ಮಲ್ಲಿಕಾರ್ಜುನ ಖರ್ಗೆ 
ದೇಶ

ಅಸ್ಸಾಂ ಚುನಾವಣೆಗೂ 'ಐದು ಗ್ಯಾರಂಟಿ' ಘೋಷಿಸಿದ ಕಾಂಗ್ರೆಸ್!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ತಮ್ಮ ಪಕ್ಷದ "ಐದು ಗ್ಯಾರಂಟಿಗಳನ್ನು" ಘೋಷಿಸಿದರು. ಇದರಲ್ಲಿ ಮಹಿಳೆಯರ ಕಲ್ಯಾಣ, ಎಲ್ಲರಿಗೂ ಆರೋಗ್ಯ ರಕ್ಷಣೆ, ಭೂ ಹಕ್ಕು ಮತ್ತು ನ್ಯಾಯದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ನೌಬೋಯಿಚಾ: ಕರ್ನಾಟಕದ ನಂತರ ಕಾಂಗ್ರೆಸ್ ಇದೀಗ ಅಸ್ಸಾಂ ಚುನಾವಣೆಗೂ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಮಹಿಳೆಯರಿಗೆ ಮಾಸಿಕ ನಗದು ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದೆ.

ಅಸ್ಸಾಂ ಲಖಿಂಪುರ ಜಿಲ್ಲೆಯ ನೌಬೋಯಿಚಾದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ತಮ್ಮ ಪಕ್ಷದ "ಐದು ಗ್ಯಾರಂಟಿಗಳನ್ನು" ಘೋಷಿಸಿದರು. ಇದರಲ್ಲಿ ಮಹಿಳೆಯರ ಕಲ್ಯಾಣ, ಎಲ್ಲರಿಗೂ ಆರೋಗ್ಯ ರಕ್ಷಣೆ, ಭೂ ಹಕ್ಕು ಮತ್ತು ನ್ಯಾಯದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಅಸ್ಸಾಂ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಮತ್ತು ಅದರ ನಾಯಕರು ಹಾಗೂ ಅವರ ಕುಟುಂಬಗಳ "ಖಜಾನೆ ತುಂಬುವ" ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮಹಿಳೆಯರಿಗೆ ಮಾಸಿಕ ನಗದು ವರ್ಗಾವಣೆ ಮತ್ತು ವ್ಯವಹಾರ ಆರಂಭಿಸಲು ಅಥವಾ ವಿಸ್ತರಿಸಲು ಇಚ್ಛಿಸುವ ಮಹಿಳೆಯರಿಗೆ ಹೆಚ್ಚುವರಿ 50,000 ರೂ. ಸಹಾಯ ಸೇರಿದಂತೆ ಪಕ್ಷದ 'ಐದು ಗ್ಯಾರಂಟಿಗಳನ್ನು' ಬಿಡುಗಡೆ ಮಾಡಿದರು. "ನಮ್ಮ ನಗದು ವರ್ಗಾವಣೆ ಬೇಷರತ್ತಾಗಿರುತ್ತದೆ. ಬಿಜೆಪಿ ಸರ್ಕಾರ ಮಾಡುವಂತೆ, ಮಹಿಳೆಯರು ತಮ್ಮ ಪಕ್ಷದ ಸದಸ್ಯರಾಗಬೇಕು ಎಂಬ ಷರತ್ತು ಇರುವುದಿಲ್ಲ" ಎಂದು ಅವರು ಹೇಳಿದರು.

ರಾಜ್ಯದ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ನಗದು ರಹಿತ ಆರೋಗ್ಯ ವಿಮೆ, 10 ಲಕ್ಷ ಸ್ಥಳೀಯ ಜನರಿಗೆ ಶಾಶ್ವತ ಭೂ ಪಟ್ಟಾ ಮತ್ತು ರಾಜ್ಯದ ಹಿರಿಯ ನಾಗರಿಕರಿಗೆ ತಿಂಗಳಿಗೆ 1,250 ರೂ. ನೀಡುವುದಾಗಿ ಖರ್ಗೆ ಭರವಸೆ ನೀಡಿದರು.

"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 100 ದಿನಗಳಲ್ಲಿ ಜುಬೀನ್ ಗರ್ಗ್ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಿ, ನ್ಯಾಯ ಒದಗಿಸುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ" ಎಂದು ಖರ್ಗೆ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!