ಸಂಜಯ್ ರಾವತ್ 
ದೇಶ

ಬಂಡಾಯ ಸಂಸದರು 'ದೇಶದ್ರೋಹಿಗಳು'; ಅವರಿಗೆ ಮತ್ತೆ 10 ಕೋಟಿ ರೂ ನೀಡಿ ರಾಜಸ್ಥಾನಕ್ಕೆ ಶಿಫ್ಟ್ ಮಾಡಲಾಗಿದೆ!

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವತ್, ಭಿನ್ನಮತೀಯ ಸೇನಾ(ಯುಬಿಟಿ) ಸಂಸದರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.

ನವದೆಹಲಿ: ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣ ಸೇರಲು ಮುಂದಾಗಿರುವ ತಮ್ಮ ಪಕ್ಷದ ಬಂಡಾಯ ಸಂಸದರನ್ನು ದೇಶದ್ರೋಹಿಗಳು ಎಂದು ಟೀಕಿಸಿದ ಶಿವಸೇನಾ(ಯುಬಿಟಿ) ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರು, ಆ ಸಂಸದರಿಗೆ ಹೆಚ್ಚುವರಿಯಾಗಿ 10 ಕೋಟಿ ರೂಪಾಯಿ ನೀಡಿ ರಾಜಸ್ಥಾನದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವತ್, ಭಿನ್ನಮತೀಯ ಸೇನಾ(ಯುಬಿಟಿ) ಸಂಸದರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ತಮ್ಮ ಸಂಸದರಿಗೆ ಮತ್ತು ಅವರ ಆಸ್ತಿಗಳಿಗೆ ನೀಡಿರುವ ಮುಚ್ಚಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಬಂಡಾಯ ಸಂಸದರ ವಿರುದ್ಧ ಪಕ್ಷವು ‘ಆಪರೇಷನ್ ತುಡ್ವಾ’ ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದರು.

"ಬಂಡಾಯ ಶಿವಸೇನೆ(ಯುಬಿಟಿ) ಸಂಸದರಿಗೆ ತಲಾ 10 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹಿಂದೆ ಅವರಿಗೆ ತಲಾ 15 ಕೋಟಿ ರೂ. ನೀಡಲಾಗಿತ್ತು. ಅವರು ದೆಹಲಿಯಿಂದ ರಾಜಸ್ಥಾನದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ," ಎಂದು ರಾವತ್ ಹೇಳಿದರು.

ನಮ್ಮ ಸಂಸದರಿಗೆ ಪಕ್ಷ ಬದಲಾಯಿಸಲು ತಲಾ 50 ಕೋಟಿ ರೂಪಾಯಿ ನೀಡಲಾಗುತ್ತಿದೆ ಎಂದು ರಾವತ್ ಈ ಹಿಂದೆ ಆರೋಪಿಸಿದ್ದರು.

ಸೇನಾ (ಯುಬಿಟಿ) ಕಾರ್ಯಕರ್ತರು ತಮ್ಮ ಗೆಲುವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸಿದ್ದಾರೆ ಎಂದು ಒತ್ತಿ ಹೇಳಿದ ರಾವತ್, ಬಂಡಾಯ ಸಂಸದರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಸ್ತೂರಿರಂಗನ್ ವರದಿಯ ಭೌತಿಕ ಸಮೀಕ್ಷೆ ಬಗ್ಗೆ ಜನರ ಅಹವಾಲು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಸಿಎಂ; Video

'ಒಳ ಉಡುಪಿನಲ್ಲಿ ಆ ದೃಶ್ಯ ಮಾಡಿ ಅಂದ್ರು': ಬಾಲಿವುಡ್ ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ನಟಿ ರಾಧಿಕಾ ಆಪ್ಟೆ!

ದೀದಿಗೆ ದಿನಕ್ಕೊಂದು ಶಾಕ್; ನಂದೀಗ್ರಾಮದ ಬಳಿಕ ಕೈಕೊಟ್ಟ ರೆಜಿನಗರ ಉಪಚುನಾವಣೆ ಅಭ್ಯರ್ಥಿ ರಬಿಯುಲ್ ಆಲಂ ಚೌಧರಿ; ನಾಮಪತ್ರ ವಾಪಸ್

'ಅಣ್ಣಾ ಅನ್ನಿಸ್ಕೋಬೇಕು ಅಂದ್ರೆ ತಮ್ಮನಿಗೆ ಕೆಲ ಬೆಲೆ ಇರಬೇಕು': 'ಮಾಡ್ರನ್ ಮಹಾಕವಿ' ಮಂಜುಗೆ 'ಕಿಚ್ಚ' ಫುಲ್ ಕ್ಲಾಸ್

ಗ್ರಾನೈಟ್ ಉದ್ಯಮಿ, ಜೆಮ್ ಗ್ರೂಪ್‌ ಅಧ್ಯಕ್ಷ ವೀರಮಣಿ ಸೆಕ್ಸ್ ಹಗರಣ: ಮತಷ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಲೋಕಲ್ ‘Epstein filesʼ ಎಂದ ನೆಟ್ಟಿಗರು!