ಎಂಸಿಡಿ ಕಾರ್ಯಾಚರಣೆ 
ದೇಶ

ಮುಸ್ಲಿಂ ಮಹಿಳೆ ಮೇಲೆ ಹೋಳಿ ಬಿದ್ದಿದ್ದಕ್ಕೆ ಹಿಂದೂ ಯುವಕನ ಕೊಲೆ: ಆರೋಪಿ ಮನೆ ಧ್ವಂಸ, Video!

ಉತ್ತಮ್ ನಗರದಲ್ಲಿ ಹೋಳಿ ಹಬ್ಬದಂದು ಮುಸ್ಲಿಂ ಮಹಿಳೆ ಮೇಲೆ ಹೋಳಿ ಬಿದ್ದಿದ್ದಕ್ಕೆ ಯುವಕನನ್ನು ಥಳಿಸಿ ಕೊಂದ ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನವದೆಹಲಿ: ಉತ್ತಮ್ ನಗರದಲ್ಲಿ ಹೋಳಿ ಹಬ್ಬದಂದು ಮುಸ್ಲಿಂ ಮಹಿಳೆ ಮೇಲೆ ಹೋಳಿ ಬಿದ್ದಿದ್ದಕ್ಕೆ ಯುವಕನನ್ನು ಥಳಿಸಿ ಕೊಂದ ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಆರೋಪಿಗಳ ಮನೆಗೆ ಬೆಂಕಿ ಹಚ್ಚಲಾಗಿತ್ತು. ಇಂದು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಬುಲ್ಡೋಜರ್ ಕಾರ್ಯಾಚರಣೆ ನಡೆಸಿದೆ. ಆರೋಪಿ ನಿಜಾಮುದ್ದೀನ್ ಗೆ ಸೇರಿದ ಆಸ್ತಿಯನ್ನು ಎಂಸಿಡಿ ಕೆಡವಿದೆ. ಮನೆ ಧ್ವಂಸಗೊಳಿಸುತ್ತಿರುವ ವಿಡಿಯೋ ಹೊರಬಿದ್ದಿದೆ.

ಬುಧವಾರ ರಾತ್ರಿ ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಎಂದು ಡಿಸಿಪಿ ಕುಶಾಲ್ ಪಾಲ್ ಸಿಂಗ್ ಹೇಳಿದ್ದಾರೆ. ಮುಸ್ಲಿಂ ಮಹಿಳೆ ಮೇಲೆ ಹೋಳಿ ತುಂಬಿದ್ದ ನೀರಿನ ಬಲೂನ್ ಬಿದ್ದ ಕಾರಣ ಜಗಳ ಪ್ರಾರಂಭವಾಗಿ ಅದು ಗಂಭೀರ ಹಲ್ಲೆಗೆ ಕಾರಣವಾಯಿತು ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ನಿಜಾಮುದ್ದೀನ್ ತಂಡದೊಂದಿಗೆ ತರುಣ್ ಮನೆಗೆ ನುಗ್ಗಿ ಭೀಕರವಾಗಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ತರುಣ್ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರು.

ತನಿಖೆಯ ಸಮಯದಲ್ಲಿ, ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಐದು ಆರೋಪಿಗಳನ್ನು ಬಂಧಿಸಿದರು. ನಂತರ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇನ್ನಿಬ್ಬರನ್ನು ಗುರುತಿಸಿ ಬಂಧಿಸಲಾಯಿತು. ಬಂಧಿತ ಆರೋಪಿಗಳಲ್ಲಿ ಉಮರುದ್ದೀನ್, ಆತನ ಸಹೋದರ ಕಮ್ರುದ್ದೀನ್ ಮತ್ತು ಮಗ ಮುಜಾಫರ್ ಒಂದೇ ಕುಟುಂಬದವರು. ಶುಕ್ರವಾರ, ಕೋಪಗೊಂಡ ಜನರು ಪ್ರತಿಭಟನೆ ವೇಳೆ ಆರೋಪಿಗಳ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಸ್ಥಳೀಯ ಪೊಲೀಸರು, ಕ್ಷಿಪ್ರ ಕಾರ್ಯ ಪಡೆ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.

ಆರೋಪಿ ಕುಟುಂಬದ ಆಸ್ತಿಯ ಮೇಲೆ ಬುಲ್ಡೋಜರ್ ಬಳಸಿ ದಾಳಿ ನಡೆಸಿರುವುದನ್ನು ಬಿಜೆಪಿ ಸ್ವಾಗತಿಸಿದೆ. ಉತ್ತಮ್ ನಗರದಲ್ಲಿ ನಡೆದ ದಾಳಿಯನ್ನು ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ತೀವ್ರವಾಗಿ ಖಂಡಿಸಿದ್ದಾರೆ. ಹಿಂಸಾಚಾರದ ಆರೋಪ ಹೊತ್ತಿರುವ ಕುಟುಂಬದ ಅಕ್ರಮವಾಗಿ ನಿರ್ಮಿಸಲಾದ ಮನೆಯನ್ನು ದೆಹಲಿ ಪೊಲೀಸರು ಮತ್ತು ಎಂಸಿಡಿ ಕೆಡವಿರುವುದನ್ನು ಸ್ವಾಗತಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಪ್ರಧಾನಿ ಮೋದಿ ಇಸ್ರೇಲ್ ಮತ್ತು ಇರಾನ್‌ಗೆ ಒಂದು ಫೋನ್ ಕರೆ ಮಾಡಿದ್ರೆ ಯುದ್ಧ ನಿಲ್ಲುತ್ತದೆ': UAE ರಾಯಭಾರಿ ಹುಸೇನ್ ಹಸನ್ ಮಿರ್ಜಾ

ಇರಾನ್ ಶಾಲೆ ಸ್ಪೋಟದಲ್ಲಿ 165 ವಿದ್ಯಾರ್ಥಿನಿಯರನ್ನು ಕೊಂದದ್ದು ಅಮೆರಿಕ! ತನಿಖೆ ವೇಳೆ ಬಹಿರಂಗ

ಇರಾನ್ ಯುದ್ಧ: ಚಿನ್ನದ ಮಾರುಕಟ್ಟೆ ಮೌಲ್ಯ ಭರ್ಜರಿ ಏರಿಕೆ; ಭಾರತ, ಯುಕೆ ಒಟ್ಟು ಜಿಡಿಪಿಯನ್ನೂ ಮೀರಿಸುವ ದೊಡ್ಡ ಆರ್ಥಿಕತೆ!

ಪೋಕ್ಸೋ ಪ್ರಕರಣ: ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಬಂಧನ ಭೀತಿ

CEC ಜ್ಞಾನೇಶ್ ಕುಮಾರ್ ಪದಚ್ಯುತಿಗೆ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಸಜ್ಜು

SCROLL FOR NEXT