ದೇಶ

ವಿಚಿತ್ರ ಘಟನೆ: 'ಐ ಲವ್ ಅಂಬಿಕಾಪುರ್' ಎಂದು ಬರೆದು ಛತ್ತೀಸ್‌ಗಢ ಕಾಂಗ್ರೆಸ್ ಕಚೇರಿಯಲ್ಲಿ 73 'ನಲ್ಲಿ' ಕದ್ದ ಕಳ್ಳರು!

ಕಳ್ಳರು ಕಚೇರಿ ಆವರಣದ ಮೇಲ್ಛಾವಣಿಯಿಂದ ಪ್ರವೇಶಿಸಿ ವಿವಿಧ ಶೌಚಾಲಯಗಳಲ್ಲಿ ಅಳವಡಿಸಲಾದ 73 ನಲ್ಲಿಗಳನ್ನು ತಳ್ಳತನ ಮಾಡಿದ್ದಾರೆ.

ಅಂಬಿಕಾಪುರ: ಛತ್ತೀಸ್‌ಗಢದ ಅಂಬಿಕಾಪುರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ದುಷ್ಕರ್ಮಿಗಳು 73 ನಲ್ಲಿಗಳನ್ನು ಕದ್ದಿದ್ದು, ಶೌಚಾಲಯಗಳನ್ನು ಧ್ವಂಸ ಮಾಡಿದ್ದಾರೆ ಮತ್ತು ಕೈಬರಹದಲ್ಲಿ "ಐ ಲವ್ ಅಂಬಿಕಾಪುರ್" ಎಂದು ಬರೆದು ಹೋಗಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರ್ಗುಜಾ ಜಿಲ್ಲೆಯ ಪ್ರಧಾನ ಕಚೇರಿಯಾದ ಅಂಬಿಕಾಪುರದ ಘಾಡಿ ಚೌಕ್ ಬಳಿ ಇರುವ ಕಾಂಗ್ರೆಸ್ ಕಚೇರಿ 'ರಾಜೀವ್ ಭವನ'ದಲ್ಲಿ ಕಳ್ಳತನ ನಡೆದಿದೆ.

ಕಾಂಗ್ರೆಸ್ ನಾಯಕರ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಪಕ್ಷದ ಕಚೇರಿಯಲ್ಲಿ ವರದಿಯಾದ ಮೂರನೇ ಕಳ್ಳತನ ಇದಾಗಿದೆ.

ಇತ್ತೀಚಿನ ಕಳ್ಳತನ ಘಟನೆ ಮೇ 14 ಮತ್ತು 15 ರ ಮಧ್ಯರಾತ್ರಿ ನಡೆದಿದೆ ಎಂದು ಸುರ್ಗುಜಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಪಾಠಕ್ ಹೇಳಿದ್ದಾರೆ.

"ಕಳ್ಳರು ಕಚೇರಿ ಆವರಣದ ಮೇಲ್ಛಾವಣಿಯಿಂದ ಪ್ರವೇಶಿಸಿ ವಿವಿಧ ಶೌಚಾಲಯಗಳಲ್ಲಿ ಅಳವಡಿಸಲಾದ 73 ನಲ್ಲಿಗಳನ್ನು ತಳ್ಳತನ ಮಾಡಿದ್ದಾರೆ. ಅವರು ಹಲವಾರು ವಾಶ್ ಬೇಸಿನ್‌ಗಳು, ಕಮೋಡ್ ಫ್ಲಶ್ ವ್ಯವಸ್ಥೆಗಳು ಮತ್ತು ಪೈಪ್‌ಲೈನ್‌ಗಳನ್ನು ಸಹ ಹಾನಿಗೊಳಿಸಿದ್ದಾರೆ" ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.

ವಿರೋಧ ಪಕ್ಷವು ಹಂಚಿಕೊಂಡಿರುವ ವಿಡಿಯೋದಲ್ಲಿ ಕಳ್ಳರು, "ಐ ಲವ್ ಅಂಬಿಕಾಪುರ್" ಎಂದು ಶೌಚಾಲಯದ ನೆಲದ ಮೇಲೆ ಕೈಯಿಂದ ಬರೆಯಲಾಗಿದೆ.

"ನೆಲದ ಮೇಲೆ ಸಂದೇಶವನ್ನು ಸಹ ಬಿಟ್ಟಿರುವ ಕಳ್ಳರ ಇಂತಹ ದಿಟ್ಟತನವು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸರಿಗೆ ನೇರ ಸವಾಲಾಗಿದೆ" ನಗರದಲ್ಲಿ ಸಕ್ರಿಯವಾಗಿರುವ ಮಾದಕ ವ್ಯಸನಿಗಳು ಮತ್ತು ಸಮಾಜವಿರೋಧಿ ಶಕ್ತಿಗಳು ಈ ಘಟನೆಯ ಹಿಂದೆ ಇರಬಹುದು ಎಂದು ಅವರು ಹೇಳಿದ್ದಾರೆ.

ಈ ಕಳ್ಳತನದಿಂದ 80,000 ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಅತಿಕ್ರಮಣ ಮತ್ತು ಕಳ್ಳತನದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಆದರೆ ಇದುವರೆಗೂ ಯಾರನ್ನೂ ಬಂದಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bengaluru Rains: ವರುಣಾರ್ಭಟಕ್ಕೆ ನದಿಯಂತಾದ ರಸ್ತೆಗಳು; 5 ದಿನ ಮಳೆ ಸಾಧ್ಯತೆ, ತಾಪಮಾನ ಗಣನೀಯ ಇಳಿಕೆ: ಹವಾಮಾನ ಇಲಾಖೆ

ಬಂಗಾಳ ಮಹಿಳೆಯರಿಗೆ, ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್: ತಿಂಗಳಿಗೆ 3,000 ರೂ., ಉಚಿತ ಬಸ್ ಪ್ರಯಾಣ, 7ನೇ ವೇತನ ಆಯೋಗ ರಚನೆಗೆ ಸಂಪುಟ ಅಸ್ತು

ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ನಟ ದರ್ಶನ್?; ಪರಪ್ಪನ ಅಗ್ರಹಾರದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ!

ಮುಂದಿನ ಸಿಎಂ ಪರಮೇಶ್ವರ್?: ನಾಯಕತ್ವ ಬದಲಾವಣೆಯ ಸುಳಿವು ನೀಡಿದ ಮಾಜಿ ಸಚಿವ ರಾಜಣ್ಣ

ಮಹಿಳೆಯರಿಗೆ ಬಂಪರ್ ಗಿಫ್ಟ್: ಮೊದಲ ಸಂಪುಟ ಸಭೆಯಲ್ಲೇ ಉಚಿತ ಬಸ್ ಪ್ರಯಾಣ, ಆಶಾ ವೇತನ ಹೆಚ್ಚಳಕ್ಕೆ ಕೇರಳ ಅನುಮೋದನೆ

SCROLL FOR NEXT