ಮೊನಾಲಿಸಾ ಮತ್ತು ಫರ್ಮಾನ್ ಖಾನ್ 
ದೇಶ

ಕೇರಳದಲ್ಲೇ ನೆಲೆಸುತ್ತೇವೆ- ಮೊನಲಿಸಾ: ಈ ಮದುವೆಗೆ ನಮ್ಮ ಒಪ್ಪಿಗೆ ಇಲ್ಲವೇ ಇಲ್ಲ- ಫರ್ಮಾನ್ ಖಾನ್ ತಂದೆ ಖಡಕ್ ಮಾತು!

ಉತ್ತರ ಭಾರತದ ಈ ಜೋಡಿ ಕೇರಳದಲ್ಲಿ ಮದುವೆ ಆಗಿರುವುದು ಮತ್ತೊಂದು ವಿಶೇಷ. ಈಗಾಗಲೇ ಗೊತ್ತಿರುವಂತೆ ಈ ಮದುವೆಗೆ ಮೊನಾಲಿಸಾ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಂಭಮೇಳದ ಹುಡುಗಿ ಮೊನಾಲಿಸಾ ಭೋಂಸ್ಲೆ ಅನ್ಯ ಧರ್ಮದ ವ್ಯಕ್ತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ. ಮುಸ್ಲಿಂ ಸಮುದಾಯದ ಫರ್ಮಾನ್‌ ಖಾನ್‌ ಜೊತೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ ಮೊನಾಲಿಸಾ.

ಉತ್ತರ ಭಾರತದ ಈ ಜೋಡಿ ಕೇರಳದಲ್ಲಿ ಮದುವೆ ಆಗಿರುವುದು ಮತ್ತೊಂದು ವಿಶೇಷ. ಈಗಾಗಲೇ ಗೊತ್ತಿರುವಂತೆ ಈ ಮದುವೆಗೆ ಮೊನಾಲಿಸಾ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅದು ಪೊಲಿಸ್‌ ಠಾಣೆವರೆಗೂ ಹೋಗಿದೆ. ಈ ನಡುವೆ ಫರ್ಮಾನ್‌ ಖಾನ್‌ ತಂದೆಯಿಂದಲೂ ಈ ಅಂತಧರ್ಮೀಯ ಮದುವೆಗೆ ವಿರೋಧ ವ್ಯಕ್ತವಾಗಿದೆ.

ಫರ್ಮಾನ್‌ ಖಾನ್‌ ಮೂಲತಃ ಉತ್ತರ ಪ್ರದೇಶದ ಬಾಗ್‌ಪತ್ ನಿವಾಸಿ. ಇದೀಗ ಈ ಅಂತರ್ಧರ್ಮೀಯ ವಿವಾಹಕ್ಕೆ ವರನ ಕುಟುಂಬವು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದು, "ಈ ಮದುವೆಯ ಬಗ್ಗೆ ನಮಗೆ ತಿಳಿದಿರಲಿಲ್ಲ, ಈ ಮದುವೆಗೆ ನಮ್ಮ ಒಪ್ಪಿಗೆಯಿಲ್ಲ" ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಫರ್ಮಾನ್‌ ತಂದೆ ಜಫರ್ ಅಲಿ, "ಮೊನಾಲಿಸಾ ಬೇರೆ ಧರ್ಮಕ್ಕೆ ಸೇರಿದವರು. ಆದ್ದರಿಂದ ತಮಗೆ ಈ ಮದುವೆ ಇಷ್ಟವಿಲ್ಲ" ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದಾರೆ.

ಫರ್ಮಾನ್ ಅಪರೂಪಕ್ಕೊಮ್ಮೆ ಹಳ್ಳಿಗೆ ಬರುತ್ತಿದ್ದ. ಆದರೆ ಅವರು ಮದುವೆ ಆಗುತ್ತಿರುವ ಬಗ್ಗೆ ನಮಗೆ ಎಂದಿಗೂ ತಿಳಿಸಿರಲಿಲ್ಲ. ಇದು ಅವನ ಮೊದಲ ತಪ್ಪು, ನಾವು ಈ ಮದುವೆಯನ್ನು ಒಪ್ಪುವುದಿಲ್ಲ" ಎಂದು ಜಫರ್‌ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ. "ಈ ಮದುವೆ ಕುರಿತು ಮಾಧ್ಯಮಗಳ ಮೂಲಕವೇ ನಮಗೆ ತಿಳಿಯಿತು. ಮೊನಾಲಿಸಾ ಅವರು ಫರ್ಮಾನ್ ಜೊತೆ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಅಂತ ನಮಗೆ ತಿಳಿದಿತ್ತು. ಆದರೆ ಅವರು ಮದುವೆಯಾಗುತ್ತಾರೆಂದು ತಿಳಿದಿರಲಿಲ್ಲ. ಅವರು ಮಾಡಿದ್ದು ಸರಿಯಲ್ಲ" ಎಂದು ಫರ್ಮಾನ್ ಅವರ ಸಹೋದರ ಶಮದ್ ಹೇಳಿದ್ದಾರೆ.

ಇನ್ನೂ ವಿವಾಹವಾದ ನಂತರ ಮಾತನಾಡಿದ ಮೊನಾಲಿಸಾ ಭೋಸ್ಲೆ, ತಾನು ಮತ್ತು ತಿರುವನಂತಪುರಂನಲ್ಲಿ ಪೊಲೀಸ್ ರಕ್ಷಣೆಯಲ್ಲಿ ವಿವಾಹವಾದ ತನ್ನ ಪತಿ ಮೊಹಮ್ಮದ್ ಫರ್ಮಾನ್ ಕೇರಳದಲ್ಲಿ ನೆಲೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಧಾರ್ಮಿಕ ಮತಾಂತರದ ಯಾವುದೇ ಅವಕಾಶವನ್ನೂ ಅವರು ತಳ್ಳಿಹಾಕಿದರು. ಗುರುವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮೊನಾಲಿಸಾ, ತನ್ನ ವಿವಾಹದ ವಿವಾದವನ್ನು ತಳ್ಳಿಹಾಕಿ, ತನಗೆ 18 ವರ್ಷ ವಯಸ್ಸಾಗಿದ್ದು, ತನ್ನ ಇಚ್ಛೆಯಂತೆ ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಹೇಳಿದರು.

ಪೂವಾರ್ ಗ್ರಾಮ ಪಂಚಾಯತ್‌ನ ಸ್ಥಳೀಯ ವಿವಾಹ ನೋಂದಣಿದಾರರೊಂದಿಗೆ ನೋಂದಾಯಿಸಲಾದ ವಿವಾಹ ದಾಖಲೆಯಲ್ಲಿ ಅವರ ಜನ್ಮ ದಿನಾಂಕ ಜನವರಿ 1, 2008 ಎಂದು ತೋರಿಸಲಾಗಿದೆ. ಪೂವಾರ್‌ನ ಅರುಮನೂರ್ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿವಾಹ ನಡೆದ ನಂತರ ದಂಪತಿಗಳು ವಿವಾಹ ಪ್ರಮಾಣಪತ್ರವನ್ನು ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ಹನೂರು ಶೂಟೌಟ್ ಪ್ರಕರಣ: ನಮ್ಮ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸಬೇಡಿ, ನಿಮ್ಮ ಕೆಲಸ ನೋಡ್ಕೊಳ್ಳಿ; ತಮಿಳುನಾಡಿಗೆ ಸಿಎಂ ಡಿಕೆಶಿ ವಾರ್ನಿಂಗ್!

ಇಂಥ ಅಸಹ್ಯಕ್ಕೂ ನಿಮ್ಮ ಬಳಿ ಸಮರ್ಥನೆಯಿದೆಯೇ? ಧ್ವಜಾರೋಹಣದ ಜೊತೆ ನಿಮ್ಮ ಘನತೆ ಗಾಳಿಗೆ ಹಾರಿ ಹೋಗಲಿಲ್ಲವೇ?

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?