ ಸರ್ ಅವರ ವಕೀಲ ಅರವಿಂದ್ ಕುಮಾರ್ ಮೌರ್ ಸುದ್ದಿಗಾರರಿಗೆ ತಿಳಿಸಿದರು.

ಖಾನ್ ಸರ್ ಸೋಮವಾರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಕಾನೂನಿನ ಪ್ರಕಾರ ಎಲ್ಲಾ ಸಂಗತಿಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಪ್ರಕರಣವನ್ನು ಪರಿಶೀಲಿಸಿದ ನಂತರ, ನ್ಯಾಯಾಲಯವು ಅಂತಿಮ ಆದೇಶವನ್ನು ನೀಡುವ ನಿರೀಕ್ಷೆಯಿದೆ. ಮುಂದಿನ ವಿಚಾರಣೆ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಅವರು ಹೇಳಿದರು.

ಗುರುವಾರ ಪೊಲೀಸರು ವಶಕ್ಕೆ ಪಡೆದ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಸಂಬಂಧಿಸಿದ ಪೂರ್ವಾಪರಗಳನ್ನು ನ್ಯಾಯಾಲಯ ಕೇಳಿದೆ. ಅವರ ಪ್ರಕರಣವನ್ನು ನಾಳೆಗೆ ನಿಗದಿಪಡಿಸಲಾಗಿದೆ. ಪ್ರಕರಣದ ದಿನಚರಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ವಿಚಾರಣೆ ನಡೆಯಲಿದೆ" ಎಂದು ವಕೀಲರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದ್ವೇಷದ ಕಾರ್ಖಾನೆಯಿಂದ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ, ‘ಹತ್ಯಾಕಾಂಡವನ್ನು ಸೇನಾ ಕಾರ್ಯಾಚರಣೆ ಎಂದರೆ ಪಾಪ ಕಳೆಯಲ್ಲ’: Pak ವಿರುದ್ಧ ಭಾರತ ಗುಡುಗು

ಯಾಕಿಷ್ಟು ಚಿಂತಿತರಾಗಿದ್ದೀರಿ? RSS ನೋಂದಣಿಗಾಗಿ ದಾಖಲೆ ಸಿದ್ಧವಾಗಿಡಲು ಹೇಳಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು!

BDA, BMRDA ಇಲ್ಲದ ಬೆಂಗಳೂರು ಅಭಿವೃದ್ಧಿ ಖಾತೆಗೆ ಬೆಲೆಯೇ ಇಲ್ಲ: ರಾಮಲಿಂಗಾ ರೆಡ್ಡಿ ಬಳಿಕ ಕೃಷ್ಣ ಬೈರೇಗೌಡ ಸಿಟ್ಟು, ಹೈಕಮಾಂಡ್‌ಗೆ ದೂರು..?

H-1B ವೀಸಾ ಅರ್ಜಿದಾರರಿಗೆ ಬಿಗ್ ರಿಲೀಫ್: ಟ್ರಂಪ್ ಹೇರಿದ್ದ ಭಾರೀ ಶುಲ್ಕ ರದ್ದು, 'fast-track fee' ಕಾನೂನುಬಾಹಿರ ಎಂದ ಫೆಡರಲ್ ಕೋರ್ಟ್

'ಸಂಪೂರ್ಣ ಗೆಲುವಿ'ನೊಂದಿಗೆ ಇನ್ನೂ 18 ದಿನಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯ: ಡೊನಾಲ್ಡ್ ಟ್ರಂಪ್ ಭರವಸೆ

SCROLL FOR NEXT