ಅತ್ಯಾಚಾರ ಸಂತ್ರಸ್ಥೆಗೆ ಪೊಲೀಸಪ್ಪನ ಲೈಂಗಿಕ ದೌರ್ಜನ್ಯ (ಸಾಂದರ್ಭಿಕ ಚಿತ್ರ) 
ದೇಶ

'ನಾವು ಒಂದೇ ಧರ್ಮದವರು.. ನನ್ ಜೊತೆ Se* ಮಾಡು.. ನಿನ್ ಕೇಸ್ ತಗೋತೀನಿ': ಅತ್ಯಾಚಾರ ಸಂತ್ರಸ್ಥೆಗೆ ಪೊಲೀಸಪ್ಪ ಡಿಮ್ಯಾಂಡ್!

ಉತ್ತರ ಪ್ರದೇಶದ ಅಲಿಗಢದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ 25 ವರ್ಷದ ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟ ಧಾರುಣ ಘಟನೆ ನಡೆದಿದೆ.

ಅಲಿಗಢ: ಅತ್ಯಾಚಾರ ದೂರು ನೀಡಲು ಬಂದ ಸಂತ್ರಸ್ಥೆಯನ್ನೇ ಪೊಲೀಸ್ ಪೇದೆಯೋರ್ವ ಲೈಂಗಿಕ ದೌರ್ಜನ್ಯಕ್ಕೆ ಬಳಕೆ ಮಾಡಿಕೊಂಡ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಲಿಗಢದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ 25 ವರ್ಷದ ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಬೇಡಿಕೆ ಇಟ್ಟ ಧಾರುಣ ಘಟನೆ ನಡೆದಿದೆ.

ಅವನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆ ಮಾತ್ರ ಆಕೆಯ ದೂರಿನ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂತ್ರಸ್ಥೆಗೆ ಹೇಳಿದ್ದಾನೆ.

ಇದೀಗ ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪೊಲೀಸ್ ಪೇದೆ ಇಮ್ರಾನ್ ಖಾನ್ ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಮಾತ್ರವಲ್ಲದೇ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಗಿದ್ದೇನು?

ಅಲಿಗಢದ ಕ್ವಾರ್ಸಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಶುಕ್ರವಾರ ಠಾಣೆಗೆ 25 ವರ್ಷದ ಮುಸ್ಲಿಂ ಯುವತಿಯೊಬ್ಬರು ಅತ್ಯಾಚಾರದ ದೂರು ನೀಡಲು ಬಂದಿದ್ದರು. ಈ ವೇಳೆ ಠಾಣೆಯಲ್ಲಿದ್ದ ಕಾನ್‌ಸ್ಟೆಬಲ್ ಇಮ್ರಾನ್ ಖಾನ್ ಆಕೆಯನ್ನು ಮಾತನಾಡಿಸುತ್ತಾ ಆಕೆಯ ವಿವರ ಶೇಖರಿಸಿದ್ದಾನೆ. ಬಳಿಕ ಆಕೆಯನ್ನು ಮನೆಗೆ ಕಳುಹಿಸಿಕೊಟ್ಟು ಬಳಿಕ ಮೊಬೈಲ್ ಕರೆ ಮಾಡಿದ್ದಾನೆ.

'ನಾವು ಒಂದೇ ಧರ್ಮದವರು..' 'ನನ್ ಜೊತೆ Se* ಮಾಡು..'

ಸಂತ್ರಸ್ಥ ಯುವತಿ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ, 'ನೀನು ನನ್ನ ಜೊತೆ ಸೆಕ್ಸ್ ಮಾಡಿದರೆ ನಾನು ನಿನ್ನ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುತ್ತೇನೆ ಎಂದು ಹೇಳಿದ್ದಾನೆ.

ಮಾತ್ರವಲ್ಲದೇ 'ನೀನು ಈಗಲೇ ನಿನ್ನ ಸೆಕ್ಸಿ ಫೋಟೋ ಕಳುಹಿಸಿದರೆ, ನಾನು ನಿನಗೆ ಈದ್‌ಗೆ ಬಟ್ಟೆ ತರಿಸುತ್ತೇನೆ... ನನ್ನೊಂದಿಗೆ ಹೋಟೆಲ್‌ಗೆ ಬಾ. ನಾವು ಒಂದೇ ಧರ್ಮದವರು. ನಾನು ಅವನನ್ನು ಜೈಲಿಗೆ ಕಳುಹಿಸುತ್ತೇನೆ ಮತ್ತು ಅವನ ವಿರುದ್ಧ ಪ್ರಕರಣ ದಾಖಲಿಸುತ್ತೇನೆ; ಪ್ರತಿಯಾಗಿ, ನೀನು ನನ್ನೊಂದಿಗೆ ಮಲಗಬೇಕಾಗುತ್ತದೆ" ಎಂದು ಕಾನ್‌ಸ್ಟೆಬಲ್ ಅವಳಿಗೆ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.

ಮಾತ್ರವಲ್ಲದೇ ಈ ಫೋನ್ ಸಂಭಾಷಣೆಗಳನ್ನು ಸಂತ್ರಸ್ಥೆ ರೆಕಾರ್ಡ್ ಮಾಡಿಕೊಂಡಿದ್ದು ಇದನ್ನೇ ಆಧಾರವಾಗಿಟ್ಟು ದೂರು ನೀಡಿದ್ದಾರೆ.

ಸಿಎಂ ಯೋಗಿ ಆದಿತ್ಯಾನಾಥ್ ಗೆ ದೂರು

ಇದೇ ರೆಕಾರ್ಡ್ ಮುಂದಿಟ್ಟುಕೊಂಡು ಸಂತ್ರಸ್ಥೆ ಸಿಎಂ ಯೋಗಿ ಆದಿತ್ಯಾನಾಥ್ ಗೆ ದೂರು ನೀಡಿದ್ದಾರೆ. ಸಿಎಂ ಅವರ ಸಮಗ್ರ ದೂರು ನಿವಾರಣಾ ವ್ಯವಸ್ಥೆ (ಐಜಿಆರ್‌ಎಸ್) ಪೋರ್ಟಲ್ ಮೂಲಕ ಕ್ರಮ ಕೈಗೊಳ್ಳುವಂತೆ ಸಂತ್ರಸ್ಥೆ ದೂರು ಸಲ್ಲಿಸಿದ್ದಾರೆ.

ತನ್ನ ದೂರಿನ ಮೇರೆಗೆ ಕ್ರಮ ಕೈಗೊಳ್ಳುವ ಬದಲು, ಕಾನ್‌ಸ್ಟೆಬಲ್ ತನಗೆ ಕರೆ ಮಾಡಿ, ವಿವರಗಳನ್ನು ಸಂಗ್ರಹಿಸಿ, ನಂತರ ಪಠ್ಯ ಸಂದೇಶಗಳು ಮತ್ತು ಫೋನ್ ಕರೆಗಳ ಮೂಲಕ ಲೈಂಗಿಕ ಅನುಕೂಲಕ್ಕಾಗಿ ಒತ್ತಡ ಹೇರಲು ಪ್ರಾರಂಭಿಸಿದರು ಎಂದು ಅವರು ಆರೋಪಿಸಿದ್ದಾರೆ.

ಪೊಲೀಸಪ್ಪನ ವಿರುದ್ಧವೇ ಕೇಸ್ ದಾಖಲು

ಸಂತ್ರಸ್ಥೆ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಆಕೆಯ ದೂರಿನ ನಂತರ, ಎಸ್‌ಎಸ್‌ಪಿ ನೀರಜ್ ಕುಮಾರ್ ಜದೌನ್ ಕಾನ್‌ಸ್ಟೆಬಲ್‌ ಇಮ್ರಾನ್ ಖಾನ್ ನನ್ನು ಅಮಾನತುಗೊಳಿಸುವಂತೆ ಆದೇಶಿಸಿದರು.

ಬುಧವಾರ ಎಫ್‌ಐಆರ್ ದಾಖಲಿಸಲು ನಿರ್ದೇಶಿಸಿದರು. ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಸಂಬಂಧಿತ ಬಿಎನ್‌ಎಸ್ ವಿಭಾಗಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಡಿಎಸ್‌ಪಿ ಸರ್ವಂ ಸಿಂಗ್ ಮಾತನಾಡಿ, “ಮಹಿಳೆ ಎಸ್‌ಎಸ್‌ಪಿ ಮುಂದೆ ಹಾಜರಾದರು, ನಂತರ ನನಗೆ ವಿಚಾರಣೆ ವಹಿಸಲಾಯಿತು. ವರದಿಯನ್ನು ಸಲ್ಲಿಸಲಾಯಿತು ಮತ್ತು ಎಸ್‌ಎಸ್‌ಪಿ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ CJP ಸಜ್ಜು; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ