ಮೂರು ಯುದ್ಧ ನೌಕೆಗಳ ಲೋಕಾರ್ಪಣೆ 
ದೇಶ

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: ಸ್ವದೇಶಿ ನಿರ್ಮಿತ INS ದುನಗಿರಿ, ಸನ್ಶೋಧಕ್, ಅಗ್ರಾಯ್ ಯುದ್ಧನೌಕೆಗಳು ಲೋಕಾರ್ಪಣೆ

ಸ್ವದೇಶಿ ನಿರ್ಮಿತ ಈ ಮೂರು ಮುಂಚೂಣಿ ನೌಕಾಪಡೆ ನೌಕೆಗಳಾದ 'ಸ್ಟೆಲ್ತ್ ಫ್ರಿಗೇಟ್ ದುನಗಿರಿ', ದೊಡ್ಡ ಸಮೀಕ್ಷಾ ಹಡಗು ಸಂಶೋಧಕ 'ಸನ್ಶೋಧಕ್' ಹಾಗೂ ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆ 'ಅಗ್ರಾಯ್' ಯುದ್ಧನೌಕೆಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಕೋಲ್ಕತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಕೊಲ್ಕತ್ತಾದ ಶ್ಯಾಮಪ್ರಸಾದ್ ಮುಖರ್ಜಿ ಬಂದರಿನಲ್ಲಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾದ ಭಾರತೀಯ ನೌಕಾಪಡೆಯ ಮೂರು ಯುದ್ಧನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಸ್ವದೇಶಿ ನಿರ್ಮಿತ ಈ ಮೂರು ಮುಂಚೂಣಿ ನೌಕಾಪಡೆ ನೌಕೆಗಳಾದ 'ಸ್ಟೆಲ್ತ್ ಫ್ರಿಗೇಟ್ ದುನಗಿರಿ', ದೊಡ್ಡ ಸಮೀಕ್ಷಾ ಹಡಗು ಸಂಶೋಧಕ 'ಸನ್ಶೋಧಕ್' ಹಾಗೂ ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆ 'ಅಗ್ರಾಯ್' ಯುದ್ಧನೌಕೆಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.

ಈ ಪೈಕಿ ಅಗ್ರಾಯ್ ಯುದ್ಧ ನೌಕೆ ಸಮುದ್ರ ಯುದ್ಧ, ಜಲವೈಜ್ಞಾನಿಕ ಸಮೀಕ್ಷೆ ಮತ್ತು ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಕಾರ್ಯಾಚರಣಾ ಸಾಮರ್ಥ್ಯವನ್ನು ಪ್ರತಿನಿಧಿಸುತ್ತವೆ.

ನೌಕೆಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ನೌಕೆಗಳನ್ನು ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋ ವಿನ್ಯಾಸಗೊಳಿಸಿದ್ದು, ಕೊಲ್ಕತ್ತಾ ಮೂಲದ ಸಾರ್ವಜನಿಕ ವಲಯದ ರಕ್ಷಣಾ ಸಂಸ್ಥೆಯಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ ಲಿಮಿಟೆಡ್ (GRSE) ನಿರ್ಮಿಸಿದೆ.

ಈ ನೌಕೆಗಳಲ್ಲಿ ಶೇಕಡಾ 75ಕ್ಕಿಂತ ಹೆಚ್ಚಿನ ಪ್ರಮಾಣದ ಸ್ವದೇಶಿ ಅಂಶಗಳು ಅಳವಡಿಕೆಯಾಗಿದ್ದು, ಅವುಗಳ ನಿರ್ಮಾಣದಲ್ಲಿ 200ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSMEಗಳು) ಸೇರಿದಂತೆ ಭಾರತೀಯ ಕೈಗಾರಿಕೆಗಳ ವ್ಯಾಪಕ ಪಾಲ್ಗೊಳ್ಳುವಿಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತ್ಯಂತ ಮಾರಕ ದುನಗಿರಿ ಯುದ್ಧನೌಕೆ

ಇನ್ನು ಈ ಯುದ್ಧ ನೌಕೆಗಳ ಸೇರ್ಪಡೆಗೂ ಮುನ್ನ ಭಾರತೀಯ ನೌಕಾಪಡೆ ತನ್ನ ಯೂಟ್ಯೂಬ್ ವಿಡಿಯೋದಲ್ಲಿ ದುನಗಿರಿಯನ್ನು ಶಕ್ತಿಶಾಲಿ ಮತ್ತು ಅತ್ಯಾಧುನಿಕ ಯುದ್ಧನೌಕೆಯೆಂದು ಬಣ್ಣಿಸಿತ್ತು.

"ನಿಖರತೆ, ಶಕ್ತಿ ಮತ್ತು ಚುರುಕುತನದ ಪ್ರತೀಕವಾಗಿರುವ ದುನಗಿರಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವೇದಕ ವ್ಯವಸ್ಥೆಗಳನ್ನು ಹೊಂದಿದೆ. ದೀರ್ಘಾವಧಿಯ ಸಮುದ್ರ ಕಾರ್ಯಾಚರಣೆಗಳಿಗೆ ಸೂಕ್ತವಾಗಿ ವಿನ್ಯಾಸಗೊಳಿಸಲಾಗಿದ್ದು, ಸ್ವದೇಶಿ ಸ್ಟೆಲ್ತ್ ತಂತ್ರಜ್ಞಾನವನ್ನು ಒಳಗೊಂಡಿದೆ. ಬಹುಆಯಾಮದ ಪ್ರಾಬಲ್ಯ ಮತ್ತು ಪ್ರಬಲ ದಾಳಿ ಸಾಮರ್ಥ್ಯಕ್ಕಾಗಿ ದುನಗಿರಿಯನ್ನು ನಿರ್ಮಿಸಲಾಗಿದೆ" ಎಂದು ನೌಕಾಪಡೆ ತಿಳಿಸಿತ್ತು.

ದುನಗಿರಿಯಲ್ಲಿ ಬ್ರಹ್ಮೋಸ್ ಮೇಲ್ಮೈ-ಮೇಲ್ಮೈ ಕ್ಷಿಪಣಿಗಳು ಹಾಗೂ ಮಧ್ಯಮ ವ್ಯಾಪ್ತಿಯ ಮೇಲ್ಮೈ-ವಾಯು ಕ್ಷಿಪಣಿ (MRSAM) ವ್ಯವಸ್ಥೆ ಸೇರಿದಂತೆ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳನ್ನು ಅಳವಡಿಸಲಾಗಿದ್ದು, ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ.

ಅಂತೆಯೇ ಸಂನ್ಶೋಧಕ್ ಯುದ್ಧ ನೌಕೆ, ನಾಲ್ಕನೇ ದೊಡ್ಡ ಸಮೀಕ್ಷಾ ಹಡಗಾಗಿದ್ದು, ಕರಾವಳಿ ಹಾಗೂ ಆಳ ಸಮುದ್ರದ ಜಲವೈಜ್ಞಾನಿಕ ಸಮೀಕ್ಷೆಗಳನ್ನು ನಡೆಸಲು ಮತ್ತು ರಕ್ಷಣಾ ಹಾಗೂ ನಾಗರಿಕ ಬಳಕೆಗಾಗಿ ಸಾಗರಶಾಸ್ತ್ರೀಯ ಹಾಗೂ ಭೌಗೋಳಿಕ ದತ್ತಾಂಶ ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಸ್ವಯಂಚಾಲಿತ ಜಲಾಂತರ್ಗಾಮಿ ವಾಹನಗಳು (AUV) ಹಾಗೂ ದೂರ ನಿಯಂತ್ರಿತ ವಾಹನಗಳು (ROV) ಸೇರಿದಂತೆ ಅತ್ಯಾಧುನಿಕ ಸಮೀಕ್ಷಾ ಸಾಧನಗಳನ್ನು ಅಳವಡಿಸಲಾಗಿದೆ.

ಮೂರನೇ ಯುದ್ಧ ನೌಕೆ ಅಗ್ರಾಯ್, ಅರ್ನಾಲಾ ವರ್ಗದ ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆಗಳ ಸರಣಿಯ ನಾಲ್ಕನೇ ನೌಕೆಯಾಗಿದ್ದು, ಹಗುರ ತೂಕದ ಟಾರ್ಪಿಡೊಗಳು, ಸ್ವದೇಶಿ ರಾಕೆಟ್ ಲಾಂಚರ್‌ಗಳು ಹಾಗೂ ಅಲ್ಪ ಆಳದ ಸೋನಾರ್ ವ್ಯವಸ್ಥೆಗಳನ್ನು ಹೊಂದಿದೆ. ಇವು ಕರಾವಳಿ ಪ್ರದೇಶಗಳಲ್ಲಿ ನೀರಿನೊಳಗಿನ ಅಪಾಯಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ