ಪ್ರಾಣಪಣಕ್ಕಿಟ್ಟು ಮಕ್ಕಳ ಜೀವ ರಕ್ಷಿಸಿದ ಮಹಿಳೆಯರು 
ದೇಶ

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲಿನಿಂದ ಮಕ್ಕಳನ್ನು ರಕ್ಷಿಸಲು ಮಹಿಳೆ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಪಾಟ್ನಾ: ಆಘಾತಕಾರಿ ಘಟನೆಯಲ್ಲಿ ಬಿಹಾರದ ಶಾಹಪುರ ಪಟೋರಿ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ಏಕಾಏಕಿ ರೈಲು ಬಂದಾಗ ಇಬ್ಬರು ಮಕ್ಕಳನ್ನು ರಕ್ಷಿಸಲು ತಾಯಿ ತನ್ನ ಜೀವವನ್ನೇ ಪಣಕ್ಕಿಟ್ಟು ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲಿನಿಂದ ಮಕ್ಕಳನ್ನು ರಕ್ಷಿಸಲು ಮಹಿಳೆ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ರೈಲು ನಿಲ್ದಾಣದ ಸಮೀಪ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ರೈಲು ಹಳಿ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ರೈಲು ಬಂದಿದೆ. ಈ ವೇಳೆ ಮಹಿಳೆಯರು ತಪ್ಪಿಸಿಕೊಳ್ಳಲು ಸಮಯವೇ ಇಲ್ಲದ ಸ್ಥಿತಿಯಲ್ಲಿ ಹಳಿ ಪಕ್ಕದಲ್ಲೇ ಮಕ್ಕಳ ಜೊತೆ ಅವಿತು ಕುಳಿತಿದ್ದಾರೆ.

ಈ ವೇಳೆ ರೈಲು ಕೆಲವೇ ಇಂಚುಗಳಷ್ಟು ಅಂತರದಲ್ಲಿ ರೈಲು ಹಾದು ಹೋಗಿದೆ. ರೈಲು ಹಾದು ಹೋಗುವಾಗ ರೈಲು ಮಹಿಳೆಗೆ ಟಚ್ ಆಗಿದೆಯಾದರೂ ಅಂಜದ ಮಹಿಳೆ ಮಾತ್ರ ಮಕ್ಕಳನ್ನು ಬಿಡದೇ ರಕ್ಷಿಸಿದ್ದಾರೆ. ಇನ್ನೊಬ್ಬ ಮಹಿಳೆ ಆಕೆಯನ್ನು ಹಿಡಿದುಕೊಂಡು ರೈಲು ಎಳೆದುಕೊಂಡು ಹೋಗದಂತೆ ಸಹಾಯ ಮಾಡಿದರು.

ರೈಲು ಹಾದುಹೋದ ಬಳಿಕ ಪ್ಲಾಟ್‌ಫಾರ್ಮ್‌ನಲ್ಲಿದ್ದ ಜನರು ತಕ್ಷಣ ಮಹಿಳೆಯರು ಮತ್ತು ಮಕ್ಕಳನ್ನು ಹಳಿ ಮೇಲಿಂದ ಮೇಲಕ್ಕೆ ಎಳೆದುಕೊಂಡು ರಕ್ಷಿಸಿದರು. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಎಲ್ಲರೂ ಸುರಕ್ಷಿತವಾಗಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.

ವಿಡಿಯೋ ವೈರಲ್

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಕೆಲವರು ಮಹಿಳೆಯರ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಪಾದಾಚಾರಿ ಸೇತುವೆ ಇದ್ದರೂ ಹಳಿ ಮೇಲಿಂದ ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ಫುಟ್ ಓವರ್ ಬ್ರಿಡ್ಜ್ ಮತ್ತು ನಿಗದಿತ ದಾಟುವ ಮಾರ್ಗಗಳನ್ನು ಮಾತ್ರ ಬಳಸಬೇಕು ಎಂದು ರೈಲ್ವೆ ಅಧಿಕಾರಿಗಳು ಪದೇಪದೇ ಎಚ್ಚರಿಕೆ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!

ಮಹಾ ದುರಂತಕ್ಕೆ ರೋಚಕ ಟ್ವಿಸ್ಟ್: ಐಫೋನ್​ EMI ಅನ್ನೋದೇ ಕಟ್ಟು ಕಥೆ; ಬೆಟ್ಟದಿಂದ ಬಿದ್ದು ಪ್ರಾಣಬಿಟ್ಟ ಮೂವರ ಬಗ್ಗೆ ಸಂಬಂಧಿ ಸ್ಫೋಟಕ ಹೇಳಿಕೆ!