ಸಫಾರಿ ವಾಹನದ ಮೇಲೆ ರೈನೋ ದಾಳಿ 
ದೇಶ

Assam: ಸಫಾರಿ ಜೀಪ್ ಮೇಲೆ Rhino ದಾಳಿ; ಒಂದೇ ಹೊಡೆತಕ್ಕೆ ಟೈರ್ ಛಿದ್ರ; ವಾಹನವನ್ನೇ ಉರುಳಿಸಲು ಯತ್ನ; Video Viral

ಸಾಮಾನ್ಯ ಕಾಡು ಸಫಾರಿ ವೇಳೆ ಸಪಾರಿ ಮಾರ್ಗ ಮಧ್ಯೆ ಸಫಾರಿವಾಹನ ನಿಂತಿದ್ದಾಗ ಅಲ್ಲಿಗೆ ಈ ಘಟನೆ ನಡೆದಿದ್ದು, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಓಪನ್ ಜೀಪ್‌ವೊಂದರ ಬಳಿ ಖಡ್ಗಮೃಗ ಏಕಾಏಕಿ ದೌಡಾಯಿಸಿದೆ.

ಗುವಾಹತಿ: ಅಸ್ಸಾಂ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಜೀಪ್ ಮೇಲೆ ಖಡ್ಗಮೃಗ (Rhino) ದಾಳಿ ನಡೆಸಿದ್ದು, ವಾಹನವನ್ನೇ ಉರುಳಿಸಲು ಯತ್ನಿಸಿದ ದೃಶ್ಯ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಅಸ್ಸಾಂನ ಮಾನಸ್ ರಾಷ್ಟ್ರೀಯ ಜೈವಿಕ ಉದ್ಯಾನವನ (Manas National Park)ದ ಬನ್ಸ್‌ಬಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಖಡ್ಗಮೃಗವೊಂದು ಸಫಾರಿ ಜೀಪ್ ಮೇಲೆ ಆಕ್ರಮಣಕಾರಿ ದಾಳಿ ನಡೆಸಿ ಪ್ರವಾಸಿಗರಲ್ಲಿ ಭಯ ಹುಟ್ಟಿಸಿದೆ.

ಸಾಮಾನ್ಯ ಕಾಡು ಸಫಾರಿ ವೇಳೆ ಸಪಾರಿ ಮಾರ್ಗ ಮಧ್ಯೆ ಸಫಾರಿವಾಹನ ನಿಂತಿದ್ದಾಗ ಅಲ್ಲಿಗೆ ಈ ಘಟನೆ ನಡೆದಿದ್ದು, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಓಪನ್ ಜೀಪ್‌ವೊಂದರ ಬಳಿ ಖಡ್ಗಮೃಗ ಏಕಾಏಕಿ ದೌಡಾಯಿಸಿದೆ.

ಕೆಲವೇ ಕ್ಷಣಗಳಲ್ಲಿ ಖಡ್ಗಮೃಗ ತನ್ನ ಕೊಂಬಿನಿಂದ ಜೀಪ್‌ಗೆ ಬಲವಾಗಿ ಡಿಕ್ಕಿ ಹೊಡೆದಿದ್ದು, ಖಡ್ಗಮೃಗದ ಒಂದೇ ಹೊಡೆತಕ್ಕೆ ಸಫಾರಿ ವಾಹನದ ಟೈರ್ ಛಿದ್ರವಾಗಿದೆ. ಈ ವೇಳೆ ವಾಹನದಲ್ಲಿದ್ದ ಪ್ರವಾಸಿಗರು ಭಯಭೀತರಾಗಿದ್ದಾರೆ.

ವೈರಲ್ ವಿಡಿಯೋದಲ್ಲಿ ಖಡ್ಗಮೃಗ ಜೀಪ್ ಅನ್ನು ತಳ್ಳುತ್ತಾ ಅದನ್ನು ಎತ್ತಿ ಉರುಳಿಸಲು ಯತ್ನಿಸುತ್ತಿರುವುದು ಕಾಣಿಸುತ್ತದೆ. ಭಯಗೊಂಡ ಪ್ರವಾಸಿಗರು ವಾಹನದೊಳಗೆ ಕುಳಿತಿದ್ದರೆ, ಮತ್ತೆ ರೈನೋ ಇಡೀ ಜೀಪನ್ನೇ ಎತ್ತಿ ಬಿಸಾಡಲು ಯತ್ನಿಸಿದೆ. ಘಟನೆಯ ವೇಳೆ ಪ್ರವಾಸಿಗರ ಕಿರುಚಾಟ ಮತ್ತು ಆತಂಕದ ವಾತಾವರಣ ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ.

ಚಾಲಕನ ಸಮಯ ಪ್ರಜ್ಞೆ

ಭಯಾನಕ ಪರಿಸ್ಥಿತಿಯ ನಡುವೆಯೂ ಸಫಾರಿ ಚಾಲಕ ಅಪಾರ ಧೈರ್ಯ ಮತ್ತು ಚಾತುರ್ಯ ಪ್ರದರ್ಶಿಸಿ ವಾಹನವನ್ನು ನಿಧಾನವಾಗಿ ಖಡ್ಗಮೃಗದಿಂದ ದೂರಕ್ಕೆ ಚಲಾಯಿಸಿದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದ್ದು, ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿ ಪಾರಾಗಿದ್ದಾರೆ.

ತಜ್ಞರು ಹೇಳಿದ್ದೇನು?

ವನ್ಯಜೀವಿ ತಜ್ಞರ ಪ್ರಕಾರ, ಕಾಡು ಪ್ರಾಣಿಗಳು ತಮ್ಮ ನೈಸರ್ಗಿಕ ವಾಸಸ್ಥಳದಲ್ಲಿ ಅಪಾಯ, ಅಸ್ವಸ್ಥತೆ ಅಥವಾ ಆತಂಕ ಅನುಭವಿಸಿದಾಗ ಇಂತಹ ದಾಳಿಗಳು ಸಂಭವಿಸಬಹುದು. ಸಫಾರಿ ವೇಳೆ ಪ್ರವಾಸಿಗರು ನಿಶ್ಯಬ್ದವಾಗಿರಬೇಕು. ಮನುಷ್ಯರ ಶಬ್ದ ಕೆಲವೊಮ್ಮೆ ಕಾಡು ಪ್ರಾಣಿಗಳನ್ನು ಕೆರಳಿಸಬಹುದು. ಇಂತಹ ಸಂದರ್ಭದಲ್ಲಿ ಅವು ದಾಳಿಗೆ ಮುಂದಾಗುತ್ತವೆ. ಅಲ್ಲದೆ ಹಠಾತ್ ಚಲನೆಗಳನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

ಯುನೆಸ್ಕೋ ವಿಶ್ವ ಪಾರಂಪರಿಕ ತಾಣ

ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ ಮಾನಸ್ ರಾಷ್ಟ್ರೀಯ ಉದ್ಯಾನವು ಶ್ರೀಮಂತ ಜೈವಿಕ ವೈವಿಧ್ಯತೆಗೆ ಪ್ರಸಿದ್ಧವಾಗಿದೆ. ಈ ಉದ್ಯಾನದಲ್ಲಿ ಭಾರತೀಯ ಏಕಶೃಂಗ ಖಡ್ಗಮೃಗ, ಆನೆಗಳು, ಹುಲಿಗಳು ಮತ್ತು ಕಾಡೆಮ್ಮೆಗಳು ಸೇರಿದಂತೆ ಹಲವು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳು ವಾಸಿಸುತ್ತವೆ.

ಅಸ್ಸಾಂನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಈ ರಾಷ್ಟ್ರೀಯ ಉದ್ಯಾನವು ವನ್ಯಜೀವಿ ಸಂರಕ್ಷಣಾ ಕಾರ್ಯಗಳಿಗಾಗಿ ಜಾಗತಿಕ ಮಟ್ಟದಲ್ಲೂ ಹೆಸರುವಾಸಿಯಾಗಿದೆ. ಈ ಘಟನೆ ಮತ್ತೊಮ್ಮೆ ವನ್ಯಜೀವಿ ಸಫಾರಿಗಳ ಅನಿಶ್ಚಿತ ಸ್ವಭಾವವನ್ನು ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳ ಅಗತ್ಯವನ್ನು ಹೈಲೈಟ್ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ, ಅಮೆರಿಕ ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ..!

ಸೆಪ್ಟೆಂಬರ್ 11 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ಸಾಧ್ಯತೆ

ರಾಹುಲ್ ಗಾಂಧಿ ನಿಲುವಿಗೆ ಉಲ್ಟಾ ಹೊಡೆದರೇ ಡಿಕೆಶಿ? CM ನಿವಾಸಕ್ಕೆ ಅದಾನಿ ಭೇಟಿ; ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ..!

KPSC ಹಗರಣ: IAS ಅಧಿಕಾರಿ ಗಂಗ್ವಾರ್ ಮನೆ ಮೇಲೆ ED ದಾಳಿ; ಗೇಟ್ ಲಾಕ್ ಮಾಡಿ ಸೆಕ್ಯೂರಿಟಿ ಹೈಡ್ರಾಮಾ, ಕೀ ಮೇಕರ್ ಕರೆಯಿಸಿ ಬಾಗಿಲು ಮುರಿದ ಅಧಿಕಾರಿಗಳು..!