ಪ್ರಕಾಶ್ ರಾಜ್ 
ದೇಶ

'Cockroach Eating Mangoes: 'ಕಾಕ್ರೋಜ್ ಜನತಾ ಪಾರ್ಟಿ ಬೆಂಬಲಿಸಿ ನಟ ಪ್ರಕಾಶ್ ರಾಜ್ ಪೋಸ್ಟ್, ವೈರಲ್!

ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಪ್ರಕಾಶ್ ರಾಜ್ ಐಸ್ ಕ್ರೀಂನೊಂದಿಗೆ ಇಮಾಮ್ ಪಸಂದ್ ಮಾವಿನ ಹಣ್ಣು ತಿನ್ನುತ್ತಿರುವುದು ಕಂಡುಬಂದಿದೆ.

ನವದೆಹಲಿ: ಬಹುಭಾಷಾ ನಟ ಪ್ರಕಾಶ್ ರಾಜ್ ಇತ್ತೀಚಿಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಮಾವಿನ ಹಣ್ಣು ತಿನ್ನುತ್ತಾ ಪ್ರಕಾಶ್ ರಾಜ್ ನೀಡಿರುವ ಹೇಳಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರೊಂದಿಗೆ 2019 ರಲ್ಲಿ ಮಾವಿನ ಹಣ್ಣು ಕುರಿತು ನಡೆಸಿದ ಮಾತುಕತೆಗಳನ್ನು ನೆಟ್ಟಿಗರು ಹೋಲಿಕೆ ಮಾಡುವುದರೊಂದಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಪ್ರಕಾಶ್ ರಾಜ್ ಐಸ್ ಕ್ರೀಂನೊಂದಿಗೆ ಇಮಾಮ್ ಪಸಂದ್ ಮಾವಿನ ಹಣ್ಣು ತಿನ್ನುತ್ತಿರುವುದು ಕಂಡುಬಂದಿದೆ.

ಮಾವಿನ ಹಣ್ಣು ತಿನ್ನುತ್ತಾ "ದೇಖಿಯೇ ಮೋದಿಜಿ, ಆಮ್ ಕೋ ನಾ ಪುರಾ ಐಸೆ ಕಟ್ ಕರ್ಕೆ, ಇಮಾಮ್ ಪಸಂದ್ ಹೈ. ಇಸ್ಮೇ ಐಸ್ ಕ್ರೀಮ್ ದಾಲ್ಕೆ ಜಿರಳೆಗಳು ಐಸೆ ಖತೇ ಹೈ" (“Dekhiye Modiji, aam ko na pura aise cut karke, Imam Pasand hai. Isme ice cream daalke cockroaches aise khate hain) ಎಂದು ಟೀಕಿಸಿದ್ದಾರೆ.

ವಿಡಿಯೋ ಜೊತೆಗೆ ಜಿರಳೆಗಳು ಮಾವಿನ ಹಣ್ಣು ತಿನ್ನುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು ಹಲವರು ರಾಜಕೀಯ ವಿಡಂಬನೆ ಎಂದು ಹೇಳಿದರೆ, ಮತ್ತೆ ಕೆಲವರು ಪ್ರಧಾನಿ ಮೋದಿಯವರ 2019 ರ ವೈರಲ್ ಮಾತುಕತೆಗೆ ಲಿಂಕ್ ಮಾಡಿದ್ದಾರೆ.

ಆಕ್ಷ ನಡೆದಿದ್ದ ಮಾತುಕತೆ ವೇಳೆಯಲ್ಲಿ ನಮ್ಮ ಪ್ರಧಾನ ಮಂತ್ರಿ ಮಾವಿನ ಹಣ್ಣು ತಿನ್ನುತ್ತಾರಾ? ಅಂತಾ ಅಕ್ಷಯ್ ಕುಮಾರ್ ಕೇಳಿದ್ದರು. ಮೋದಿ ನಗುವಿನ ಬಳಿಕ ಒಂದು ವೇಳೆ ಮಾವಿನ ಹಣ್ಣು ತಿನ್ನುವುದಾರೆ ಅವುಗಳನ್ನು ಕಟ್ ಮಾಡಿ ತಿನ್ನುವಿರಾ ಅಥವಾ ಬೀಜದೊಂದಿಗೆ ನೇರವಾಗಿ ತಿನ್ನುತ್ತಿರಾ ಅಂತಾ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಧಾನಿ ಮೋದಿ, ಮಾವಿನ ಹಣ್ಣು ತಿನ್ನುವುದನ್ನು ನಾನು ನಿಜವಾಗಿಯೂ ಖುಷಿಪಡುತ್ತೇನೆ ಎಂದಿದ್ದರು.

ಪ್ರಕಾಶ್ ರಾಜ್ ಅವರ ಪೋಸ್ಟ್ ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ಕೀಟಗಳು ಸಹ 'ಅಚ್ಛೇ ದಿನ್' ಅನ್ನು ಆನಂದಿಸಲು ಪ್ರಾರಂಭಿಸಿವೆ ಎಂದು ಬಳಕೆದಾರರೊಬ್ಬ ಪೋಸ್ಟ್ ಮಾಡಿದ್ದರೆ, “ಜಿರಳೆ ಕಮಲ ತಿನ್ನುತ್ತಿದೆ” ಎಂದು ಮತ್ತೋರ್ವ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತೃತ್ವಕ್ಕೆ ಗೌರವ ನೀಡಿ, ದ್ವೇಷ ರಾಜಕಾರಣ ಬೇಡ: WFIಗೆ ದೆಹಲಿ ಹೈಕೋರ್ಟ್ ತೀವ್ರ ತರಾಟೆ, ವಿನೇಶ್ ಫೋಗಟ್‌ 'ಅನರ್ಹತೆ' ನಿರ್ಧಾರಕ್ಕೆ ತಡೆ..!

ಕರ್ನಾಟಕ, ಕೇರಳ ನಂತರ ಪಶ್ಚಿಮ ಬಂಗಾಳದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಬಿಜೆಪಿ ಸರ್ಕಾರ ಘೋಷಣೆ

ರಾಷ್ಟ್ರೀಯ ಭದ್ರತೆಗೆ ಬೆದರಿಕೆ? ಕಾಕ್ರೋಚ್ ಜನತಾ ಪಕ್ಷದ x ಖಾತೆ ನಿರ್ಬಂಧಕ್ಕೆ ಕಾರಣ! ವರದಿಗಳು

ಸಂಪುಟ ಸಚಿವರೊಂದಿಗಿನ ಸಭೆ ಫಲಪ್ರದವಾಗಿತ್ತು: ಸತತ ನಾಲ್ಕೂವರೆ ಗಂಟೆ ಮೀಟಿಂಗ್ ನಡೆಸಿದ ಪ್ರಧಾನಿ ಮೋದಿ ಹೇಳಿದ್ದೇನು?

ಸಿದ್ದರಾಮಯ್ಯ ಸರಕಾರಕ್ಕೆ 3 ವರ್ಷಗಳು: ಭಾರವಾದ ಹೆಜ್ಜೆಗಳು (ನೇರ ನೋಟ)

SCROLL FOR NEXT