ತಮ್ಮ ನಿವಾಸದ ಹೊರಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜಿನಿಕಾಂತ್  
ದೇಶ

ಸ್ಟಾಲಿನ್ ಜೊತೆ ನನ್ನ ಸ್ನೇಹ ರಾಜಕೀಯಕ್ಕೆ ಮಿಗಿಲು, ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ: ರಜಿನಿಕಾಂತ್-Video

ಚೆನ್ನೈನ ಪೊಯ್ಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರಜಿನಿಕಾಂತ್, ಚುನಾವಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯಗಳಲ್ಲಿ ತಮ್ಮ ವಿರುದ್ಧ ಹಲವು ಟೀಕೆಗಳು ಹರಿದಾಡುತ್ತಿರುವ ಕಾರಣ ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಸೂಪರ್‌ಸ್ಟಾರ್ ರಜಿನಿಕಾಂತ್ ಅವರು ಇಂದು ಭಾನುವಾರ ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶಗಳ ನಂತರ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಭೇಟಿಯಾದ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಜೊತೆ ತಮ್ಮ ಸ್ನೇಹವು “ರಾಜಕೀಯಕ್ಕಿಂತ ಮಿಗಿಲಾಗಿದ್ದು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ವಿರುದ್ಧ ತಮಗೆ ಯಾವುದೇ ಅಸೂಯೆ ಅಥವಾ ರಾಜಕೀಯ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಚೆನ್ನೈನ ಪೊಯ್ಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರಜಿನಿಕಾಂತ್, ಚುನಾವಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯಗಳಲ್ಲಿ ತಮ್ಮ ವಿರುದ್ಧ ಹಲವು ಟೀಕೆಗಳು ಹರಿದಾಡುತ್ತಿರುವ ಕಾರಣ ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಚುನಾವಣೆಯ ಸಂಬಂಧವಾಗಿ ನನ್ನ ವಿರುದ್ಧ ಹಲವು ಟೀಕೆಗಳು ಕೇಳಿಬರುತ್ತಿವೆ. ನಾನು ಇದಕ್ಕೆ ಪ್ರತಿಕ್ರಿಯಿಸದಿದ್ದರೆ, ಅವೇ ಸತ್ಯ ಎಂದು ಜನ ಭಾವಿಸುತ್ತಾರೆ ಎಂದು ಹೇಳಿದರು.

ಚುನಾವಣೆಯ ಬಳಿಕ ಸ್ಟಾಲಿನ್ ಅವರನ್ನು ಭೇಟಿಯಾದದ್ದು ಸಂಪೂರ್ಣ ವೈಯಕ್ತಿಕ ಕಾರಣಕ್ಕಾಗಿ ಎಂದು ರಜಿನಿಕಾಂತ್ ಸ್ಪಷ್ಟಪಡಿಸಿದರು.

ತಮಿಳು ನಾಡು ವಿಧಾನಸಭೆ ಚುನಾವಣೆ ಫಲಿತಾಂಶ ನಂತರ ನಾನು ಸ್ಟಾಲಿನ್ ಅವರನ್ನು ಭೇಟಿಯಾದೆ. ಅದಕ್ಕೆ ಕೆಲವರು ಟೀಕೆ ಮಾಡಿದರು. ಸ್ಟಾಲಿನ್ ನನ್ನ 38-40 ವರ್ಷಗಳ ಸ್ನೇಹಿತ. ನಮ್ಮ ಸ್ನೇಹ ರಾಜಕೀಯಕ್ಕಿಂತ ಮೇಲಿನದು. ಪ್ರಜಾಪ್ರಭುತ್ವದಲ್ಲಿ ಗೆಲುವು-ಸೋಲು ಸಾಮಾನ್ಯ. ಆದರೂ ಕೊಲತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಸೋತದ್ದು ನನಗೆ ಸ್ವಲ್ಪ ಬೇಸರ ತಂದಿತು. ಅದಕ್ಕಾಗಿ ನಾನು ಸ್ನೇಹಿತನಾಗಿ ಅವರನ್ನು ಭೇಟಿಯಾದೆ. ಆದರೆ ಕೆಲವರು ‘ವಿಜಯ್ ಮುಖ್ಯಮಂತ್ರಿ ಆಗದಂತೆ ತಡೆಯಲು ರಜನಿಕಾಂತ್ ಚರ್ಚೆ ನಡೆಸಲು ಹೋದರು’ ಎಂದು ಹೇಳಿದರು. ರಜಿನಿಕಾಂತ್ ಅಷ್ಟು ಕೀಳು ಮಟ್ಟದ ವ್ಯಕ್ತಿಯಲ್ಲ. ಇದು ಸ್ಪಷ್ಟವಾಗಬೇಕು ಎಂದು ಹೇಳಿದರು.

ವಿಜಯ್ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ತಾವು ಅಭಿನಂದನೆ ಸಲ್ಲಿಸಲಿಲ್ಲ ಎಂಬ ಟೀಕೆಯನ್ನೂ ರಜನಿಕಾಂತ್ ತಳ್ಳಿಹಾಕಿದರು.

ವಿಮಾನ ನಿಲ್ದಾಣದಲ್ಲಿ ನಾನು ವಿಜಯ್ ಅವರನ್ನು ಅಭಿನಂದಿಸಲಿಲ್ಲ ಎಂದು ಹೇಳಿದರು. ಆದರೆ ಅವರು ಗೆದ್ದ ತಕ್ಷಣವೇ ನಾನು ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸಿದ್ದೆ. ನಾನು ಈಗ ರಾಜಕೀಯದಲ್ಲಿಲ್ಲ. ನಾನು ರಾಜಕೀಯವನ್ನು ಈಗಾಗಲೇ ತೊರೆದಿದ್ದೇನೆ. ರಾಜಕೀಯದಲ್ಲೇ ಇಲ್ಲದ ನಾನು ಅವರಿಗೆ ಏಕೆ ಅಸೂಯೆ ಪಡಬೇಕು ಯಾರಿಗೆ ಏನು ವಿಧಿಯಾಗಿದೆಯೋ ಅದು ಆಗುತ್ತದೆ ಎಂದು ಹೇಳಿದರು.

ಅಸೂಯೆ ಆರೋಪಗಳನ್ನು ನಿರಾಕರಿಸಿದ ಹಿರಿಯ ನಟ, ವಿಜಯ್ ಅವರ ರಾಜಕೀಯ ಬೆಳವಣಿಗೆಯನ್ನು ಪ್ರಶಂಸಿಸಿದರು.

ನನ್ನ ಮತ್ತು ವಿಜಯ್ ನಡುವೆ 25 ವರ್ಷಗಳ ತಲೆಮಾರಿನ ಅಂತರ ಇದೆ. ನಾನು ಇದನ್ನು ಹಿಂದೆ ಕೂಡ ಹೇಳಿದ್ದೇನೆ. ನಾನು ನನ್ನನ್ನು ವಿಜಯ್ ಜೊತೆ ಹೋಲಿಸಿಕೊಂಡರೆ ಅದು ನನಗೆ ಒಳ್ಳೆಯದಲ್ಲ. ವಿಜಯ್ ಅವರು ನನ್ನನ್ನು ಹೋಲಿಸಿಕೊಂಡರೂ ಅದು ಅವರಿಗೆ ಒಳ್ಳೆಯದಲ್ಲ. ನಾನು ಅವರನ್ನು ಬಾಲ್ಯದಿಂದಲೇ ನೋಡಿದ್ದೇನೆ. ಅವರು ಮುಖ್ಯಮಂತ್ರಿ ಆಗಿದ್ದಕ್ಕೆ ನಾನು ಏಕೆ ಅಸೂಯೆ ಪಡಬೇಕು ಎಂದು ಪ್ರಶ್ನಿಸಿದರು.

52ನೇ ವಯಸ್ಸಿನಲ್ಲಿ ವಿಜಯ್ ಅವರು ಎಂಜಿಆರ್ ಅಥವಾ ಎನ್‌ಟಿಆರ್ ಸಾಧಿಸಿದುದಕ್ಕಿಂತ ಹೆಚ್ಚಿನದನ್ನು ಸಾಧಿಸಿದ್ದಾರೆ. ಚಿತ್ರರಂಗದಿಂದ ಬಂದು ಅವರು ಶಕ್ತಿಶಾಲಿ ಪಕ್ಷಗಳನ್ನೂ ಬಿಜೆಪಿಯನ್ನೂ ಸ್ವತಃ ಸೋಲಿಸಿದ್ದಾರೆ. ನನಗೆ ಅಸೂಯೆ ಇಲ್ಲ, ಆದರೆ ಅಚ್ಚರಿ ಮತ್ತು ಸಂತೋಷ ಎರಡೂ ಇದೆ. ನಾನು ಅವರನ್ನು ಮೆಚ್ಚುತ್ತೇನೆ. ಜನರು ಅವರಿಂದ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಅದನ್ನು ಈಡೇರಿಸುತ್ತಾರೆ ಎಂದು ನಂಬಿದ್ದೇನೆ. ಅವರಿಗೆ ನನ್ನ ಹಾರೈಕೆಗಳು ಎಂದು ರಜಿನಿಕಾಂತ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆಟೋ-ಟ್ಯಾಕ್ಸಿ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: 48 ಗಂಟೆಯಲ್ಲಿ 2ನೇ ಬಾರಿ CNG ದರ ಏರಿಕೆ, ಕೆಜಿಗೆ 1 ರೂ. ಹೆಚ್ಚಳ..!

ನಿರ್ಗತಿಕರಿಗೆ ಬಡವರಿಂದ ಸಹಾಯಹಸ್ತ: 3 ಮಕ್ಕಳ ವಿಧವೆಗೆ ಮನೆ ನಿರ್ಮಿಸಿಕೊಟ್ಟ ವಿಜಯಪುರದ ದಿನಗೂಲಿ ಕಾರ್ಮಿಕರು

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಗುರಿಯಾಗಿಸಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಸಹಿಸಲಾಗದು: ವಿಶ್ವಸಂಸ್ಥೆಯಲ್ಲಿ ಭಾರತ ಖಂಡನೆ

“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭಾರೀ ಅಗ್ನಿ ಅವಘಡ: ಅದೃಷ್ಟವಶಾತ್‌ 68 ಪ್ರಯಾಣಿಕರು ಪಾರು..!

SCROLL FOR NEXT