ಸಾಂದರ್ಭಿಕ ಚಿತ್ರ 
ದೇಶ

ಜಾರ್ಖಂಡ್‌: ರಾಮನವಮಿ ಮೆರವಣಿಗೆ ವೇಳೆ ಹರಿದ ನೆತ್ತರು; ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಹತ್ಯೆ

ಮೃತರನ್ನು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿಲ್ವಾರ್ ಗ್ರಾಮದ ನಿವಾಸಿ ಪ್ರಿನ್ಸ್ ಕುಮಾರ್(21) ಮತ್ತು ಬಡಾ ಬಜಾರ್ ಗ್ವಾಲ್ಟೋಲಿಯ ಅಭಿಷೇಕ್ ಕುಮಾರ್(21) ಎಂದು ಗುರುತಿಸಲಾಗಿದೆ.

ಹಜಾರಿಬಾಗ್: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆ ವೇಳೆ ನೆತ್ತರು ಹರಿದಿದ್ದು, ಮಾರಕಾಸ್ತ್ರಗಳಿಂದ ಇಬ್ಬರನ್ನು ಕೊಚ್ಚಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಟೌನ್ ಪೊಲೀಸ್ ಠಾಣೆ ಪ್ರದೇಶದ ಝಂಡಾ ಚೌಕ್‌ನಲ್ಲಿ ಎರಡು ರಾಮನವಮಿ ಮೆರವಣಿಗೆಗಳ ಸಂದರ್ಭದಲ್ಲಿ ಈ ಜೋಡಿ ಕೊಲೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಮೃತರನ್ನು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿಲ್ವಾರ್ ಗ್ರಾಮದ ನಿವಾಸಿ ಪ್ರಿನ್ಸ್ ಕುಮಾರ್(21) ಮತ್ತು ಬಡಾ ಬಜಾರ್ ಗ್ವಾಲ್ಟೋಲಿಯ ಅಭಿಷೇಕ್ ಕುಮಾರ್(21) ಎಂದು ಗುರುತಿಸಲಾಗಿದೆ.

"ಶನಿವಾರ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಅಭಿಷೇಕ್ ಕುಮಾರ್ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಕೊಚ್ಚಿ ಕೊಂದಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (SBMCH) ಕರೆದೊಯ್ಯಲಾಯಿತು. ಆದರೆ ವೈದ್ಯರು, ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು" ಎಂದು ಸದರ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಅಮಿತ್ ಆನಂದ್ ಅವರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು SDPO ಹೇಳಿದ್ದಾರೆ.

ಪ್ರಿನ್ಸ್ ಕುಮಾರ್ ಮೇಲೆಯೂ ಇದೇ ರೀತಿಯ ದಾಳಿ ನಡೆಸಲಾಗಿದ್ದು, ಅವರನ್ನು SBMCH ಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟರು ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ಚುನಾವಣೆ: DMK ಪ್ರಣಾಳಿಕೆ ಬಿಡುಗಡೆ; ಮಹಿಳೆಯರಿಗೆ 2,000 ರೂ ಸೇರಿ ಭರಪೂರ ಉಚಿತ ಗ್ಯಾರಂಟಿಗಳ ಘೋಷಣೆ!

ಇದು ಹೊಸ ಕೋಳಿ: ಕಾಮೆಂಟರಿ ವೇಳೆ ಅಶ್ವಿನ್ ಕಾಲೆಳೆದ ವೀರೇಂದ್ರ ಸೆಹ್ವಾಗ್, Video

ಸೌದಿ ವಾಯುನೆಲೆ ಮೇಲೆ ಕ್ಷಿಪಣಿ, ಡ್ರೋನ್ ದಾಳಿ: ಅಮೆರಿಕದ AWACS ವಿಮಾನ ಹೊಡೆದುರುಳಿಸಿದ್ದೇವೆ ಎಂದ ಇರಾನ್!

ಬಿಜೆಪಿ ಅಧಿಕಾರಕ್ಕೆ ಬಂದರೆ ಮೊಟ್ಟೆ, ಮೀನು, ಮಾಂಸ ತಿನ್ನಲು ಬಿಡಲ್ಲ: ಮಮತಾ ಬ್ಯಾನರ್ಜಿ

ಬೆಂಗಳೂರು: ಸ್ನೇಹಿತೆ ಜೊತೆ ಸೆಕ್ಸ್ ಮಾಡುವಂತೆ ಪತ್ನಿ ಒತ್ತಾಯ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!

SCROLL FOR NEXT