ಮನು 
ದೇಶ

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಕೇರಳ ಕ್ರಿಕೆಟ್ ಕೋಚ್‌ಗೆ 99 ವರ್ಷ ಜೈಲು ಶಿಕ್ಷೆ; ಇನ್ನೂ 3 ಪ್ರಕರಣ ಬಾಕಿ!

ತಿರುವನಂತಪುರಂನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು, ನಗರದ ಶ್ರೀವರಾಹಂ ನಿವಾಸಿ ಮನುಗೆ 48 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಮೂರನೇ ಪ್ರಕರಣದಲ್ಲಿ 79,000 ರೂ. ದಂಡ ವಿಧಿಸಿದೆ.

ತಿರುವನಂತಪುರಂ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೂರು ಪ್ರತ್ಯೇಕ ಪೋಕ್ಸೊ ಪ್ರಕರಣಗಳಲ್ಲಿ ತಪ್ಪಿತಸ್ಥರಾದ ಕೇರಳ ಕ್ರಿಕೆಟ್ ಅಸೋಸಿಯೇಷನ್​​(ಕೆಸಿಎ) ಮಾಜಿ ಕೋಚ್ ಎಂ ಮನು(40)ಗೆ ಈಗ ಒಟ್ಟು 99 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನೂ ಮೂರು ಪ್ರಕರಣಗಳ ತೀರ್ಪು ಬಾಕಿ ಇರುವುದರಿಂದ, ಒಟ್ಟು ಜೈಲು ಶಿಕ್ಷೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇತ್ತೀಚಿನ ತೀರ್ಪಿನಲ್ಲಿ, ತಿರುವನಂತಪುರಂನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು, ನಗರದ ಶ್ರೀವರಾಹಂ ನಿವಾಸಿ ಮನುಗೆ 48 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಮೂರನೇ ಪ್ರಕರಣದಲ್ಲಿ 79,000 ರೂ. ದಂಡ ವಿಧಿಸಿದೆ. ಮೂರನೇ ಪ್ರಕರಣದಲ್ಲಿಯೂ ವಿಶೇಷ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ ತೀರ್ಪು ನೀಡಿದ್ದಾರೆ.

ನಾಲ್ಕನೇ ಪ್ರಕರಣದಲ್ಲೂ ಮನು ತಪ್ಪಿತಸ್ಥನೆಂದು ನ್ಯಾಯಾಲಯವು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 427 ರ ಅಡಿಯಲ್ಲಿ ನ್ಯಾಯಾಲಯವು, ಇತ್ತೀಚಿನ ಶಿಕ್ಷೆಯು ಹಿಂದಿನ ಶಿಕ್ಷೆಗಳೊಂದಿಗೆ ಸತತವಾಗಿ ಮುಂದುವರಿಯುತ್ತವೆ ಎಂದು ಹೇಳಿದೆ. ಮನುಗೆ ಈ ಹಿಂದೆ ಮೊದಲ ಪ್ರಕರಣದಲ್ಲಿ 16 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಎರಡನೇ ಪ್ರಕರಣದಲ್ಲಿ 35 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶನಿವಾರ 48 ವರ್ಷಗಳ ಶಿಕ್ಷೆಯೊಂದಿಗೆ, ಕಾಮುನಿಗೆ ಒಟ್ಟು 99 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ತರಬೇತಿಗೆ ಬರುತ್ತಿದ್ದವರಿಗೆ ಲೈಂಗಿಕ ಕಿರುಕುಳ

ಕೇರಳ ಕ್ರಿಕೆಟ್ ಅಸೋಸಿಯೇಷನ್ ​​ಪರವಾಗಿ ಕ್ರಿಕೆಟ್ ತರಬೇತಿ ನೀಡುತ್ತಿದ್ದ ಮನು ಅವರ ಬಳಿ 2018 ರಲ್ಲಿ ಯುವ ಆಟಗಾರ್ತಿಯೊಬ್ಬರು ತರಬೇತಿ ಪಡೆಯುತ್ತಿದ್ದರು. ಆ ಸಮಯದಲ್ಲಿ, ಮನು ಆಟಗಾರ್ತಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕ್ರಿಕೆಟ್ ಕೋಚ್​ನ ಈ ನಡೆಯಿಂದ ಆಘಾತಕ್ಕೊಳಗಾದ ಯುವತಿ ಈ ಘಟನೆಯ ನಂತರ ತರಬೇತಿಗೆ ಬರುವುದನ್ನು ನಿಲ್ಲಿಸಿದ್ದಾರೆ. ತನ್ನ ಹೀನ ಕೃತ್ಯವನ್ನು ಇಲ್ಲಿಗೆ ನಿಲ್ಲಿಸದ ಮನು ಮತ್ತಷ್ಟು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಒಟ್ಟು 6 ಪ್ರಕರಣ ದಾಖಲು

ತರಬೇತಿಗೆಂದು ಬರುತ್ತಿದ್ದ ಯುವತಿಯರನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಮನು, ಯುವತಿಯರ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡು ಅವುಗಳನ್ನು ಮುಂದಿಟ್ಟುಕೊಂಡು ಆ ಯುವತಿಯರ ಮೇಲೆ ನಿರಂತರವಾಗಿ ಲೈಂಗಕ ದೌರ್ಜನ್ಯ ನಡೆಸಿರುವುದಾಗಿ ಸಂತ್ರಸ್ತ ಯುವತಿ ತಿರುವನಂತಪುರಂದ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಒಂದು ದೂರು ದಾಖಲಾದ ಬಳಿಕ ಇದರಿಂದ ಪ್ರೇರಿತರಾದ ಉಳಿದ ಸಂತ್ರಸ್ತೆಯರು ಕೂಡ ದೂರುಗಳನ್ನು ದಾಖಲಿಸಿದ್ದಾರೆ.

ದೂರಿನನ್ವಯ ಆಪಾದಿತ ಕೋಚ್ ಮನುವನ್ನು ತಿರುವನಂತಪುರಂ ಪೊಲೀಸರು ಬಂದಿಸಿದ್ದಾರೆ. ಮನು ವಿರುದ್ಧ ಪ್ರಸ್ತುತ 6 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆ ತಿರುವನಂತಪುರಂ ಪೋಕ್ಸೊ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು

ಬೆಂಗಳೂರು: ಟೆಕ್ಕಿ ಪತ್ನಿ ಹತ್ಯೆಗೈದು ತಾನೂ ನೇಣಿಗೆ ಶರಣಾದ ಇಂಜಿನಿಯರ್; ತಾಯಿಗೆ ಕಳಿಸಿದ್ದ ವಾಯ್ಸ್ ಮೆಸೇಜ್‌ನಲ್ಲಿ ಸ್ಫೋಟಕ ಕಾರಣ ಬಹಿರಂಗ!

ರಾಜ್ಯ ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್: ವೇತನ ಹಿಂಬಾಕಿ ಬಿಡುಗಡೆ

ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣ ಮಾಡದಷ್ಟು ದೊಡ್ಡವರೇ? ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟನೆ! ಸಚಿವ ಸ್ಥಾನದಿಂದ ವಜಾಕ್ಕೆ ಒತ್ತಾಯ

ಸರ್ಕಾರಿ ಜಾಗದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ ಮಸೂದೆ: RSSಗೆ ಕಡಿವಾಣ? ಕಾಂಗ್ರೆಸ್ - ಬಿಜೆಪಿ ನಡುವೆ ವಾಕ್ಸಮರ!