ತಪ್ಪಿದ ಲಿಫ್ಟ್ ದುರಂತ 
ದೇಶ

ತಪ್ಪಿದ ಲಿಫ್ಟ್ ದುರಂತ: ಹೊರಬರುವಾಗ ದಿಢೀರ್ ಚಾಲನೆ, ಕೆಳಗೆ ಬಿದ್ದ ವ್ಯಕ್ತಿ! Video ವೈರಲ್!

ಲಿಫ್ಟ್ ನಲ್ಲಿದ್ದ ವ್ಯಕ್ತಿ ಹೊರಗೆ ಹೆಜ್ಜೆ ಇಟ್ಟ ಕೇವಲ ಒಂದು ಸೆಕೆಂಡಿನ ಅಂತರದಲ್ಲಿ ಈ ಘಟನೆ ನಡೆದಿದ್ದು, ಅವರ ತಲೆ ಲಿಫ್ಟ್ ಬಾಗಿಲಿಗೆ ಹೊಡೆದುಕೊಂಡಿದೆ.

ಅಹ್ಮದಾಬಾದ್: ಗುಜರಾತ್‌ನ ವಲ್ಸಾದ್‌ನಲ್ಲಿ ಹೌಸಿಂಗ್ ಸೊಸೈಟಿಯಲ್ಲಿ ಲಿಫ್ಟ್ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಲಿಫ್ಟ್ ಬಾಗಿಲು ತೆರೆದಿರುವಾಗ ಅದರೊಳಗಿದ್ದ ವ್ಯಕ್ತಿ ಹೊರ ಹೋಗಲು ಯತ್ನಿಸುತ್ತಿದ್ದಾಗ ಲಿಫ್ಟ್ ದಿಢೀರನೇ ಮೇಲಕ್ಕೆ ಹೋಗಿದೆ.

ಆದರೆ ವ್ಯಕ್ತಿ ಕೂಡಲೇ ಹೊರಕ್ಕೆ ಹೋಗಿದ್ದರಿಂದ ಅವರು ಕೆಳಗೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ. ಲಿಫ್ಟ್ ನಲ್ಲಿದ್ದ ವ್ಯಕ್ತಿ ಹೊರಗೆ ಹೆಜ್ಜೆ ಇಟ್ಟ ಕೇವಲ ಒಂದು ಸೆಕೆಂಡಿನ ಅಂತರದಲ್ಲಿ ಈ ಘಟನೆ ನಡೆದಿದ್ದು, ಅವರ ತಲೆ ಲಿಫ್ಟ್ ಬಾಗಿಲಿಗೆ ಹೊಡೆದುಕೊಂಡಿದೆ.

ಬಳಿಕ ಅವರು ನೇರವಾಗಿ ಕೆಳಕ್ಕೆ ಬಿದ್ದು, ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆಯ ಸಂಪೂರ್ಣ ವಿಡಿಯೋ ಲಿಫ್ಟ್ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಅಲ್ಲದೆ ಸೊಸೈಟಿಯ ಲಿಫ್ಟ್ ನಿರ್ವಹಣೆ ಕುರಿತು ವ್ಯಾಪಕ ಟೀಕೆಗಳೂ ವ್ಯಕ್ತವಾಗುತ್ತಿದೆ.

ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಸೊಸೈಟಿ ಆಡಳಿತ ಮಂಡಳಿ ಲಿಫ್ಟ್ ಅನ್ನುದುರಸ್ತಿಗೊಳಿಸಲು ಲಿಫ್ಟ್ ಸೇವೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ

'ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಬಗ್ಗೆ ಭಾರತದ ಮೌನ ಅರ್ಥವೇ ಆಗುತ್ತಿಲ್ಲ; ದೇಶದ ಪರವಾಗಿ ನಿಂತಿದ್ದು ಇದೇ ಟೆಹ್ರಾನ್!'

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ; ನಿಯಮ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲು; ಪರಮೇಶ್ವರ ಎಚ್ಚರಿಕೆ

ಇರಾನ್-ಇಸ್ರೇಲ್ ಸಂಘರ್ಷದ ಎಫೆಕ್ಟ್: LNG ಉತ್ಪಾದನೆ ಸ್ಥಗಿತಗೊಳಿಸಿದ ಕತಾರ್; ಭಾರತಕ್ಕೆ ಪೂರೈಕೆಯಲ್ಲಿ ವ್ಯತ್ಯಯ

ಕಾಶ್ಮೀರ: ಪೂಂಚ್‌ನ ಭಿಂಬರ್ ಗಲಿ ಸೆಕ್ಟರ್‌ನಲ್ಲಿ ಒಳನುಸುಳುವಿಕೆ ಯತ್ನ ವಿಫಲಗೊಳಿಸಿದ ಸೇನೆ

SCROLL FOR NEXT