ಮಹುವಾ ಮೊಯಿತ್ರಾ  
ದೇಶ

19 ಮಂದಿ ದ್ರೋಹಿಗಳು ರಾಜೀನಾಮೆ ನೀಡಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲಿ: ಮಹುವಾ ಮೊಯಿತ್ರಾ ಸವಾಲು

ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೊಯಿತ್ರಾ, 2003ರ 91ನೇ ಸಂವಿಧಾನ ತಿದ್ದುಪಡಿಯ ಮೂಲಕ ಪ್ರತ್ಯೇಕ ಗುಂಪು (Split) ಎಂಬ ಅವಕಾಶವನ್ನು ತೆಗೆದುಹಾಕಲಾಗಿದೆ ಎಂದು ಉಲ್ಲೇಖಿಸಿದರು.

ಮಹುವಾ ಮೊಯಿತ್ರಾ ತೃಣಮೂಲ ಕಾಂಗ್ರೆಸ್‌ನ (All India Trinamool Congress) ಬಂಡಾಯ ಸಂಸದರ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಅವರು ಸಂವಿಧಾನವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಹಾಗೂ ಸಂಸತ್ತಿನಲ್ಲಿ ಪ್ರತ್ಯೇಕ ಗುಂಪಾಗಿ ಮಾನ್ಯತೆ ಪಡೆಯಲು ಯಾವುದೇ ಕಾನೂನು ಆಧಾರವಿಲ್ಲ ಎಂದು ಹೇಳಿದ್ದಾರೆ.

ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೊಯಿತ್ರಾ, 2003ರ 91ನೇ ಸಂವಿಧಾನ ತಿದ್ದುಪಡಿಯ ಮೂಲಕ ಪ್ರತ್ಯೇಕ ಗುಂಪು (Split) ಎಂಬ ಅವಕಾಶವನ್ನು ತೆಗೆದುಹಾಕಲಾಗಿದೆ ಎಂದು ಉಲ್ಲೇಖಿಸಿದರು.

ಟಿಎಂಸಿಯ ದ್ರೋಹಿ ಶಾಸಕರು ಮತ್ತು ಸಂಸದರಿಗೆ ಕಾನೂನು ಗೊತ್ತಿಲ್ಲ. 2003ರ 91ನೇ ಸಂವಿಧಾನ ತಿದ್ದುಪಡಿಯು ಪ್ರತ್ಯೇಕ ಗುಂಪು ರಚಿಸುವ ಅವಕಾಶವನ್ನು ರದ್ದುಗೊಳಿಸಿದೆ. ಸಂಸದರ ಸಂಖ್ಯೆ ಮುಖ್ಯವಲ್ಲ. ಮೂಲ ರಾಜಕೀಯ ಪಕ್ಷದ ಮೂರನೇ ಎರಡರಷ್ಟು ಸದಸ್ಯರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಬೇಕು. ಈ 19 ಮಂದಿ ದ್ರೋಹಿಗಳು ರಾಜೀನಾಮೆ ನೀಡಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಬೇಕು ಎಂದು ಬರೆದಿದ್ದಾರೆ.

ಟಿಎಂಸಿಯ 19 ಬಂಡಾಯ ಸಂಸದರು ಲೋಕಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕೋರಿ ಸ್ಪೀಕರ್‌ಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. ಈ ಬೆಳವಣಿಗೆಯಿಂದ ಪಕ್ಷದಲ್ಲಿ ವಿಭಜನೆಯ ಊಹಾಪೋಹಗಳು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಸಂಭಾವ್ಯ ಹೊಂದಾಣಿಕೆಯ ಚರ್ಚೆಗಳು ಜೋರಾಗಿವೆ.

ಕೆಲ ದಿನಗಳ ಹಿಂದೆ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದ ಮೊಯಿತ್ರಾ, ಬಂಡಾಯ ಗುಂಪು ಟಿಎಂಸಿಯ ಮೂರನೇ ಎರಡರಷ್ಟು ಸಂಸದರ ಬೆಂಬಲ ಪಡೆದರೂ ಸಹ ಪ್ರತ್ಯೇಕ ಸಂಸದೀಯ ಗುಂಪಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ದ್ರೋಹಿಗಳು 19 ಸಂಸದರ (ಮೂರನೇ ಎರಡರಷ್ಟು) ಬೆಂಬಲ ಪಡೆದರೂ — ವಾಸ್ತವದಲ್ಲಿ ಪಡೆದಿಲ್ಲ — ಅವರಿಗೆ ಇರುವ ಏಕೈಕ ಆಯ್ಕೆ ಬಿಜೆಪಿ ಜೊತೆ ವಿಲೀನಗೊಳ್ಳುವುದಾಗಿದೆ. ಭೂಪೇಂದರ್ ಯಾದವ್ ಅಥವಾ ಓಂ ಬಿರ್ಲಾ ಅವರು ಹೊಸ ರಾಜಕೀಯ ಪಕ್ಷ ಅಥವಾ ಪ್ರತ್ಯೇಕ ಬಣವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅವರು ಹಿಂದಿನ ಪೋಸ್ಟ್‌ನಲ್ಲಿ ಹೇಳಿದ್ದರು.

ಇತ್ತೀಚಿನ Subhash Desai vs Principal Secretary Governor of Maharashtra ತೀರ್ಪನ್ನು ಉಲ್ಲೇಖಿಸಿದ ಅವರು, 2023ರ ಸುಭಾಷ್ ದೇಸಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಈ ವಿಚಾರವನ್ನು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಇದೇ ವೇಳೆ ಟಿಎಂಸಿಯೊಳಗಿನ ಸಂಘಟನಾತ್ಮಕ ವಿಭಜನೆಯ ಲಕ್ಷಣಗಳು ಮತ್ತಷ್ಟು ಸ್ಪಷ್ಟವಾಗುತ್ತಿವೆ.

ಇತ್ತೀಚೆಗೆ, ದೆಹಲಿಯ ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಟಿಎಂಸಿ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ. ಈ ಕಚೇರಿ ಬಂಡಾಯ ಸಂಸದರಲ್ಲಿ ಒಬ್ಬರಾಗಿರುವ ಪಾರ್ಥ ಬೌಮಿಕ್ ಅವರ ನಿವಾಸದಲ್ಲಿದೆ. ನಂತರ ಆ ಪೋಸ್ಟರ್‌ಗಳನ್ನು ರಾಜ್ಯಸಭಾ ಸಂಸದ ನಡಿಮೂಲ್ ಹಾಕ್ ಅವರ ಸೌತ್ ಅವೆನ್ಯೂ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

ಪಕ್ಷದ ಮಾಜಿ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು 19 ಲೋಕಸಭಾ ಸದಸ್ಯರು ಹಾಗೂ 64 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಮೇ 18ರಂದು ಈ ಗುಂಪು 19 ಸಂಸದರ ಹೆಸರುಗಳನ್ನು ಲೋಕಸಭಾ ಸ್ಪೀಕರ್‌ಗೆ ಸಲ್ಲಿಸಿ ಸಂಸತ್ತಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕೋರಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯಸಭೆ ನಾಮಪತ್ರ ವಿವಾದ: ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್‌ಗೆ ಸುಪ್ರೀಂ ಕೋರ್ಟ್‌ ಶಾಕ್, ಪರಿಹಾರಕ್ಕಾಗಿ ECI ಮೊರೆ ಹೋಗುವಂತೆ ಸೂಚನೆ..!

ಧರ್ಮಸ್ಥಳ ಬುರುಡೆ ಕೇಸ್ ನಲ್ಲಿ ಪ್ರಕಾಶ್ ರಾಜ್ ಹೆಸರು ಥಳುಕು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

"ನಿಮ್ಮ ಶಸ್ತ್ರಾಸ್ತ್ರಗಳು ಭಾರತದ ವಿರುದ್ಧ ಬಳಕೆಯಾಗಿವೆ": ರಷ್ಯಾ ತೈಲ ಖರೀದಿ ಸಮರ್ಥಿಸಿ, ಯುರೋಪ್ ದೇಶಗಳ ದ್ವಿಮುಖ ನೀತಿ ಬೆತ್ತಲು ಮಾಡಿದ ಜೈಶಂಕರ್..!

ಇರಾನ್‌ ಜೊತೆ ಯುದ್ಧ ಅಂತ್ಯಗೊಂಡಿದೆ, ವಾರಾಂತ್ಯದಲ್ಲಿ ಯುರೋಪಿನಲ್ಲಿ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

Bidadi Township:​ ವಿವಾದದ ಮಧ್ಯೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ ಸರ್ಕಾರ!

SCROLL FOR NEXT