ನಟ ವಿಜಯ್ 
ದೇಶ

ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ TVK: ಹೇಗಿರಲಿದೆ ನಟ ವಿಜಯ್ ಸಚಿವ ಸಂಪುಟ? ಯಾವ ನಾಯಕರು ಇರಬಹುದು?

ನಟ ವಿಜಯ್ ತಮಿಳುನಾಡು ಸಿಎಂ ಆಗಲು ಇನ್ನೊಂದೇ ಹೆಜ್ಜೆ ಬಾಕಿ ಇದ್ದು 10 ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆ ಶತಃ ಸಿದ್ಧ ಎನ್ನಲಾಗಿದೆ.

ಚೆನ್ನೈ: ಚಿತ್ರರಂಗ ಬಿಟ್ಟು ರಾಜಕೀಯಕ್ಕೆ ಧುಮುಕಿ ಮೊದಲ ಚುನಾವಣೆಯಲ್ಲೇ ಭರ್ಜರಿ ಫಲಿತಾಂಶ ನೀಡಿರುವ ನಟ ವಿಜಯ್ ತಮಿಳುನಾಡು ರಾಜಕೀಯ ಚಿತ್ರಣವನ್ನೇ ಬದಲಿಸಿದ್ದು, ಇದೀಗ ಅವರ ನೂತನ ಸಚಿವ ಸಂಪುಟ ಹೇಗಿರಲಿದೆ ಎಂಬುದೇ ಎಲ್ಲರ ಕುತೂಹಲವಾಗಿದೆ.

ತಮಿಳುನಾಡು ರಾಜಕೀಯಕ್ಕೆ ಸಿನಿಮಾ ಸ್ಟೈಲ್ ನಲ್ಲಿ ಭರ್ಜರಿಯಾಗಿಯೇ ಎಂಟ್ರಿಕೊಟ್ಟಿರುವ ನಟ ವಿಜಯ್, ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಅತಿದೊಡ್ಡ ಪಕ್ಷವಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ನಟ ವಿಜಯ್ ತಮಿಳುನಾಡು ಸಿಎಂ ಆಗಲು ಇನ್ನೊಂದೇ ಹೆಜ್ಜೆ ಬಾಕಿ ಇದ್ದು 10 ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆ ಶತಃ ಸಿದ್ಧ ಎನ್ನಲಾಗಿದೆ.

ಈ ನಡುವೆ ನಟ ವಿಜಯ್ ರಾಜಕೀಯಕ್ಕೆ ಹೊಸಬರು.. ಅವರ ಪಕ್ಷಕ್ಕೂ ಇದೂ ಮೊದಲ ಸರ್ಕಾರವಾಗಿದ್ದು, ಹೀಗಾಗಿ ಅವರ ಮೊಟ್ಟ ಮೊದಲ ಸಂಪುಟ ಹೇಗಿರಲಿದೆ ಎಂಬುದು ಅವರ ಅಭಿಮಾನಿಗಳು ಮಾತ್ರವಲ್ಲದೇ ಇಡೀ ತಮಿಳುನಾಡು ಜನತೆ ಕಾಯುತ್ತಿದ್ದಾರೆ.

ಪ್ರಮುಖವಾಗಿ ಈ ಬಾರಿ ನಟ ವಿಜಯ್ ಅವರ ಕೈ ಹಿಡಿದಿದ್ದು ತಮಿಳುನಾಡಿನ ಯುವ ಜನತೆ. ತಮಿಳುನಾಡಿನಲ್ಲಿ ದಾಖಲೆಯ ಶೇ.85.1% ರಷ್ಟು ಮತದಾನವಾಗಿದ್ದು ಯುವ ಮತದಾರರು ವಿಜಯ್ ಅವರಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಹೀಗಾಗಿ ಅವರ ಸಂಪುಟದಲ್ಲಿ ಹೆಚ್ಚಾಗಿ ಯುವಕರೇ ಇರುವ ಸಾಧ್ಯತೆಗಳ ಕುರಿತೂ ಭಾರಿ ಚರ್ಚೆಗಳು ನಡೆಯುತ್ತಿವೆ.

ಸಂಭಾವ್ಯ ಮೈತ್ರಿಕೂಟದ ಲೆಕ್ಕಾಚಾರಗಳು

ಪ್ರಸ್ತುತ ಟಿವಿಎ (TVK) 108 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅಗತ್ಯವಿದೆ. ವರದಿಗಳ ಪ್ರಕಾರ, ವಿಜಯ್ ರ ಟಿವಿಕೆ ಪಕ್ಷ ಕೆಲ ಪ್ರಮುಖ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಇದ್ದು ರಾಹುಲ್ ಗಾಂಧಿ ಈಗಾಗಲೇ ವಿಜಯ್ ಅವರನ್ನು ಸಂಪರ್ಕಿಸಿ ತಮ್ಮ ಪಕ್ಷದ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ನಟ ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್ ಹೊರಗಿನಿಂದ ಬೆಂಬಲ ನೀಡಬಹುದು ಅಥವಾ ಮೈತ್ರಿಯ ಭಾಗವಾಗಬಹುದು ಎನ್ನಲಾಗುತ್ತಿದೆ. ಇದಲ್ಲದೆ ಇತರ ಸಣ್ಣ ಪಕ್ಷಗಳು ಅಂದರೆ ವಿಸಿಕೆ (VCK - 2 ಸ್ಥಾನ), ಸಿಪಿಐ ಮತ್ತು ಸಿಪಿಐ(ಎಂ) (ಒಟ್ಟು 5 ಸ್ಥಾನ) ಪಕ್ಷಗಳ ಬೆಂಬಲವನ್ನು ಪಡೆಯಲು ಟಿವಿಕೆ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಸಚಿವ ಸಂಪುಟ ಹೇಗಿರಬಹುದು?

ವಿಜಯ್ ಅವರು ಈಗಾಗಲೇ ತಮ್ಮ ಪಕ್ಷದಲ್ಲಿ 60:40 ಸೂತ್ರವನ್ನು ಘೋಷಿಸಿದ್ದಾರೆ. ಅಂದರೆ 60% ಸ್ಥಾನಗಳನ್ನು ಹಳೆಯ ನಿಷ್ಠಾವಂತ ಕಾರ್ಯಕರ್ತರಿಗೆ ಮತ್ತು 40% ಸ್ಥಾನಗಳನ್ನು ಹೊಸಬರಿಗೆ ಅಥವಾ ಹೊರಗಿನ ಗಣ್ಯ ವ್ಯಕ್ತಿಗಳಿಗೆ ನೀಡುವ ಭರವಸೆ ನೀಡಿದ್ದಾರೆ.

ಹಿರಿಯ ನಾಯಕರು

ಇತ್ತೀಚೆಗೆ ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡು ಟಿವಿಕೆ ಸೇರಿ ಗೆದ್ದಿರುವ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್ ಅವರಿಗೆ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆಯಿದೆ.

ಇದಲ್ಲದೆ ವಿಜಯ್ ಅವರು ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಹೊಸಬರಾದ ಆರ್. ಸಬರಿನಾಥನ್ (ವಿರುಗಂಬಾಕ್ಕಂ ಕ್ಷೇತ್ರದ ವಿಜೇತ) ಮತ್ತು ವಿ.ಎಸ್. ಬಾಬು (ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿದವರು) ಸಂಪುಟದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಅಂತೆಯೇ ವಿಜಯ್ ಅವರ ಆಪ್ತ ವಲಯದಲ್ಲಿರುವ ಆನಂದ್ ಮತ್ತು ಚುನಾವಣಾ ತಂತ್ರಜ್ಞ ಜಾನ್ ಆರೋಗ್ಯಸ್ವಾಮಿ ಅವರ ಸಲಹೆಯಂತೆ ಸಚಿವ ಸಂಪುಟದ ಆಯ್ಕೆ ನಡೆಯಲಿದೆ ಎಂದು ಟಿವಿಕೆ ಆಂತರಿಕ ಮೂಲಗಳು ತಿಳಿಸಿವೆ.

ಎಲ್ಲವೂ ಅಂದುಕೊಂಡಂತೆ ನಡೆದು, ಮಾತುಕತೆಗಳು ಯಶಸ್ವಿಯಾದರೆ ಮೇ 7, 2026 ರಂದು ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?

ಇಡೀ ದೇಹಕ್ಕೆ ಹರಡಿದ cancer, Joe Biden ಆರೋಗ್ಯ ಮತ್ತಷ್ಟು ಕ್ಷೀಣ; BBC ಸಂದರ್ಶನದಲ್ಲಿ ಪುತ್ರ ಹಂಟರ್ ಕಳವಳ

KBC ವೇದಿಕೆಯಲ್ಲಿ ಆಮಿರ್ ಖಾನ್‌; ‘4ನೇ ಮದುವೆ ಯಾವಾಗ?’; ಕಾಲೆಳೆದ ನೆಟ್ಟಿಗರು, Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!