ಸಾಂದರ್ಭಿಕ ಚಿತ್ರ 
ದೇಶ

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ: ಇಂಧನ ಪೂರೈಕೆ ಹೆಚ್ಚಿಸಲು ಡೀಲರ್‌ಗಳ ಆಗ್ರಹ; ರಾಜ್ಯಕ್ಕೂ ಕಾದಿದೆಯಾ ಡ್ರೈ ಡೇ?

ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್, HPCL ಮತ್ತು BPCL ನಿಂದ ಇಂಧನ ಪೂರೈಕೆಯು ಗಮನಾರ್ಹ ಪ್ರಮಾಣದಲ್ಲಿ ಪರಿಣಾಮ ಬೀರಿದೆ.

ಚಂಡೀಗಢ: ಪಂಜಾಬ್‌ನಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಹೀಗಾಗಿ ಸಮಸ್ಯೆ ಪರಿಹರಿಸಲು ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಬೇಕು ಎಂದು ಡೀಲರ್‌ಗಳು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಸುಮಾರು 3,700 ಪೆಟ್ರೋಲ್ ಪಂಪ್‌ಗಳಿದ್ದು, ಈ ಪೈಕಿ ಶೇ. 25 ರಷ್ಟು ಪಂಪ್‌ಗಳು ಗ್ರಾಮೀಣ ಕೃಷಿ ಪ್ರದೇಶಗಳಲ್ಲಿವೆ. ಅಲ್ಲಿ ಗೋಧಿ ಕೊಯ್ಲು ಮತ್ತು ಭತ್ತ ಬಿತ್ತನೆ ಋತುವಿನಲ್ಲಿ ಇಂಧನ ಬೇಡಿಕೆ ಹೆಚ್ಚಾಗುತ್ತದೆ.

ಪಂಜಾಬ್ ಪೆಟ್ರೋಲ್ ಪಂಪ್ ಡೀಲರ್‌ಗಳ ಸಂಘವು ಈ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಇಮೇಲ್‌ ಕಳುಹಿಸಿದ್ದು, "ಪಂಜಾಬ್‌ನಾದ್ಯಂತ ತೈಲ ಮಾರುಕಟ್ಟೆ ಕಂಪನಿಗಳು(OMC ಗಳು) ಪೆಟ್ರೋಲ್ ಮತ್ತು ಡೀಸೆಲ್‌ನ ತೀವ್ರ ಕೊರತೆ ಎದುರಿಸುತ್ತಿದ್ದು, ಈ ಬಗ್ಗೆ ಸರ್ಕಾರ ತಕ್ಷಣದ ಗಮನ ಸೆಳೆಯಲು ಬಯಸುವುದಾಗಿ ತಿಳಿಸಿದೆ.

ಇಂಧನ ಪೂರೈಕೆ ಕೊರತೆಯಿಂದ ಪೆಟ್ರೋಲ್ ಪಂಪ್‌ಗಳು ಬರಿದಾಗುವಿಕೆಗೆ ಕಾರಣವಾಗಿದೆ, ಇದು ಗಂಭೀರ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಸಂಘ ಆರೋಪಿಸಿದೆ.

ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್, HPCL ಮತ್ತು BPCL ನಿಂದ ಇಂಧನ ಪೂರೈಕೆಯು ಗಮನಾರ್ಹ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಆದರೆ IOCL ತುಲನಾತ್ಮಕವಾಗಿ ಉತ್ತಮವಾಗಿದೆ ಎಂದು ಬರೆದಿದ್ದಾರೆ.

ರಾಜ್ಯದಲ್ಲಿ ಅನೇಕ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಖಾಲಿ ಆಗಿದೆ. ಇದು ದೀರ್ಘ ಸರತಿ ಸಾಲುಗಳು, ತೀವ್ರ ಸಾರ್ವಜನಿಕ ತೊಂದರೆ ಮತ್ತು ಹೆಚ್ಚುತ್ತಿರುವ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕೊರತೆಯು ಕೃಷಿ ಚಟುವಟಿಕೆಗಳು, ರೈತರ ಜೀವನೋಪಾಯ, ಸಾರಿಗೆ, ಅಗತ್ಯ ಸೇವೆಗಳು ಮತ್ತು ರಾಜ್ಯದ ಒಟ್ಟಾರೆ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

"ಎಲ್ಲಾ ಪೆಟ್ರೋಲ್ ಪಂಪ್‌ಗಳಿಗೆ ಕನಿಷ್ಠ 1000 ಲೀಟರ್ ಪೆಟ್ರೋಲ್ ಮತ್ತು 2000 ಲೀಟರ್ ಡೀಸೆಲ್ ಸ್ಟಾಕ್ ಅನ್ನು ಕಾಯ್ದುಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳು ಸ್ಪಷ್ಟ ಸಲಹೆಗಳನ್ನು ನೀಡಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯಕ್ಕೂ ಕಾದಿದೆಯಾ ಡ್ರೈ ಡೇ?

ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಪಡಿಸಿರುವ ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಪ್ರಧಾನಿ ಮೋದಿ ಅವರು ಕರೆ ನೀಡಿದ ಬೆನಲ್ಲೇ ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ ಹೊಡೆಯುತ್ತಿದ್ದು, ಇದರ ಬಿಸಿ ಕರ್ನಾಟಕಕ್ಕೂ ತಟ್ಟಲಿದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಯನಾಡು ಭೂಕುಸಿತ 'ಮಾನವ ನಿರ್ಮಿತ'; ಮಣ್ಣು ತೆರವುಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚಿಸಿದ್ರೂ ನಿರ್ಲಕ್ಷ್ಯ!

Varanasi Movie: ವಾರಣಾಸಿ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು! ವೈರಲ್ ಆಗಿರುವ ಫೋಟೋ ರಿಯಾಲಿಟಿ ಏನು?

ಪಾಕಿಸ್ತಾನದಲ್ಲಿ ಭೀಕರ ಉಗ್ರ ದಾಳಿ: ಒಂಬತ್ತು ಪೊಲೀಸ್ ಅಧಿಕಾರಿಗಳು ಸಾವು!

'MS Dhoni won an era': 'ಥಲಾ'ನ 45ನೇ ಹುಟ್ಟುಹಬ್ಬಕ್ಕೆ ರೈನಾ, ಚೋಪ್ರಾ ಸೇರಿದಂತೆ ಹಲವರ ಶುಭಾಶಯ!

ಕೇತನ್​ ಕೊಲೆಗೂ ಮುನ್ನ ಚೇತನ್​ನೊಂದಿಗೆ ರಹಸ್ಯವಾಗಿ ಸಿಯಾ ಮದುವೆ; ಚಾಟ್​ನಿಂದ ಗುಟ್ಟು ರಟ್ಟು!