ನಂದಾ ದೇವಿ ಹಡಗು 
ದೇಶ

ಹಾರ್ಮುಜ್ ಮೂಲಕ ಗುಜರಾತ್ ತಲುಪಿದ LPG ಹೊತ್ತ ಮತ್ತೊಂದು ಹಡಗು 'ನಂದಾ ದೇವಿ'; Video

ಮೊದಲ ಹಡಗು 'ಶಿವಾಲಿಕ್' ಸೋಮವಾರ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿತು. ಇಂದು 'ನಂದಾ ದೇವಿ' ದೇವಭೂಮಿ ದ್ವಾರಕಾ ಜಿಲ್ಲೆಯ ವಾಡಿನಾರ್ ಬಂದರಿಗೆ ಆಗಮಿಸಿದೆ.

ಗಾಂಧಿನಗರ: ಮಧ್ಯ ಪ್ರಾಚ್ಯ ಸಂಘರ್ಷದ ನಡುವೆ ಭಾರತಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಭಾರತದ ಎರಡನೇ ಎಲ್‌ಪಿಜಿ ವಾಹಕ, ಸುಮಾರು 46,500 ಮೆಟ್ರಿಕ್ ಟನ್ ಎಲ್‌ಪಿಜಿ(LPG) ಹೊತ್ತ 'ನಂದಾ ದೇವಿ' ಹಡಗು ಮಂಗಳವಾರ ಗುಜರಾತ್‌ನ ವಾಡಿನಾರ್ ಬಂದರಿಗೆ ಸುರಕ್ಷಿತವಾಗಿ ಆಗಮಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲ ಹಡಗು 'ಶಿವಾಲಿಕ್' ಸೋಮವಾರ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿತು. ಇಂದು 'ನಂದಾ ದೇವಿ' ದೇವಭೂಮಿ ದ್ವಾರಕಾ ಜಿಲ್ಲೆಯ ವಾಡಿನಾರ್ ಬಂದರಿಗೆ ಆಗಮಿಸಿದ್ದು, ಎಲ್‌ಪಿಜಿ(ದ್ರವೀಕೃತ ಪೆಟ್ರೋಲಿಯಂ ಅನಿಲ) ವನ್ನು ಮತ್ತೊಂದು ಸಣ್ಣ ಹಡಗಿಗೆ ವರ್ಗಾಯಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ದೀನ್‌ದಯಾಳ್ ಬಂದರು ಪ್ರಾಧಿಕಾರದ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.

"46,500 ಮೆಟ್ರಿಕ್ ಟನ್ ಎಲ್‌ಪಿಜಿ ಸರಕನ್ನು ಇದರಲ್ಲಿ ತರಲಾಗಿದೆ. ಈ ಸರಕನ್ನು ಬಿಡಬ್ಲ್ಯೂ ಬಿರ್ಚ್ ಎಂಬ ಹಡಗಿಗೆ ವರ್ಗಾಯಿಸಲಾಗುವುದು. ನಂತರ ಅದು ಪೂರ್ವ ಕರಾವಳಿಯ ಎನ್ನೋರ್(ತಮಿಳುನಾಡು) ಮತ್ತು ಹಲ್ಡಿಯಾ(ಪಶ್ಚಿಮ ಬಂಗಾಳ) ಬಂದರುಗಳಿಗೆ ತಲುಪಿಸುತ್ತದೆ" ಎಂದು ಅವರು ಹೇಳಿದರು.

"ಇದು ವಡಿನಾರ್‌ನಲ್ಲಿ ನಾವು ನಿರಂತರವಾಗಿ ನಡೆಸುತ್ತಿರುವ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನವಾಗಿದೆ. ಆದಾಗ್ಯೂ, ಸಚಿವಾಲಯ ಹೊರಡಿಸಿರುವ ಪ್ರಸ್ತುತ ನಿರ್ದೇಶನವು ಒಳಬರುವ ಎಲ್‌ಪಿಜಿ ಹಡಗುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್: ನಾಳೆ ವಿಜಯ್ ಪ್ರಮಾಣವಚನ ಡೌಟ್; ಮತ್ತೆ ಸಂಖ್ಯಾಬಲ ಇಲ್ಲ ಎಂದ ಗವರ್ನರ್!

Google Trends ನಲ್ಲಿಯೂ ವಿಜಯ್- TVK ಅರ್ಭಟ! ಮತಗಳು, ಗೆಲುವಿನ ಬಗ್ಗೆ ಹೆಚ್ಚಿನ ಹುಡುಕಾಟ

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!

ಹೌದು 2025 ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ವಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ 1 ವರ್ಷದ ಬಳಿಕ ಚೀನಾ ಒಪ್ಪಿಗೆ!

ಕಾಂಗ್ರೆಸ್‌ನ್ನು ಕಿತ್ತು ಹಾಕದೇ ಯುವಕರಿಗೆ ಉದ್ಯೋಗವಿಲ್ಲ! ನಿಖಿಲ್ ಕುಮಾರಸ್ವಾಮಿ ಕಿಡಿ

SCROLL FOR NEXT