ಇಕೆ ಪಳನಿಸ್ವಾಮಿ 
ದೇಶ

ವಿಜಯ್‌ಗೆ ಬೆಂಬಲ ನೀಡುವ ಆತಂಕ: 28 ಶಾಸಕರನ್ನು ಪುದುಚೇರಿ ರೆಸಾರ್ಟ್‌ಗೆ ಶಿಫ್ಟ್ ಮಾಡಿದ AIADMK

ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ವಿಚಾರಕ್ಕೆ ಎಐಎಡಿಎಂಕೆ ಪಕ್ಷದಲ್ಲಿ ಬಿರುಕು ಮೂಡಿದ್ದು, ಕೆಲವು ಶಾಸಕರು ವಿಜಯ್ ಪರ ಒಲವು ಹೊಂದಿದ್ದಾರೆ.

ಪುದುಚೇರಿ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಇಪ್ಪತ್ತೆಂಟು ಎಐಎಡಿಎಂಕೆ ಶಾಸಕರನ್ನು ಪುದುಚೇರಿಯ ಪೂರನ್‌ಕುಪ್ಪಂನಲ್ಲಿರುವ ಖಾಸಗಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.

ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ವಿಚಾರಕ್ಕೆ ಎಐಎಡಿಎಂಕೆ ಪಕ್ಷದಲ್ಲಿ ಬಿರುಕು ಮೂಡಿದ್ದು, ಕೆಲವು ಶಾಸಕರು ವಿಜಯ್ ಪರ ಒಲವು ಹೊಂದಿದ್ದಾರೆ. ಹೀಗಾಗಿ ಎಐಎಡಿಎಂಕೆ ಹಿರಿಯ ನಾಯಕ ಸಿವಿ ಷಣ್ಮುಗಂ ಅವರ ಬೆಂಬಲಿಗ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಎಐಎಡಿಎಂಕೆಯ ಹಲವು ಶಾಸಕರು ಪುದುಚೇರಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಟಿವಿಕೆ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಬಹುದು ಎಂಬ ಭೀತಿಯಿಂದ ಅವರನ್ನು ರೆಸಾರ್ಟ್ ಕರೆದೊಯ್ಯಲಾಗಿದೆ ಎಂದು ಎಐಎಡಿಎಂಕೆ ಹೇಳಿದೆ.

ಶಾಸಕರು ತಂಗಿರುವ ರೆಸಾರ್ಟ್

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಈಗಾಗಲೇ ಐದು ಕಾಂಗ್ರೆಸ್ ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಆದರೆ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತವನ್ನು ತಲುಪಲು ಇನ್ನೂ ಐದು ಶಾಸಕರ ಬೆಂಬಲದ ಅಗತ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TVK ಸರ್ಕಾರ ರಚನೆಯ ಕಸರತ್ತು: ಇಂದು ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್; ಗವರ್ನರ್ ಹೇಳಿದ್ದೇನು?

ಅಸ್ಸಾಂ ಚುನಾವಣೆ ಫಲಿತಾಂಶದಲ್ಲಿ; ಹಿಂದೂ- ಮುಸ್ಲಿಂ ಮತ ಧ್ರುವೀಕರಣ ಸ್ಪಷ್ಟ; ಬಿಜೆಪಿಗೆ ಸ್ಥಳೀಯರ ಸಂಪೂರ್ಣ ಬೆಂಬಲ!

ಸುವೇಂದು ಅಧಿಕಾರಿ ಆಪ್ತನ ಹತ್ಯೆ ಬೆನ್ನಲ್ಲೇ ಆರ್ ಜಿ ಕರ್ ಸಂತ್ರಸ್ತೆ ತಾಯಿ ಮನೆ ಬಳಿ ಬಾಂಬ್ ದಾಳಿ; 5 ಬಿಜೆಪಿ ಕಾರ್ಯಕರ್ತರಿಗೆ ಗಾಯ

'ಜಾತ್ಯತೀತ ಪಕ್ಷಗಳಿಗೆ ಮುಸ್ಲಿಂ ಮತಗಳು ವ್ಯರ್ಥವಾಗಬಾರದು, ಬದಲಾವಣೆ ಅಗತ್ಯ, ಮುಸ್ಲಿಮರ ಪ್ರತ್ಯೇಕ ನಾಯಕತ್ವಕ್ಕೆ ಇದು ಸಕಾಲ': Asaduddin Owaisi

ಮೋದಿ ಸಮ್ಮುಖದಲ್ಲಿ ಬಿಹಾರ ಸಂಪುಟ ವಿಸ್ತರಣೆ: ನಿತೀಶ್ ಕುಮಾರ್ ಪುತ್ರ ಸೇರಿ 32 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

SCROLL FOR NEXT